Advertisement

ತಾವು ಗಳಿಸಿದ್ದರಲ್ಲಿ, ಉಳಿಸಿ ಅಮ್ಮನ ಹೆಸರಲ್ಲಿ ಕೊಡುಗೆ ನೀಡುವ ಸತ್ಯಾನಂದರಾವ್

02:43 PM Sep 14, 2022 | Team Udayavani |

ಹುಣಸೂರು : 9 ದಶಕಗಳ ಹಿಂದೆ ತಮ್ಮ ತಾಯಿ ವ್ಯಾಸಂಗ ಮಾಡಿದ ಹುಣಸೂರಿನ ಪ್ರಾಥಮಿಕ ಮತ್ತು ಫ್ರೌಢಶಾಲೆಗೆ ಅವರ ಮಕ್ಕಳು ಹಲವಾರು ಕೊಡುಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

Advertisement

ಹುಣಸೂರಿನ ಬ್ರಾಹ್ಮಣರ ಬಡಾವಣೆಯಲ್ಲಿ ವಾಸವಿದ್ದ ನಾಗಲಕ್ಷ್ಮಮ್ಮನವರು 90 ವರ್ಷಗಳ ಹಿಂದೆ ಇಲ್ಲಿನ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಅವರ ಮಕ್ಕಳು ಉನ್ನತ ವ್ಯಾಸಂಗ ಪಡೆದು ವಿವಿಧೆಡೆ ಉದ್ಯಮಿಗಳಾಗಿದ್ದು, ಇದೀಗ ಅವರ ಮಕ್ಕಳು ಅಮ್ಮ ನಾಗಲಕ್ಷ್ಮಮ್ಮನವರ ಹೆಸರಿನಲ್ಲಿ ನರಸೀಪುರ ದೊಡ್ಡಮನೆ ಸುಜನ ಚಾರಿಟೇಬಲ್ ಟ್ರಸ್ಟ್ ರಚಿಸಿಕೊಂಡು ಹಲವಾರು ಶೈಕ್ಷಣಿಕ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ.

ಶಾಲೆಗಳಿಗೆ ಕೊಡುಗೆ:
ದಿ.ನಾಗಲಕ್ಷ್ಮಮ್ಮನವರ ಸ್ಮರಣಾರ್ಥ ಈ ಬಾರಿ ಬಾಲಕಿಯರ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ವಿದ್ಯುತ್ ಚಾಲಿತ ಪ್ಯಾಡ್ ಬರ್ನಿಂಗ್ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಲ್ಲದೆ, ೮ನೇ ತರಗತಿಯ ೬, ೯ ಮತ್ತು ೧೦ನೇ ತರಗತಿಯ ತಲಾ ಮೂರು ಸೇರಿದಂತೆ ೧೨ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಮಾಹೆಯಾನ ೫೦೦ರೂಗಳ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ. ಹಿಂದೆ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗೆ ಕೊಳವೆಬಾವಿ ಹಾಕಿಸಿ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನದ ಉಪಕರಣಗಳನ್ನು ತಂದು ಪ್ರಾತ್ಯಕ್ಷತೆ ಮೂಲಕ ವಿವಿಧ ಪ್ರಯೋಗಗಳನ್ನು ಮಾಡಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಹೆಚ್ಚು ಆಸಕ್ತಿ ಬೆಳೆಸಿ ಉತ್ತಮ ಅಂಕ ಪಡೆಯಲು ಸಹಕಾರಿಯಾಗಿದ್ದಾರೆ.

ಬಿಇಓ ಶ್ಲಾಘನೆ:
ಟ್ರಸ್ಟ್ ಕೊಡುಗೆಯಾಗಿ ನೀಡಿದ ಪ್ಯಾಡ್ ಬರ್ನಿಂಗ್ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಬಿಇಓ ರೇವಣ್ಣರವರು ತಾಯಿ ಓದಿದ ಶಾಲೆಗೆ ನರಸೀಪುರದ ದೊಡ್ಡಮನೆ ಸುಜನ ಚಾರಿಟಬಲ್ ಟ್ರಸ್ಟ್ ಮೂಲಕ ಅವರ ಮಕ್ಕಳು ಸರಕಾರಿ ಶಾಲೆಗೆ ಅನೇಕ ರೀತಿಯಲ್ಲಿ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯ, ಇತರರಿಗೂ ಮಾದರಿಯೂ ಹೌದೆಂದ ಅವರು ಶಾಲೆಯ ಶಿಕ್ಷಕರಿಗಾಗಿ ಶೌಚಾಲಯ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ನಾಗಲಕ್ಷ್ಮಮ್ಮರ ಪುತ್ರ, ಟ್ರಸ್ಟಿ ಎಂ.ಸತ್ಯಾನಂದರಾವ್ ನನ್ನ ಅಮ್ಮನಿಂದಾಗಿ ಇಂದು ಉದ್ಯಮಿಯಾಗಿ ಬೆಳೆದಿದ್ದೇನೆ, ಅಮ್ಮ ವಿದ್ಯೆ ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದಾಗಿ ಈ ಕೊಡುಗೆ ನೀಡಿದ್ದೇವೆ. ಮುಂದೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.೯೦ಕ್ಕೂ ಹೆಚ್ಚು ಅಂಕ ಪಡೆವ ಈ ಶಾಲೆಯ ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್‌ಶಿಪ್ ನೀಡುವ ಹಾಗೂ ಶಾಲೆಯ ಪ್ರಗತಿಗೆ ನೆರವಾಗುತ್ತೇವೆಂದು ಪ್ರಕಟಿಸಿದರು.

Advertisement

ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆಯ ಎಲ್ಲ ಶಿಕ್ಷಕರಿಗೆ ಟ್ರಸ್ಟ್ವತಿಯಿಂದ ಗೌರವಿಸಲಾಯಿತು. ಈ ವೇಳೆ ಉಪ ಪ್ರಾಚಾರ್ಯರಾದ ಬಿ.ಎನ್.ಗೀತಾ, ಟ್ರಸ್ಟ್ನ ಸುಜಾತಾರಾವ್, ಎನ್.ಎಸ್.ಪ್ರಕಾಶ್, ಎನ್.ಆರ್.ಕುಮಾರ್ ಹಾಗೂ ಮೀನಾಕ್ಷಿಕುಮಾರ್, ಶಿಕ್ಷಕವೃಂದ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next