ಹುಣಸಗಿ: ಆಕಳ ಮೇಲೆ ಮೊಸಳೆಯೊಂದು ದಾಳಿ ಮಾಡಿದ ಘಟನೆ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದ ಕೆರೆಯಲ್ಲಿ ಗುರುವಾರ ನಡೆದಿದೆ.
Advertisement
ಮಧ್ಯಾಹ್ನ ಸುಮಾರಿಗೆ ಆಕಳು ನೀರು ಕುಡಿಯಲು ಕೆರೆದಂಡೆಗೆ ಹೋಗಿದೆ. ಆಗ ಹೊಂಚುಹಾಕಿ ಕುಳಿತ ಮೊಸಳೆಯು ದಾಳಿ ಮಾಡಿದ್ದು, ಆಕಳು ಪ್ರಾಣಾಪಾಯದಿಂದ ಪಾರಾಗಿದೆ.
ಕಾಲಿಗೆ ಹಾಗೂ ಭುಜದ ಮೇಲೆ ತೀವ್ರ ಹರಿತವಾದ ಗಾಯಗಳಾಗಿವೆ, ಪಶುವೈದ್ಯರಿಂದ ಒಲಿಗೆ ಹಾಕಿ ಚಿಕಿತ್ಸೆ ನೀಡಿದ್ದು, ದ್ಯಾಮನಾಳ ಗ್ರಾಮದ ಅಬ್ದುಲ್ ಜಿಲಾನಿ ಎಂಬವರಿಗೆ ಸೇರಿದ ಆಕಳು ಎನ್ನಲಾಗಿದೆ.
ಇದನ್ನೂ ಓದಿ: Manipur ಕ್ಕೆ ಭೇಟಿ ನೀಡಿ 3 ದಿನ ಅಲ್ಲೇ ಉಳಿಯುತ್ತೇನೆ : ಅಮಿತ್ ಶಾ