Advertisement

ನಿಯಮ ಉಲ್ಲಂಘಿಸಿದವರಿಂದ ಸಂಗ್ರಹಿಸಿದ್ದು ನೂರೆರಡು ಕೋಟಿ!

12:11 PM Dec 20, 2017 | |

ಬೆಂಗಳೂರು: ಸಿಟಿಕಾನ್‌ ಸಿಟಿ ಖ್ಯಾತಿಯ ರಾಜಧಾನಿ ಬೆಂಗಳೂರು, ಬುದ್ಧಿವಂತರೇ ತುಂಬಿರುವ ನಗರ. ಇಲ್ಲಿರುವ ಬಹುತೇಕರು ಸುಶಿಕ್ಷಿತರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ, ಒಳಿತು, ಕೆಡುಕು, ಬೇಕು ಬೇಡಗಳ ಬಗ್ಗೆ ಮಾತ್ರವಲ್ಲದೆ, ಆಡಳಿತದ ತಪ್ಪು-ಒಪ್ಪು, ವ್ಯವಸ್ಥೆಯ ಅವ್ಯವಸ್ಥೆ ಕುರಿತು ಮುಲಾಜಿಲ್ಲದೆ ಬರೆಯುವಷ್ಟು ಪ್ರಜ್ಞಾವಂತರು. ಆದರೆ ಇಲ್ಲಿರುವ ಪ್ರಜ್ಞಾವಂತರಿಗೆ ಸಂಚಾರ ನಿಯಮಗಳನ್ನು ಪಾಲಿಸುವ ಕಿಂಚಿತ್ತು ಪ್ರಜ್ಞೆ ಕೂಡ ಇಲ್ಲ!

Advertisement

ಹೌದು. ಪ್ರಜ್ಞಾವಂತರೇ ಹೆಚ್ಚಾಗಿರುವ ಬೆಂಗಳೂರಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮಿತಿ ಮೀರಿದೆ. ನಗರ ಸಂಚಾರ ಪೊಲೀಸರು ನೀಡುವ ವಾರ್ಷಿಕ ದಂಡ ವಸೂಲಿಯ ಅಂಕಿ, ಅಂಶಗಳನ್ನು ಗಮನಿಸಿದರೆ ನಗರದ ನಾಗರಿಕರು ಇಷ್ಟೊಂದು ಬೇಜವಾಬ್ದಾರಿಯ ಸವಾರರೇ ಅಥವಾ ಚಾಲಕರೇ ಎಂಬ ಅನುಮಾನ ಮೂಡುತ್ತದೆ. ಅಲ್ಲದೆ ದಂಡ ವಸೂಲಿ ಮೊತ್ತ ಕೇಳಿದರೆ ತಣ್ಣಗೆ ಮಲಗಿರುವವರೂ ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ.

ನಗರ ಸಂಚಾರ ಪೊಲೀಸರು 2017ನೇ ಸಾಲಿನಲ್ಲಿ ನಗರಾದ್ಯಂತ ಸಂಚಾರ ನಿಯಮ ಉಲ್ಲಂ ಸಿದ ಪ್ರಕರಣಗಳು ಮತ್ತು ಈ ವೇಳೆ ವಸೂಲಿ ಮಾಡಿದ ದಂಡದ ವಿವರ ನೀಡಿದ್ದಾರೆ. ಅದಂತೆ ಈ ವರ್ಷ ರಾಜಧಾನಿ ಬೆಂಗಳೂರಿನಲ್ಲಿ ಸಂಗ್ರಹಿಸಲಾಗಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತ ಬರೋಬ್ಬರಿ 102 ಕೋಟಿ ರೂ.!

