ಹುಣಸೂರು: ರೈತನೋರ್ವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿ ತಿಂದು ಹಾಕಿ ಹೋಗಿರುವ ಘಟನೆ ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಊರ ಕುಪ್ಪೆ ಬಡಾವಣೆಯ ದೇವರಾಜು ಎಂಬುವರಿಗೆ ಸೇರಿದ ಕುರಿಗಳನ್ನು ತನ್ನ ಜಮೀನಿನಲ್ಲಿರುವ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿತ್ತು ಮಧ್ಯರಾತ್ರಿ ಚಿರತೆಯನ್ನ ಕಂಡ ನಾಯಿಗಳು ಬೊಗಳುತ್ತಿರುವ ಶಬ್ದಕ್ಕೆ ಎದ್ದು ರೈತ ಕಿಟಕಿಯಿಂದ ನೋಡಿದಾಗ ಚಿರತೆ ಕುರಿಯನ್ನು ತಿನ್ನುತ್ತಿರುವುದನ್ನು ಕಂಡು ಗಾಬರಿಗೊಂಡ ರೈತ ಹೊರ ಬರಲಿಲ್ಲ ಒಟ್ಟು ಎರಡು ಕುರಿಗಳಲ್ಲಿ ಒಂದು ಕುರಿಯನ್ನು ತಿಂದು ಮತ್ತೊಂದು ಕುರಿಗೆ ಗಾಯಗೊಳಿಸಿದೆ ಬೆಳಿಗ್ಗೆ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಸ್ಥಳ ಮಹಾಜರು ಮಾಡಿಕೊಂಡು ನಂತರಪಶುವೈದ್ಯಾಧಿಕಾರಿಗಳಿಂದ ಕುರಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಹಿಂದೆಯೂ ಇದೇ ರೀತಿ ಮನೆಯಲ್ಲಿ ಸಾಕಿದ ನಾಯಿಗಳನ್ನು ಒತ್ತೊಯ್ದಿರುವ ಘಟನೆ ನಡೆದಿದೆ ಹಲವಾರು ತಿಂಗಳುಗಳಿಂದ ಇದೇ ರೀತಿ ಬಡಾವಣೆಯಲ್ಲಿ ಸಾಕು ನಾಯಿಗಳನ್ನು ಹೊತ್ತೊಯ್ತಿದೆ ಆದ್ದರಿಂದ ಅರಣ್ಯ ಇಲಾಖೆಯವರು ಬೋನಿಟ್ಟು ಚಿರತೆ ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಆರ್ಥಿಕ ಸಂಕಷ್ಟ; ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಇನ್ಸುಲಿನ್, ಡಿಸ್ಪ್ರಿನ್ ಔಷಧಿಗಳಿಗೂ ಕೊರತೆ!