Advertisement

ವನ್ಯಜೀವಿ ಸಂಪತ್ತನ್ನು ರಕ್ಷಿಸುವ ಕೆಲಸ ಕೇವಲ ಇಲಾಖೆಯದ್ದಲ್ಲ: ಎಚ್.ಪಾಟೀಲ್‌

04:48 PM Sep 12, 2021 | Team Udayavani |

ಹುಣಸೂರು: ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ರಕ್ಷಿಸುವ ಕೆಲಸ ಕೇವಲ ಅರಣ್ಯ ಇಲಾಖೆ ಮಾತ್ರವಲ್ಲ ದೇಶದ ಎಲ್ಲಾ ಪ್ರಜೆಗಳದ್ದಾಗಿದ್ದರೂ ಅದೇಕೋ ಅರಣ್ಯವೆಂದರೆ ಇಲಾಖೆಯದ್ದೆಂದು ಎಲ್ಲರೂ ಉಡಾಫೆ ಮಾಡಿದ್ದರಿಂದ ಇಂದು ಬಾರೀ ಬೆಲೆ ತೆರುವಂತಾಗಿದೆ ಎಂದು ಎಂಟನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮೋಹನ್‌ಕುಮಾರ್.ಎಚ್.ಪಾಟೀಲ್‌ರವರು ಬೇಸರಿಸಿದರು.

Advertisement

ಅರಣ್ಯ ಇಲಾಖೆವತಿಯಿಂದ ನಾಗರಹೊಳೆ  ರಾಷ್ಟ್ರೀಯ ಉದ್ಯಾನವನದ ಹುಣಸೂರು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಭೂಮಿಯ ಒಟ್ಟು ವಿಸ್ತೀರ್ಣದಲ್ಲಿ ಶೇ.33 ಭಾಗ ಅರಣ್ಯವಿರಬೇಕಿದ್ದು, ಪ್ರಸ್ತುತ ಕೇವಲ ಶೆ.21ರ ಪ್ರಮಾಣದಲ್ಲಿ ಅರಣ್ಯವಿದೆ. ವನ್ಯ ಸಂಪತ್ತು ರಕ್ಷಣೆಯಲ್ಲಿ ಅರಣ್ಯ ಇಲಾಖೆ ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ. ಇವರಿಗೆ ನಾಡಿನ ಮಂದಿ ಅರಣ್ಯ ಇಲಾಖೆಯ ವಿವಿಧ ಯೋಜನೆಗಳನ್ನು ಬಳಸಿಕೊಂಡು ಅರಣ್ಯವೃದ್ದಿಗೆ ಕೈಗೂಡಿಸಬೇಕಿದೆ, ಆದರೆ ಎಲ್ಲರೂ ಅರಣ್ಯ ಉಳಿಸುವ, ಬೆಳೆಸುವ ಕಾರ್ಯ ಇಲಾಖೆಯದ್ದೆಂದು ಕೈಚೆಲ್ಲಿದ್ದರಿಂದ ಅವಘಡಗಳು ಸಂಭವಿಸುತ್ತಿರುವುದು ನಮ್ಮ ಮುಂದಿದೆ. ಇನ್ನಾದರೂ ವನ್ಯಸಂಪತ್ತನ್ನು ಸಂರಕ್ಷಿಸಲು ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ನಾಗರಹೊಳೆ ಮುಖ್ಯಸ್ಥ ಡಿ.ಮಹೇಶ್‌ಕುಮಾರ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಅರಣ್ಯನಾಶ, ಹವಾಮಾನ ಬದಲಾವಣೆಯಿಂದಾಗಿ ಜೀವರಾಶಿ ಕಣ್ಮರೆಯಾಗುತ್ತಿದೆ. ಕೋವಿಡ್19ರ ನಡುವೆಯೇ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ದೇಶದ ಅರಣ್ಯ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ನಾಗರಹೊಳೆಯಲ್ಲಿ ಆನೆದಾಳಿಗೆ ಸಿಲುಕಿ ಹುತಾತ್ಮರಾದ ಮಣಿಕಂಠನ್ ನಮಗೆಲ್ಲರಿಗೆ ಸದಾಕಾಲ ಸೂರ್ತಿದಾಯಕರಾಗಿದ್ದಾರೆ. ಅವರಂತೆ ಅರಣ್ಯ ರಕ್ಷಣೆಯಲ್ಲಿ ಅನೇಕ ಅರಣ್ಯ ಸಿಬ್ಬಂದಿಗಳು ತಮ್ಮ ಪ್ರಾಣ ಕಳೆದುಕೊಂಡು ಹುತಾತ್ಮರಾಗಿದ್ದಾರೆ. ಅವರ ಸೇವೆಯನ್ನು ಸ್ಮರಿಸೋಣವೆಂದರು.