ಬೈಕರ್‌ಗಳೇ ಮುಂದೆ: ನಗರದಲ್ಲಿ ಬೈಕ್‌ ಸವಾರರೇ ಹೆಚ್ಚು ನಿಯಮ ಉಲ್ಲಂ ಸುತ್ತಿರುವುದು ಅಂಕಿ-ಅಂಶಗಳಿಂದ ಪತ್ತೆಯಾಗಿದ್ದು, ಬೈಕ್‌ ವೀಲಿØಂಗ್‌, ಮದ್ಯ ಸೇವಿಸಿ ವಾಹನ ಚಾಲನೆ, ಚಾಲನಾ ಪರವಾನಿಗೆ ಇಲ್ಲದೇ ಬೈಕ್‌ ಚಾಲನೆ ಮಾಡುವುದು ಹಾಗೂ ಅಪ್ರಾಪ್ತರು ಬೈಕ್‌ ಚಾಲನೆ ಮಾಡುವುದು ಹೆಚ್ಚಾಗಿದೆ. ಕಳೆದ ವರ್ಷ 66.97 ಕೋಟಿ ರೂ. ದಂಡ ಸಂಗ್ರಹಿಸಿದ್ದ ನಗರದ ಸಂಚಾರ ಪೊಲೀಸರು, ಪ್ರಸಕ್ತ ವರ್ಷ 102 ಕೋಟಿ ರೂ. ದಂಡ ಸಂಗ್ರಹಿಸಿ  ದಾಖಲೆ ನಿರ್ಮಿಸಿದ್ದಾರೆ.

ಮೋಟರ್‌ ವಾಹನ ಕಾಯ್ದೆ, ಕರ್ನಾಟಕ ಪೊಲೀಸ್‌ ಕಾಯ್ದೆ ಸೇರಿ ವಿವಿಧ ಕಾಯ್ದೆ ಅಡಿಯಲ್ಲಿ ಜನವರಿಯಿಂದ ನವೆಂಬರ್‌ ಅಂತ್ಯದವರೆಗೆ 94,63,133 ಪ್ರಕರಣಗಳನ್ನು ದಾಖಲಿಸಿರುವ ಸಂಚಾರ ಪೊಲೀಸರು, 102 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. 2016ರಲ್ಲಿ 91,80,438 ಪ್ರಕರಣಗಳನ್ನು ದಾಖಲಿಸಿ, 66.97 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. ಹಾಗೆಯೇ 2015ರಲ್ಲಿ 76,26,671 ಪ್ರಕರಣ ದಾಖಲಿಸಿದ್ದು, 70.44 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. 

Advertisement

“ನೋ’ ಇದ್ದಲ್ಲೇ ಪಾರ್ಕಿಂಗ್‌: ನೋ ಪಾರ್ಕಿಂಗ್‌ ಬೋರ್ಡ್‌ ಇರುವ ಸ್ಥಳದಲ್ಲೇ ವಾಹನ ನಿಲುಗಡೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತಕ ವರ್ಷ 20.31 ಲಕ್ಷ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೋಷಯುಕ್ತ ನಂಬರ್‌ ಪ್ಲೇಟ್‌ಗಳ ವಾಹನಗಳ ಮೇಲೆ 97 ಸಾವಿರ ಪ್ರಕರಣ ದಾಖಲಿಸಿದ್ದೇವೆ. ಹಾಗೆಯೇ ಹೆಲ್ಮೆಟ್‌ ಧರಿಸದಿರುವುದು, ನಿರ್ಲಕ್ಷ್ಯದ ಚಾಲನೆ, ಜೀಬ್ರಾಕ್ರಾಸ್‌ ಉಲ್ಲಂಘನೆ, ಸಮವಸ್ತ್ರ ಧರಿಸದಿರುವುದು,

