ಹುಣಸಗಿ: ತುಂಡರಿಸಿ ಬಿದ್ದು ವಿದ್ಯುತ್ ತಂತಿ ಸ್ಪರ್ಶಿಸಿ ಯುಕನೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಅರಕೇರಾ (ಜೆ) ಗ್ರಾಮದಲ್ಲಿ ಬುಧವಾರ ನಡೆದಿದೆ. ಶರಣಗೌಡ ಬಸವರಾಜ ವಜ್ಜಲ್ (19) ಮೃತ ದುರ್ದೈವಿ.
Advertisement
ಗ್ರಾಮದ ಭಾಗಮ್ಮ ದೇವಸ್ಥಾನಕ್ಕೆ ಹೋಗಿ ಮರಳಿ ವಾಪಸ್ ಮನೆ ಬರುತ್ತಿರುವಾಗ ಬೆಳಗ್ಗೆ 11 ಗಂಟೆ ಸುಮಾರಿಗೆ ಗೌಡಪ್ಪಗೌಡ ಅವರ ಮನೆಯ ಸಂದಿಯಲ್ಲಿನ ಹೈಪವರ್ ವಿದ್ಯುತ್ ತಂತಿ ತುಂಡರಿಸಿ ಬಿದ್ದಿದೆ, ಅದನ್ನು ಗಮನಿಸದೆ ಯುವಕನ ಎಡಗೈಗೆ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.