ಹುಣಸೂರು: ಮಹಿಳೆಯೊಬ್ಬರು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಯುವಕನೊರ್ವನ ವಿರುದ್ದ ಶಂಕಿಸಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಹೆದರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ಗಾವಡಗೆರೆ ಹೋಬಳಿಯ ಅಗ್ರಹಾರ ಗ್ರಾಮದ ಶಿವೇಗೌಡರ ಪುತ್ರ ರಾಘವೇಂದ್ರ (35) ಆತ್ಮಹತ್ಯೆಗೆ ಶರಣಾದಾತ, ಈತ ಅವಿವಾಹಿತ ಕೃಷಿಕ.
ಅಗ್ರಹಾರದಕ್ಕೆ ಸಮೀಪದ ಕಟ್ಟೆಮಳಲವಾಡಕೊಪ್ಪಲಿನ ಮಹಿಳೆಯೊಬ್ಬರು ಕಾಣೆಯಾಗಿದ್ದರು, ಈಕೆಯನ್ನು ರಾಘವೇಂದ್ರ ಕರೆದೊಯ್ದಿದ್ದಾನೆಂದು ಕುಟುಂಬದವರು ಬಿಳಿಕೆರೆ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ವಿಚಾರಣೆ ನಡೆಸಿ ಕಳುಹಿಸಿದ್ದರು. ಈತನ ಅಜ್ಜಿಯನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದರು. ಗ್ರಾಮಸ್ಥರು, ಕುಟುಂಬದವರು ಸಹ ಈತನ ವಿರುದ್ದ ಮಾತನಾಡುತ್ತಿದ್ದರು. ಇದರಿಂದ ನನ್ನ ಸಹೋದರ ಭಯ, ಅವಮಾನಿತನಾಗಿ ನಮ್ಮ ಜಮೀನಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಸಹೋದರ ನಾಗೇಂದ್ರ ದೂರು ನೀಡಿದ್ದಾರೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೈ ಕಡಿದು ಹಾಕುವೆ : ಡಿಎಂಕೆ ಹಿರಿಯ ನಾಯಕನ ವಿವಾದಾತ್ಮಕ ಹೇಳಿಕೆ