Advertisement

ಹುಣಸೂರಲ್ಲಿ ಮತಾಂತರ ದೂರು ಪ್ರತಿದೂರು ದಾಖಲು

08:50 PM Jan 11, 2023 | Team Udayavani |

ಹುಣಸೂರು: ನಮ್ಮ ಕುಟುಂಬವನ್ನು ಬಲವಂತವಾಗಿ ಮತಾಂತರ ಮಾಡಲು ಪ್ರೇರೇಪಿಸುತ್ತಿದ್ದಾರೆಂದು ಆರೋಪಿಸಿ ಪ್ರಕಾಶ ನಾಯಕ ಎಂಬುವವರು ಇಬ್ಬರು ಪಾಸ್ಟರ್‌ಗಳ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

Advertisement

ಹುಣಸೂರು ನಗರಕ್ಕೆ ಸಮೀಪದ ಗೋವಿಂದನಹಳ್ಳಿಯ ಪುಟ್ಟನಾಯಕರ ಪುತ್ರ ಪ್ರಕಾಶನಾಯಕ ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಜ.೧೦ರಂದು ನಮ್ಮ ಮನೆಗೆ ಬಂದಿದ್ದ ಸ್ಯಾಮ್ಯುವೆಲ್ ಹಾಗೂ ಪ್ರತಾಪ್‌ರವರು ನೀವು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಕೊಳ್ಳಿ, ಹಣದ ಆಮಿಷ ತೋರಿಸಿದ್ದಲ್ಲದೆ. ಹಿಂದೂ ಧರ್ಮದ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದು, ನಗರದ ಪಿ.ಐ.ಕೆ. ಕಲ್ಯಾಣ ಮಂಟಪದ ಬಳಿಯ ಕ್ರಿಶ್ಚಿಯನ್ ಚರ್ಚ್ ಪ್ರತಿ ಭಾನುವಾರ ಬಂದು ಪ್ರಾರ್ಥನೆ ಮಾಡುವಂತೆ ಒತ್ತಾಯಿಸಿದ್ದಾರೆ, ಇವರುಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು, ನೂತನ ಮತಾಂತರ ಕಾಯ್ದೆಯನ್ವಯ ಪ್ರಕರಣ ದಾಖಲಿಸುವಂತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಪ್ರತಿದೂರು:
ಈ ನಡುವೆ ತಾವು ಗೋವಿಂದನಹಳ್ಳಿ ಗ್ರಾಮದ ಮನೆಯೊಂದರ ಪೂಜೆಗೆ ತೆರಳಿ ವಾಪಸ್ ನಗರದತ್ತ ಬರುತ್ತಿದ್ದ ವೇಳೆ ಪ್ರಕಾಶ ನಾಯಕ ಸೇರಿದಂತೆ ಕೆಲವರು ನಮ್ಮ ಮೇಲೆ ಹಲ್ಲೆ ನಡೆಸಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪ್ರತಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಚಾರಣೆ ನಂತರ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಣಸೂರು: ಮನೆಯಿಂದ ಹೊರ ಹೋದ ಗೃಹಿಣಿ ನಾಪತ್ತೆ… ಪತಿಯಿಂದ ದೂರು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next