ಹುಣಸೂರು: ಮನೆಯಿಂದ ಹೊರಗೆ ತೆರಳಿದ್ದ ಗೃಹಿಣಿ ನಾಪತ್ತೆಯಾಗಿರುವ ಘಟನೆ ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬಸವನಹಳ್ಳಿಯ ಕೋಲಿ ಕಾರ್ಮಿಕ ಅಶೋಕ ಎಂಬುವವರ ಪತ್ನಿ ಸಂಗೀತಾ(23) ನಾಪತ್ತೆಯಾಗಿರುವವರು.
ಜ. 9ರ ಸೋಮವಾರ ಬೆಳಗ್ಗೆ ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಸಂಗೀತಾ ಮನೆಯಿಂದ ಹೊರಗೆ ಹೋಗಿದ್ದವರು ವಾಪಸ್ ಮರಳಿಲ್ಲ ಎನ್ನಲಾಗಿದ್ದು, ಪತ್ನಿಯನ್ನು ಹುಡುಕಿ ಕೊಡುವಂತೆ ಬಿಳಿಕೆರೆ ಠಾಣೆ ಪೊಲೀಸರಿಗೆ ಪತಿ ಅಶೋಕ ದೂರು ನೀಡಿದ್ದಾರೆ.
ಚಹರೆ: ಸುಮಾರು 5 ಅಡಿ ಎತ್ತರ, ದುಂಡುಮುಖ, ಸಾದಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ನೀಲಿ ಬಣ್ಣದ ಚೂಡಿದಾರ್ ಟಾಪ್, ಬಿಳಿ ಪ್ಯಾಂಟ್ ಧರಿಸಿದ್ದು, ಕನ್ನಡ ಮಾತನಾಡುತ್ತಾರೆ. ಪತ್ತೆಯಾದಲ್ಲಿ ಬಿಳಿಕೆರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ(9480805057)ಕೋರಿದ್ದಾರೆ.
Related Articles
ಇದನ್ನೂ ಓದಿ: ಆಪ್ ಸರ್ಕಾರ ವೈದ್ಯರು, ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ: ಬಿಜೆಪಿ ಗಂಭೀರ ಆರೋಪ