ಇದನ್ನೂ ಓದಿ:ಪಿರಿಯಾಪಟ್ಟಣಕ್ಕೆ ಸಂಸದ ಪ್ರತಾಪ್ ಸಿಂಹ ಕೊಡುಗೆ ಏನು…? ಕಾಂಗ್ರೆಸ್ ಪ್ರಶ್ನೆ

ಎ.ಸಿ.ಎಫ್.ಸತೀಶ್ ಮಾತನಾಡಿ ಕಾಡುಗಳ್ಳ ವೀರಪ್ಪನ್‌ನಿಂದ 1991ರ ನ.10ರಂದು ಡಿ.ಸಿ.ಎಫ್.ಶ್ರೀನಿವಾಸನ್ ಹತ್ಯೆಯಾದ ದಿನವನ್ನು ರಾಜ್ಯದಲ್ಲಿ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿತ್ತು, ಆದರೆ 1730, ಸೆ.11 ರಂದು ರಾಜಸ್ಥಾನದ ಜೋಧ್‌ಪುರದ ಮಹಾರಾಜ ಅಭಯಸಿಂಗ್ ತನ್ನ ಹೊಸ ಅರಮನೆ ನಿರ್ಮಾಣಕ್ಕಾಗಿ ಸೈನಿಕರು ಕೆಜರಾಲಿ ಎಂಬ ಗ್ರಾಮದಲ್ಲಿ ಬನ್ನಿ(ಕೆಜರಿ) ಮರಗಳನ್ನು ಕಡಿಯಲು ಹೊರತಾಗ ಅದನ್ನು ವಿರೋಧಿಸಿದ 360 ಬುಡಕಟ್ಟು ಮಂದಿ ಅರಣ್ಯರಕ್ಷಣೆಗಾಗಿ ಪ್ರಾಣ ತ್ಯಾಗಮಾಡಿ ರಕ್ಷಣೆ ಮಾಡಿದ ಧ್ಯೋತಕವಾಗಿ ಕೇಂದ್ರ ಸರಕಾರ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲು ಆದೇಶಿಸಿದ್ದು, ಆ ದಿನವನ್ನು ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಗೆ ಪ್ರಾಣಕೊಟ್ಟ ವೀರ ಅರಣ್ಯ ಅಕಾರಿಗಳು,ಸಿಬ್ಬಂದಿಗಳ ಸ್ಮರಿಸುವ ದಿನವನ್ನಾಗಿಸಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವರ್ಣಿತ್‌ನೇಗಿ, ಹುಣಸೂರು ಪ್ರಾದೇಶಿಕ ವಿಭಾಗದ ಡಿಸಿಎಫ್ ಡಾ.ಪ್ರಶಾಂತ್ ಕುಮಾರ್, ಪೊಲೀಸ್ ಉಪಾಧೀಕ್ಷಕ ಪಿ,ರವಿಪ್ರಸಾದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್, ಆರ್‌ಎಫ್‌ಓ. ಕಿರಣ್‌ಕುಮಾರ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next