Advertisement
ಹುಣಸೂರು ಬನ್ನಿ ಬೀದಿಯ ದಿ.ಸಿ.ಕೆ.ಲಕ್ಕಯ್ಯನವರ ಪುತ್ರ ಸಿ.ಎಲ್.ಸ್ವಾಮಿ(48) ಮೃತರು, ಇವರ ಶವ ಹುಣಸೂರು-ಮಡಿಕೇರಿ ರಸ್ತೆಯ ಹಾಳಗೆರೆಯ ಮೂರೂರಮ್ಮ ದೇವಾಲಯದ ಬಳಿಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಪತ್ತೆಯಾಗಿದೆ. ಇದೊಂದು ಅಫಘಾತ ಪ್ರಕರಣವೆಂದು ನಗರ ಠಾಣಾ ಪೋಲೀಸರು ಪ್ರಕರಣ ದಾಖಲಿಸಿಕೊಂಡು, ಶವಾಗಾರಕ್ಕೆ ಶವವನ್ನು ಸಾಗಿಸಿದ್ದರು.
ವಿಷಯ ತಿಳಿದ ದಲಿತ ಮುಖಂಡರಾದ ಹರಿಹರ ಆನಂದಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ನಿಂಗರಾಜ ಮಲ್ಲಾಡಿ, ಬಸವಲಿಂಗಯ್ಯ, ವಕೀಲ ಪುಟ್ಟರಾಜು, ತಟ್ಟೆಕೆರೆ ನಾಗರಾಜ್, ಶಿವಶೇಖರ್, ಸ್ವಾಮಿ, ಮತ್ತಿತರ ಮುಖಂಡರು ಹಾಗೂ ಕುಟುಂಬದ ಮಂದಿ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಠಾಣಾ ಎದುರು ಪ್ರತಿಭಟನೆ ನಡೆಸಿ ಇದು ಅಪಘಾತವಲ್ಲಾ, ಸ್ವಾಮಿಯವರಿಗೆ ಆಗದವರು ಕೊಲೆಮಾಡಿ ಹೆದ್ದಾರಿಗೆ ತಂದು ಹಾಕಿರುವ ಅನುಮಾನವಿದ್ದು, ಸ್ಥಳಕ್ಕೆ ಎಸ್.ಪಿ.ಯವರೇ ಆಗಮಿಸಿ ಕೊಲೆ ಪ್ರಕರಣ ದಾಖಲಿಸುವಂತೆ ಸೂಚಿಸಬೇಕು, ನಗರಠಾಣಾ ಪೊಲೀಸರು ಹೊರತುಪಡಿಸಿ ವಿಶೇಷ ತಂಡ ರಚಿಸಬೇಕು, ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವಂತೆ ಮುಖಂಡರು ಆಗ್ರಹಿಸಿ ಧರಣಿ ನಡೆಸಿದರು. ಪ್ರತಿಭಟನೆಯಲ್ಲಿ ಪತ್ನಿ ಭಾಗ್ಯ, ಸಹೋದರ ರಮೇಶ್, ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದ ಅನೇಕ ಮಂದಿ ಬಾಗವಹಿಸಿದ್ದರು. ಇದನ್ನೂ ಓದಿ : ಶಿಥಿಲಾವಸ್ಥೆಯಲ್ಲಿ ಕೊಟ್ಟಿಗೆಹಾರ ಸರ್ಕಾರಿ ಬಸ್ ನಿಲ್ದಾಣದ ಕೌಗೇಟ್ : ನೂತನ ಗೇಟ್ ಗೆ ಒತ್ತಾಯ
Related Articles
Advertisement
ಎಸ್.ಪಿ. ಬೇಟಿ, ಭರವಸೆ;ವಿಷಯ ತಿಳಿದ ಎಸ್.ಪಿ. ಚೇತನ್‌ರವರು ಅಪಘಾತ ನಡೆದ ಸ್ಥಳ ಹಾಗೂ ಧರಣಿ ಸ್ಥಳಕ್ಕೆ ಭೇಟಿ ಇತ್ತು, ಮನವಿ ಸ್ವೀಕರಿಸಿ, ಮುಖಂಡರ ಬೇಡಿಕೆಯಂತೆ ಕೊಲೆ ಪ್ರಕರಣ ದಾಖಲಿಸಲಾಗುವುದು, ಶವ ಪರೀಕ್ಷೆಯನ್ನು ಮೈಸೂರಿನ ನುರಿತ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು, ಬರುವ ವರದಿ ಆಧಾರದ ಮೇಲೆ ಪ್ರಕರಣ ದಾಖಲಿಸಿ, ಉನ್ನತಮಟ್ಟದ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಲಾಗುವುದೆಂಬ ಭರವಸೆ ಮೇರೆಗೆ ಧರಣಿ ಹಿಂಪಡೆದರು. ಶವವನ್ನು ಮೈಸೂರಿನ ಶವಾಗಾರಕ್ಕೆ ಸಾಗಿಸಲಾಯಿತು.