Advertisement

ಹುಣಸೂರು: ಹಗಲು ಹೊತ್ತು ವಿದ್ಯುತ್ ಪೂರೈಕೆಗೆ ರೈತ ಸಂಘ ಆಗ್ರಹ

09:14 PM Jan 04, 2023 | Team Udayavani |

ಹುಣಸೂರು: ಕಳೆದ ಒಂದು ವಾರದಿಂದ ಹುಣಸೂರು ವಿಭಾಗದಲ್ಲಿ ಪಂಪ್‌ಸೆಟ್‌ಗಳಿಗೆ ಹಗಲಿನ ಸಮಯ ವಿದ್ಯುತ್ ಸರಬರಾಜು ಮಾಡದ ಪರಿಣಾಮ ರೈತರು ಬೆಳೆಗಳಿಗೆ ನೀರು ಹಾಯಿಸಲು ಪರದಾಡುವಂತಾಗಿದ್ದು, ಹಗಲಿನ ವೇಳೆಯೇ ಕನಿಷ್ಟ ೭ ಗಂಟೆ ಕಾಲ ವಿದ್ಯುತ್ ಪೂರೈಸುವಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮನವಿ ಮಾಡಿದರು.

Advertisement

ಬುಧವಾರದಂದು ರೈತ ಸಂಘಧ ನಿಯೋಗವು ಚೆಸ್ಕಾಂ ಎಇಇ ಸಿದ್ದಪ್ಪರನ್ನು ಭೇಟಿ ಮಾಡಿ ನೀಡಿರುವ ಮನವಿ ಪತ್ರದಲ್ಲಿ ನಿಗದಿಪಡಿಸಿದ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡದೆ, ರಾತ್ರಿವೇಳೆ ವಿದ್ಯುತ್ ಪೂರೈಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದು, ಈ ಭಾಗದಲ್ಲಿ ವನ್ಯಜೀವಿಗಳ ಹಾವಳಿ ವಿಪರೀತವಿದ್ದು ರಾತ್ರಿ ವೇಳೆ ಇರಲಿ ಹಗಲಿನಲ್ಲೇ ಕಾಡು ಪ್ರಾಣಿಗಳ ಹಾವಳಿ ಇದ್ದು, ಓಡಾಡಲಾಗದ ಪರಿಸ್ಥಿತಿ ಇದ್ದರೂ ನಿಗದಿತ ಸಮಯದಲ್ಲಿ ಸರಬರಾಜಾಗುತ್ತಿರುವ ವಿದ್ಯುತ್ ಬಗ್ಗೆ ರೈತರಿಗೆ ಮಾಹಿತಿಯು ದೊರಕದೆ, ವಿದ್ಯುಚ್ಛಕ್ತಿ ಅನಾವಶ್ಯಕವಾಗಿ ಪೋಲಾಗುತ್ತಿದೆ.

ಅಲ್ಲದೆ ರಾತ್ರಿ ವೇಳೆ ಸಂಪೂರ್ಣವಾಗಿ ಪಂಪ್‌ಸೆಟ್ ಬಳಕೆದಾರರಿಗೆ ಸಿಂಗಲ್ ಲೈನ್ ವಿದ್ಯುತ್ ಕೂಡ ಇಲ್ಲದೆ ಜಮೀನಿನಲ್ಲಿರುವ ಮನೆಗಳು ಕತ್ತಲಿನಲ್ಲೇ ಕಳೆಯುವ ಪರಿಸ್ಥಿತಿ ಇದೆ. ಈ ಎಲ್ಲಾ ಸಮಸ್ಯೆಗಳನ್ನು ತಕ್ಷಣದಲ್ಲಿ ಬಗೆಹರಿಸಿ ರೈತರಿಗೆ ಹಗಲಿನ ಸಮಯದಲ್ಲಿ ವಿದ್ಯುತ್‌ನ್ನು ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಹಾದಿ ಹಿಡಿಯಬೇಕಾದೀತೆಂದು ಎಚ್ಚರಿಸಿದರು.

ಚೆಸ್ಕಾಂ ಸೂಚನೆ:
ಮನವಿ ಸ್ವೀಕರಿಸಿದ ಎಇಇ ಸಿದ್ದಪ್ಪ ಈ ಬಗ್ಗೆ ಚೆಸ್ಕಾಂವತಿಯಿAದ ಪಂಪ್‌ಸೆಟ್‌ಗಳಿಗೆ ಜ.೧ ರಿಂದ ಹಗಲು ೪ಗಂಟೆ, ರಾತ್ರಿ ೩ ಗಂಟೆ ವಿದ್ಯುತ್ ಪೂರೈಸಲು ನಿರ್ದೇಶನ ಬಂದಿದೆ. ರೈತರ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ಇತ್ತರು.

ಈ ವೇಳೆ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ರೈತ ಮುಖಂಡರಾದ ವಿಷಕಂಠಯ್ಯ, ಜಯಣ್ಣ, ಚಿಕ್ಕಹುಣಸೂರುರಾಜು, ಸಿದ್ದೇಶ್ ಇತರರಿದ್ದರು.

Advertisement

ಇದನ್ನೂ ಓದಿ: ಮಣಪ್ಪುರಂ ಬಳಿ‌ ಅಪಘಾತ: ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ಧಾರವಾಡದ ಬಾಲಕ ಸಾವು

Advertisement

Udayavani is now on Telegram. Click here to join our channel and stay updated with the latest news.

Next