Advertisement

ಲಂಕೆಗೆ 100ರ ಸಂಭ್ರಮ

02:10 PM Dec 26, 2021 | Team Udayavani |

ಚಿತ್ರರಂಗ ತುಸು ಚೇತರಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಲೂಸ್‌ ಮಾದ ಯೋಗಿ ಅಭಿನಯದ ಲಂಕೆ ಚಿತ್ರ ಶತದಿನೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಹಳ ದಿನಗಳ ನಂತರ ಕನ್ನಡ ಚಿತ್ರವೊಂದು ಶತದಿನೋತ್ಸವ ಪೂರೈಸಿರುವುದಕ್ಕೆ ಚಿತ್ರತಂಡ ಖುಷಿಯಾಗಿದೆ.

Advertisement

ಲೂಸ್‌ ಮಾದ ಯೋಗಿ ಈ ಚಿತ್ರದಲ್ಲಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರಾಮ್‌ ಪ್ರಸಾದ್‌, ಉತ್ತಮ ಚಿತ್ರ ನಿರ್ದೇಶನ ಮಾಡಿದ ತೃಪ್ತಿಯಿದೆ ಎನ್ನುತ್ತಾರೆ.

ಈ ಚಿತ್ರದಲ್ಲಿ ಅಭಿನಯಿಸಿ, ಬಿಡುಗಡೆಗೂ ಪೂರ್ವದಲ್ಲೇ ಇಹಲೋಕ ತ್ಯಜಿಸಿದ ಸಂಚಾರಿ ವಿಜಯ್‌ ಅವರಿಗೆ ಈ ಗೆಲುವನ್ನು ಅರ್ಪಿಸುವುದಕ್ಕೆ ನಿರ್ದೇಶಕರು ತೀರ್ಮಾನಿಸಿದ್ದಾರೆ. ಜನವರಿ ಮೊದಲ ವಾರದಲ್ಲಿ ಶತದಿನೋತ್ಸವ ಸಮಾರಂಭವನ್ನು ಆಚರಿಸಲು ಸಿದ್ಧತೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next