ಹುಣಸೂರು: ಗ್ರಾಮಾಂತರ ಪೊಲೀಸ್ ಠಾಣೆಯ ಮುಖ್ಯ ಪೇದೆ ಹೃದಯಾಘಾತದಿಂದ ನಿಧನರಾದರು.
ಮೂಲತಃ ಕೆ.ಆರ್.ನಗರ ತಾಲೂಕಿನ ಸಿದ್ದನಕೊಪ್ಪಲು ಗ್ರಾಮದ ಎಸ್.ಅರವಿಂದ (48). ಮೃತಪಟ್ಟವರು. ಮೃತರು ಹೆಂಡತಿ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಸಾಲಿಗ್ರಾಮ ಠಾಣೆಯಿಂದ ಇತ್ತಿಚೆಗಷ್ಟೆ ಹುಣಸೂರು ಗ್ರಾಮಾಂತರ ಠಾಣೆಗೆ ವರ್ಗವಣೆ ಗೊಂಡಿದ್ದರು.
ಮಂಗಳವಾರ ತುರ್ತುವಾಹನ 112 ರಲ್ಲಿ ಹಗಲು ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದೆ.
Related Articles
ತಕ್ಷಣವೇ ನಗರದ ಅಪೊಲೋ ಡೇ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನಿಧನರಾದರು.
ಡಿವೈಎಸ್ ಪಿ ಮಹೇಶ್ ,ಇನ್ಸ್ ಪೆಕ್ಟರ್ ಗಳಾದ ಸೋಮಶೇಖರ್.ದೇವೇಂದ್ರ ಹಾಗೂ ಸಹೊದ್ಯೋಗಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಬುಧವಾರ ಮದ್ಯಾಹ್ನ12 ಕ್ಕೆ ಸ್ವಗ್ರಾಮ ಕೆ ಆರ್ ನಗರ ತಾಲೂಕಿನ ಸಿದ್ದನಕೊಪ್ಪಲಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಜಿಲ್ಲೆಯಲ್ಲಿ ಸಂಭ್ರಮದ ಹೋಳಿಹಬ್ಬ: ಬಣ್ಣಗಳಲ್ಲಿ ಮಿಂದೆದ್ದ ಕಡಲ ಒಡಲು