Advertisement

ಸ್ಥಳದಲ್ಲೇ 102 ಮಂದಿಗೆ ಪಿಂಚಣಿ ಆದೇಶ ಪತ್ರ ವಿತರಣೆ

10:15 PM Oct 08, 2021 | Team Udayavani |

ಹುಣಸೂರು: ತಾಲೂಕಿನ ಹನಗೋಡಿನಲ್ಲಿ ನಡೆದ ಪಿಂಚಣಿ ಮತ್ತು ಕಂದಾಯ ಅದಾಲತ್‌ನಲ್ಲಿ ಸ್ಥಳದಲ್ಲಿಯೇ 102 ಮಂದಿಗೆ ವಿವಿಧ ಯೋಜನೆಯಡಿ ಪಿಂಚಣಿ ಆದೇಶ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ನರಸಿಂಹಯ್ಯ ವಿತರಿಸಿದರು.

Advertisement

ಹನಗೋಡಿನ ನಾಡಕಛೇರಿ ಆವರಣದಲ್ಲಿ ಶುಕ್ರವಾರ ನಡೆದ ಅದಾಲತ್‌ಗೆ ಒಟ್ಟು 179ಮಂದಿ ವಿವಿಧ ಪಿಂಚಣಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ್ದರು. ದಾಖಲೆ ಪರಿಶೀಲಿಸಿ ಸ್ಥಳದಲ್ಲೇ 102 ಮಂದಿಗೆ ಆದೇಶ ಪತ್ರ ವಿತರಿಸಲಾಯಿತು. ನಂತರ ಮಾತನಾಡಿದ ಗ್ರೇಡ್-2 ತಹಸೀಲ್ದಾರ್ ನರಸಿಂಹಯ್ಯ ಸರಕಾರದ ಸೂಚನೆ ಮೇರೆಗೆ ಒಂದೇ ಸೂರಿನಡಿ ವಿವಿಧ ಸಲತ್ತುಗಳನ್ನು ನೀಡಲು ಪಿಂಚಣಿ ಅದಾಲತ್ ಆಯೋಜಿಸಲಾಗಿದೆ. ವೃದ್ದಾಪ್ಯ ಹಾಗೂ ಅಂಗವಿಕಲರ ವೇತನ ಮಂಜೂರಾತಿ ಮಾಡುವ ವೇಳೆ ವೈದ್ಯಕೀಯ ದೃಡೀಕರಣ ಪತ್ರ ನೀಡಲೇಬೇಕು.

ಅಲ್ಲದೆ ವಿಧವಾ ವೇತನ ಪಡೆಯಲು ಮಕ್ಕಳು ಸೇರಿದಂತೆ ಎಲ್ಲಾ ಸವಲತ್ತು ಹೊಂದಿರುವವರಿಗೆ ಪಿಂಚಣಿ ನೀಡುವಾಗುವುದಿಲ್ಲಾ, ಗ್ರಾಮಲೆಕ್ಕಿಗರು ನೀಡುವ ಧೃಡಿಕರಣ ಪತ್ರವೇ ಅಂತಿಮವಾಗಿರುವುರಿಂದ ಅರ್ಜಿದಾರರು ನಾಡಕಛೇರಿಗೆ ಅರ್ಜಿ ಸಲ್ಲಿಸಿದರೆ ಉಳಿದ ದಾಖತಿಗಳನ್ನು ಒದಗಿಸಿಕೊಂಡು ಪಿಂಚಣಿ ಆದೇಶ ಪತ್ರವಿತರಿಸಬೇಕೆಂಬ ಸರಕಾರದ ಸೂಚನೆ ಇದ್ದು ಕಂದಾಯ ಇಲಾಖೆ ಅಧಿಕಾರಿಗಳು ಆದೇಶವನ್ನು ಪಾಲಿಸಬೇಕೆಂದು ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಲಾಗಿದೆ ಎಂದರು.

ಇದನ್ನೂ ಓದಿ:ಮಣ್ಣಿನ ಗೋಡೆ ಕೆಳಗೆ ಮಣ್ಣು ಪಾಲಾದ ಕುಟುಂಬ| ಮೌನ ತಬ್ಬಿತು ನೆಲವ; ಕೊನರಿತು ಮನವ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮುದಗನೂರು ಸುಭಾಷ್ ಮಾತನಾಡಿ ಈ ಬಾರಿ ಅತಿವೃಷ್ಟಿ-ಅನಾವೃಷ್ಟಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಕೃಷಿಗಾಗಿ ಮಾಡಿರುವ ಸಾಲಕ್ಕೆ ಧೃತಿಗೆಡಬೇಡಿ. ಆತ್ಮಹತ್ಯೆ ದಾರಿ ಹಿಡಿಯಬೇಡಿ. ಆತ್ಮಹತ್ಯೆಯಿಂದ ನಿಮ್ಮ ಕುಟುಂಬದವರು ಬೀದಿ ಪಾಲಾಗುತ್ತಾರೆ. ಬಿತ್ತಿದ ಬೆಳೆ ಕೈ ಸೇರದೆ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಲು ಕೃಷಿ-ಕಂದಾಯ ಇಲಾಖೆ ಅಧಿಕಾರಿಗಳು ಸಮಗ್ರ ವರದಿ ಸಲ್ಲಿಸಬೇಕೆಂದರು.

Advertisement

ಕಾರ್ಯಕ್ರಮದಲ್ಲಿ ಹನಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರ್‌ಜಾನ್, ತಾ.ಪಂ.ಮಾಜಿ ಸದಸ್ಯ ಗಣಪತಿ ಮಾತನಾಡಿದರು. ಹನಗೋಡು ನಾಡಕಚೇರಿಯ ಉಪತಹಸಿಲ್ದಾರ್ ಚಲುವರಾಜ್, ಆರ್.ಐ.ಪ್ರಶಾಂತ್‌ರಾಜೇ ಅರಸ್, ಗ್ರಾಮ ಲೆಕ್ಕಿಗರಾದ ಮಹದೇವ್ , ಸುಮಂತ್, ಶಿವಕುಮಾರ್, ಮೂರ್ತಿ, ಸೀಮಾಭಾನು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು, ರೈತ ಮುಖಂಡರು ಹಾಗೂ ವಿವಿಧ ಪಿಂಚಿಣಿ ಫಲಾನುಭವಿಗಳು ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next