ಮದ್ಯ ಸೇವಿಸಿ ವಾಹನ ಚಾಲನೆ ಸಂಬಂಧದ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು. ಈ ಮೊದಲು ಎಲ್ಲ ನಿಯಮ ಉಲ್ಲಂಘನೆ ದಂಡವನ್ನು ನ್ಯಾಯಾಲಯದಲ್ಲೇ ಪಾವತಿಸಬೇಕಿತ್ತು. ಇದೀಗ ಸ್ಕಿಮ್ಮಿಂಗ್‌ ಸೌಲಭ್ಯವಿರುವ ಪಿಡಿಎ (ಪರ್ಸ್‌ನಲ್‌ ಡಿಜಿಟಲ್‌ ಅಸಿಸ್ಟೆಂಟ್‌) ಮೆಷಿನ್‌ ವಿತರಿಸಿದ್ದು, ಕ್ರಿಡೆಟ್‌, ಡೆಬಿಟ್‌ ಕಾರ್ಡ್‌ಗಳ ಮೂಲಕ ಸ್ಥಳದಲ್ಲೇ ದಂಡ ವಸೂಲಿ ಮಾಡುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ನಿಯಮ ಉಲ್ಲಂ ಸದಂತೆ ಫೇಸ್‌ಬುಕ್‌, ಟ್ವಿಟರ್‌ ಮೂಲಕ ಜಾಗೃತಿ ಮೂಡಿಸಿದರೂ ಸಾರ್ವಜನಿಕರು ನಿಯಮ ಅನುಸರಿಸುತ್ತಿಲ್ಲ. ಮತ್ತೂಂದೆಡೆ ಸಿಬ್ಬಂದಿ ಕೊರತೆಯಿಂದ ದಂಡ ಸಂಗ್ರಹದ ಪ್ರಮಾಣ ಕಡಿಮೆಯಾಗಿದೆ. ಒಟ್ಟು 5,200 ಸಿಬ್ಬಂದಿ ಅಗತ್ಯವಿದ್ದು, 3,200 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1,700 ಮಂದಿ ಸಿಬ್ಬಂದಿ ಕೊರತೆ ಇದೆ .
-ಹಿತೇಂದ್ರ, ಹೆಚ್ಚುವರಿ ಪೊಲೀಸ್‌ ಆಯುಕ್ತ, ಸಂಚಾರ ವಿಭಾಗ

ಮನೆಗೆ ಬಾಗಿಲಲ್ಲೇ 31 ಲಕ್ಷ ರೂ. ವಸೂಲಿ: ನಗರದ ಪ್ರಮುಖ ಭಾಗಗಳಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪತ್ತೆಯಾದ ಪ್ರಕರಣಗಳನ್ನು ದಾಖಲಿಸಿ, ನೋಟಿಸ್‌ ಸಿದ್ಧಪಡಿಸಲಾಗುತ್ತದೆ. ಸಂಚಾರ ಪೊಲೀಸ್‌ ಸಿಬ್ಬಂದಿಯೇ ನೋಟಿಸ್‌ ಹಿಡಿದು ನೇರವಾಗಿ ವಾಹನ ಮಾಲೀಕರ ಮನೆಗೆ ಹೋಗಿ ದಂಡ ಸಂಗ್ರಹಿಸುತ್ತಿದ್ದಾರೆ. ಈ ರೀತಿ ಇದುವರೆಗೂ 25,500 ಪ್ರಕರಣಗಳಲ್ಲಿ 31 ಲಕ್ಷ ರೂ. ದಂಡ ಸಂಗ್ರಹವಾಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ 175ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಅವುಗಳಲ್ಲಿನ ದೃಶ್ಯಾವಳಿಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷ 2.91 ಲಕ್ಷ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪ್ರಾಪ್ತರಿಗೆ ವಾಹನ ಕೊಡಬೇಡಿ ಅಂದ್ರೂ ಕೇಳ್ಳೋದಿಲ್ಲ!: ಪ್ರಸಕ್ತ ವರ್ಷದ ಜುಲೈ ಅಂತ್ಯದವರೆಗಿನ ಅಂಕಿ ಅಂಶಗಳ ಪ್ರಕಾರ 48 ಲಕ್ಷ ದ್ವಿಚಕ್ರ ವಾಹನಗಳು, 14 ಲಕ್ಷಕ್ಕೂ ಅಧಿಕ ಕಾರು ಸೇರಿ ನಗರದಲ್ಲಿ 70,28,067 ವಾಹನಗಳು ಸಂಚರಿಸುತ್ತಿವೆ. ಈ ಪೈಕಿ ನಿಯಮಗಳನ್ನು ಉಲ್ಲಂ ಸಿ ವಾಹನ ಚಾಲನೆ ಮಾಡುವವರನ್ನು ಪತ್ತೆಹಚ್ಚಿ ದಂಡ ವಿಧಿಸುತ್ತಿದ್ದೇವೆ. ಆದರೂ ಅವರಲ್ಲಿ ಜಾಗೃತಿ ಮೂಡುತ್ತಿಲ್ಲ. ಪ್ರಮುಖವಾಗಿ ಅಪ್ರಾಪ್ತರಿಗೆ ವಾಹನಗಳನ್ನು ಚಾಲನೆಗೆ ಕೊಡಬೇಡಿ ಎಂದು ಮನವಿ ಮಾಡಿದರೂ ಪೋಷಕರು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next