ಹುಣಸೂರು: ನಾಗರಹೊಳೆ ಉದ್ಯಾನವನದಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಿದ್ದು, ರಾತ್ರಿ ಬದಲಿಗೆ ಹಗಲು ವೇಳೆ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಸುವಂತೆ ಕಡೇಮನುಗನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಮನವಿ ಮಾಡಿದರು.
ತಾಲೂಕಿನ ಹನಗೋಡು ಹೋಬಳಿಯ ಕಡೇಮನಹಳ್ಳಿ ಗ್ರಾಮದಲ್ಲಿ ಹುಣಸೂರು ಉಪ ವಿಭಾಗದ ವತಿಯಿಂದ ಚೆಸ್ಕಾಂ ವತಿಯಿಂದ ಆಯೋಜಿಸಿದ್ದ ವಿದ್ಯುತ್ ಅದಾಲತ್‌ನಲ್ಲಿ ಮಾತನಾಡಿದ ಅನೇಕ ರೈತರು ಕಾಡಂಚಿನ ಗ್ರಾಮಗಳಲ್ಲಿ ಸಂಜೆ 6 ಗಂಟೆಗೆ ವಿದ್ಯುತ್ ಪೂರೈಸುತ್ತಿರುವುದ್ದು, ವನ್ಯಜೀವಿಗಳ ಹಾವಳಿಯಿಂದ ಜಮೀನಿಗೆ ಹೋಗದಂತಾಗಿದ್ದು, ಹಗಲು ವೇಳೆಯೇ ವಿದ್ಯುತ್ ಪೂರೈಸಬೇಕೆಂಬ ಬೇಡಿಕೆಗೆ ಇದು ನಿಗಮದ ವ್ಯಾಪ್ತಿಗೆ ಬರಲಿದೆ. ನಿಗಮಕ್ಕೆ ಮಾಹಿತಿ ನೀಡಲಾಗುವುದೆಂದು ಎಇಇ ಸಿದ್ದಪ್ಪ ತಿಳಿಸಿದರು.
ನಿರಂತರ ಜ್ಯೋತಿಗೆ ಬೇಡಿಕೆ:
ಕಡೇಮನುಗನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕಿಕ್ಕೇರಿಕಟ್ಟೆ, ಹೆಬ್ಬಾಳ, ಬೆಕ್ಕೆಶೆಡ್ ಗ್ರಾಮಗಳಲ್ಲಿ ಅವರವರ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದು, ನಿರಂತರ ಜ್ಯೋತಿ ಸಂಪರ್ಕ ನೀಡಬೇಕೆಂಬ ಗ್ರಾಮಸ್ಥರ ಒತ್ತಾಯಕ್ಕೆ ತಾಲೂಕಿನಲ್ಲಿ ಇದೇ ಮಾದರಿಯ 780 ಮನೆಗಳಿಗೆ ನಿರಂತರ ಜ್ಯೋತಿ ಸೌಲಭ್ಯ ಕಲ್ಪಿಸಬೇಕಿದ್ದು, ಈ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ಸಿಕ್ಕ ಕೂಡಲೆ ಸೌಲಭ್ಯ ಕಲ್ಪಿಸಲಾಗುವುದೆಂದು ಭರವಸೆ ಇತ್ತರು.
ಲೋ ವೋಲ್ಟೇಜ್ ಸರಿಪಡಿಸಿ:
ಕಿಕ್ಕೇರಿಕಟ್ಟೆ ಭಾಗದಲ್ಲಿ ನಿತ್ಯವೂ ಲೋ ವೋಲ್ಟೇಜ್‌ನಿಂದಾಗಿ ತೊಂದರೆಯಾಗುತ್ತಿದ್ದು, ವೋಲ್ಟೇಜ್ ಸರಿಪಡಿಸುವಂತೆ ರೈತರು ಬೇಡಿಕೆ ಇಟ್ಟರು. ಈ ಬಗ್ಗೆ ಕ್ರಮವಹಿಸುವುದಾಗಿ ಎಇಇ ಭರವಸೆ ಇತ್ತರು.
Related Articles
ಪ್ರತಿಯೊಬ್ಬ ವ್ಯಕ್ತಿಗೂ ಇಲಾಖೆವತಿಯಿಂದ ಸಿಗುವ ಸವಲತ್ತುಗಳನ್ನು ತಲುಪಿಸಲು ಅನುಕೂಲಕರವಾಗಿದ್ದು, ಕಾಡಂಚಿನ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಇಲಾಖೆಯ ಸಿಬ್ಬಂದಿಗಳು ಬಗೆಹರಿಸುತ್ತಿದ್ದು, ಇಲಾಖೆಯೊಂದಿಗೆ ರೈತರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿ, ಸರಕಾರ ಅಮೃತ್ ಜ್ಯೋತಿಯೋಜನೆ ಜಾರಿಗೊಳಿಸಿದ್ದು, ಪರಿಶಿಷ್ಟ ಜಾತಿ-ಪಂಗಡಗಳ ಮನೆಗಳಿಗೆ 75 ಯುನಿಟ್ ವರೆಗೆ ಉಚಿತವಾಗಿ ವಿದ್ಯುತ್ ಪೂರೈಸಲಾಗುವುದು, ಫಲಾನುಭವಿಗಳು ಸೂಕ್ತ ದಾಖಲೆ ಸಲ್ಲಿಸಬೇಕೆಂದು ಮನವಿ ಮಾಡಿ, ಯೋಜನೆ ಕುರಿತು ಹಳ್ಳಿಗಳಲ್ಲಿ ಕರಪತ್ರದ ಮೂಲಕ ಪ್ರಚುರ ಪಡಿಸುವಂತೆ ಸಿಬ್ಬಂದಿಗಳಿಗೆ ಎಇಇ ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಇಂಜಿನಿಯರ್ ವಿಕೃತ್, ಜೆ.ಇ.ಗಳಾದ ವಿನಯ್, ಮೋಹನ್‌ಕುಮಾರ್, ರಂಜನ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.