ಹುಣಸೂರು: 30 ವರ್ಷಗಳಿಂದ ಬರಿದಾಗಿದ್ದ ಹುಣಸೂರು ತಾಲೂಕಿನ ಬಿಳಿಕೆರೆ ಕೆರೆಗೆ ಏತ ನೀರಾವರಿ ಮೂಲಕ ನೀರು ತುಂಬಿಸಿ ರೈತರಿಗೆ ನೆರವಾದ ಜನ ನಾಯಕನ ಮೊಗದಲ್ಲಿ ಸಂತಸದ ಕ್ಷಣ.
ಹೌದು ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275 ಪಕ್ಕದಲ್ಲೇ ಇದ್ದ ಬಿಳಿಕೆರೆ ಕೆರೆ ಕೆರೆ ಬದಿದಾಗಿದ್ದರಿಂದ ಬಿಳಿಕೆರೆ ಸೇರಿದಂತೆ ಸುತ್ತಮುತ್ತಲಿನವರು ಕಸ ಸುರಿಯುತ್ತಿದ್ದರು.
ಕೆರೆ ಅಂಗಳ ಕಸದ ರಾಶಿಯಾಗಿ ಮಾರ್ಪಾಡಾಗಿತ್ತಲ್ಲದೆ ಸಾಮಾಜಿಕ ಅರಣ್ಯ ವಿಭಾಗದಿಂದ ಬರಿದಾಗಿದ್ದ ಕೆರೆ ಅಂಗಳದಲ್ಲಿ ಸಸಿ ನೆಟ್ಟರು. ನೆಟ್ಟಿದ್ದ ಸಸಿಗಳು ಸಹದೊಡ್ಡ ಮರಗಳಾಗಿದ್ದವು.
ಮಳೆಗಾಲದಲ್ಲಿ ಅಪ್ಲ ಪ್ರಮಾಣದ ನೀರು ಕೆರೆ ಸೇರುತ್ತಿದ್ದಾದರೂ ಕೆಲವೇ ದಿನದಲ್ಲಿ ಅದೂಸಹ ಬರಿದಾಗುತ್ತಿತ್ತು. ಇದನ್ನು ಮನಗಂಡ ಶಾಸಕ ಎಚ್.ಪಿ.ಮಂಜುನಾಥ್ ಕೆರೆಗೆ ನೀರು ತುಂಬಿಸಿ .ಈ ಭಾಗದ ಜನರ ಬದುಕು ಹಸನಾಗಿಸಲು ಟೊಂಕ ಕಟ್ಟಿ ನೀರಾವರಿ ಇಲಾಖೆ ಮೂಲಕ ಕ್ರಿಯಾಯೋಜನೆ ರೂಪಿಸಿ.ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿನವರ ಗಮನಕ್ಕೆ ತಂದು 10 ಕೋಟಿ ರೂ ವೆಚ್ಚದಲ್ಲಿ ಲಕ್ಷ್ಮಣತೀರ್ಥ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಬಿಳಿಕೆರೆ ಕೆರೆ ಮಾತ್ರವಲ್ಲದೆ ಮಲ್ಲಿನಾಥಪುರ. ಜೀನಹಳ್ಳಿ ಹಾಗೂ ಹಳೇ ಬೀಡು ಕೆರೆಗೆ ನೀರು ತುಂಬಿಸುವ ಯೋಜನೆ 2017 ರಲ್ಲಿ ಸಾಕಾರ ಗೊಂಡು ಕೆರೆ ತುಂಬಿಸಲಾಯಿತು.
ಕೆಲವರು ಅಯ್ಯೋ ಈ ಕೆರೆ ತುಂಬುತ್ತದೆಯೇ . ಕೆರೆ ತುಂಬಿದರೂ ನೀರು ನಿಲ್ಲುತ್ತಾ. ಬರೀ ಹಣ ಖರ್ಚಾಗುತ್ತದೆಂದು ಭಾವಿಸಿದ್ದರು. ಆದರೆ ಕೆರೆ ತುಂಬಿನ ನಂತರ ಸುತ್ತಮುತ್ತಲಿನ ಸುಮಾರು 8 ಕಿ.ಮೀ ವ್ಯಾಪ್ತಿಯ ಗ್ರಾಮಗಳ್ಲಿ ಹತ್ತಾರು ವರ್ಷಗಳಿಂದ ಬರಿದಾಗಿದ್ದ ಬೋರ್ ವೆಲ್ ಗಳಲ್ಲಿ ಅತರ್ಜಲ ವೃದ್ದಿಸ ತೊಡಗಿತು. ಕೆಲವು ಬೋರ್ ವೆಲ್ ಗಳಲ್ಲಿ ಹಗಲು ರಾತ್ರಿ ಎನ್ನದೆ ನೀರು ಉಕ್ಕಿ ಇಂದಿಗೂ ಹರಿಯುತ್ತಲೇ ಇದೆ.
Related Articles
ಸುತ್ತಮುತ್ತಲಿನಲ್ಲಿ ಒಣಗಿಹೋಗಿದ್ದ ತೆಂಗು. ಮಾವಿನ ತೋಟಗಳು ಇದೀಗ ನಳ ನಳಿಸುತ್ತಿವೆ. ದೂರದ ಊರಿಗೆ ಕೂಲಿಗೆ ಹೋಗುತ್ತಿದ್ದ ರೈತರು ಇದೀಗ ತಮ್ಮ ಜಮೀನಿನಲ್ಲೇ ದುಡಿಮೆ ಮಾಡಿ ಬದುಕು ಕಟ್ಟಿ ಕೊಂಡಿದ್ದಾರೆ. ಈ ಕೆರೆಯ ಸುತ್ತಮುತ್ತಲಿನ 8-10 ಕಿ.ಮೀ ವ್ಯಾಪ್ತಿಯ ಗ್ರಾಮಗಳ ರೈತರ ಬದುಕು ಹಸನಾಗಿದೆಯಲ್ಲದೆ ಸಮೃದ್ದ ಕುಡಿಯುವ ನೀರು ಸರಬರಾಜಾಗುತ್ತಿದೆ. ಹಳ್ಳಿಗರು ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದರೆ. ಶಾಸಕ ಮಂಜುನಾಥರು ತಮ್ಮ ಶಾಸಕತ್ವದ ಅವಧಿಯಲ್ಲಾದ ಈ ಕಾರ್ಯ ದಿಂದ ಜನರಿಗೆ ನೆರವಾದ ತೃಪ್ತಿ ಸಿಕ್ಕಿದೆ.
ಈ ಭಾಗದ ಜನರ ಪಾಲಿಗೆ ಶಾಸಕ ಎಚ್.ಪಿ.ಮಂಜುನಾಥ್ ಆಧುನಿಕ ಭಗೀರಥ ರೆನಿಸಿದ್ದಾರೆ.