Advertisement
ಕೊಡಗು ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು ತಾಲೂಕಿನ ಕಲ್ಲಹಳ್ಳಿಯ ಅರಸರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಅಕ್ಕಪಕ್ಕದಲ್ಲಿನ ಸಮಾಧೀಗಳ ಬಗ್ಗೆ ಶಾಸಕ ಮಂಜುನಾಥರಿಂದ ಮಾಹಿತಿ ಪಡೆದುಕೊಂಡ ನಂತರ ಅರಸರ ಸಮಾಧಿಗೆ ಹೂಮಾಲೆ ಹಾಕಿ, ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.
Related Articles
Advertisement
ಜಿಲ್ಲೆಯಾಗಿಸಲು ನನ್ನ ಸಹಮತವಿದೆ: ಸಚಿವ ಸೋಮಶೇಖರ್
ದೇವರಾಜ ಅರಸರ ಶಿಷ್ಯನಾಗಿ ಹುಣಸೂರನ್ನು ಜಿಲ್ಲೆಯಾಗಿಸುವ ನಿಮ್ಮೆಲ್ಲರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಈ ನಾಡಿಗೆ ಅರಸರ ಕೊಡುಗೆ ಅಪಾರವಾಗಿದ್ದು, ಅವರ ಹೆಸರಿನಲ್ಲಿ ಜಿಲ್ಲೆಯಾಗಿಸುವುದು ನನಗೂ ಖುಷಿ ವಿಷಯ, ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಸೂಕ್ತ ಮಾರ್ಗದರ್ಶನ ನೀಡುವೆ. ನಿಮ್ಮ ಆಶಯದಂತೆ ಪಕ್ಷಬೇಧ ಮರೆತು ನಿಮ್ಮೆಲ್ಲರೊಂದಿಗೆ ಸಕಲ ಮಾಹಿತಿಯೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡೋಣ, ಇದಕ್ಕಾಗಿ ನನ್ನ ಕಚೇರಿಯನ್ನೇ ಬಳಸಿಕೊಳ್ಳಲು ಅವಕಾಶ ನೀಡುವೆನೆಂದು ಹರ್ಷೋದ್ಘಾರದ ನಡುವೆ ಘೋಷಿಸಿದರು.
ಇದನ್ನೂ ಓದಿ:ತೆರೆ ಮೇಲೆ ಬರಲಿದೆ ಡ್ರೋನ್ ಪ್ರತಾಪ್ ವಂಚನೆ : ಪ್ರತಾಪ್ ಪಾತ್ರದಲ್ಲಿ ಪ್ರಥಮ್
ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಕೊನೆ ಅವಧಿಯಲ್ಲಿ ಹುಣಸೂರಿಗೆ ನೀಡಿದ್ದ ಎಲ್ಲ ಅನುದಾನವನ್ನು ಹಿಂಪಡೆಯಲಾಗಿದೆಯಲ್ಲಾ ಎಂಬ ಪ್ರಶ್ನೆಗೆ ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಹೊಸ ಮುಖ್ಯಮಂತ್ರಿ ಇದ್ದಾರಲ್ಲ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿ, ಮೂರು ದಿನಗಳ ಹಿಂದಷ್ಟೆ 4 ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದೆಲ್ಲಾ ಎಂದು ಮರು ಪ್ರಶ್ನಿಸಿದ ಸಚಿವರು ಹೊಸ ಮುಖ್ಯಮಂತ್ರಿ ಬೊಮ್ಮಾಯಿಯವರು ಹಣ ಬಿಡುಗಡೆ ಮಾಡುತ್ತಾರೆಂದರೆ, ಎಂ.ಎಲ್.ಸಿ.ವಿಶ್ವನಾಥರು ಶೀಘ್ರ ಚಿಲ್ಕುಂದ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಮುಖ್ಯಮಂತ್ರಿಯೇ ಬರಲಿದ್ದಾರೆಂದು ಪ್ರಕಟಿಸಿದರು.
ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷ ಪ್ರಸನ್ನನಾಯಕ, ಸದಸ್ಯರು. ಜಿ.ಪಂ.ಸಿ.ಇ.ಓ.ಯೋಗೀಶ್, ಇಓ.ಗಿರೀಶ್, ತಹಸೀಲ್ದಾರ್ ಮೋಹನ್‌ಕುಮಾರ್, ಡಿವೈಎಸ್‌ಪಿ ರವಿಪ್ರಸಾದ್, ಬಿ.ಆರ್.ಸಿ.ಸಂತೋಷ್‌ಕುಮಾರ್, ನಗರಸಭೆ ಅಧ್ಯಕ್ಷೆ ಅನುಷಾ, ಸದಸ್ಯ ಹರೀಶ್‌ಕುಮಾರ್, ವಿವೇಕಾನಂದ, ಹುಡಾ ಅಧ್ಯಕ್ಷ ಗಣೇಶಕುಮಾರಸ್ವಾಮಿ, ತಾ.ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ಮಾಜಿ ಅಧ್ಯಕ್ಷ ಹನಗೋಡು ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಯೋಗಾನಂದಕುಮಾರ್, ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್ ಕುಮಾರ್, ಮುಖಂಡರಾದ ಕೆಂಪನಂಜಪ್ಪ, ಬೋಗಪ್ಪ, ಎಚ್.ಪಿ.ಅಮರ್‌ನಾಥ್, ಲೋಕೇಶ್, ಬಸವಲಿಂಗಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.