ಹುಣಸೂರು : ನರ್ಸರಿಗೆ ಆಕಸ್ಮಿಕ ಬೆಂಕಿ ಬಿದ್ದು, ಲಕ್ಷಾಂತರ ರೂ ಬೆಲೆ ಬಾಳುವ ಕೋಕೋಫಿಟ್ ಗೊಬ್ಬರ ಭಸ್ಮವಾಗಿರುವ ಘಟನೆ ತಾಲೂಕಿನ ರಾಯನಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ರಾಯನಹಳ್ಳಿಯ ಗಿರೀಶ್‌ಗೌಡ ಎಂಬುವವರಿಗೆ ಸೇರಿದ
ನರ್ಸರಿಯ ಗಿಡಕ್ಕೆ ಬಳಸಲು ಹಾಗೂ ಹೂವಿನ ಕುಂಡಗಳಿಗೆ ಹಾಕಲು ಸುಮಾರು 25 ಲೋಡ್‌ನಷ್ಟು ಕೋಕೋಫಿಟ್(ತೆಂಗಿನನಾರಿನ) ಗೊಬ್ಬರ ದಾಸ್ತಾನು ಮಾಡಿದ್ದರು.
ಈ ವೇಳೆ ನರ್ಸರಿ ಸಮೀಪದ ಜಮೀನಿನವರು ಕಸದ ರಾಶಿಗೆ ಬೆಂಕಿ ಹಾಕಿದ್ದರು. ಬೇಸಿಗೆಯಾದ್ದರಿಂದ ಬೆಂಕಿ ಜಮೀನಿನ ಏರಿಯಲ್ಲಿ ಒಣಗಿದ್ದ ಹುಲ್ಲಿಗೆ ಬೆಂಕಿ ತಗುಲಿ ನರ್ಸರಿ ಬಳಿ ಸುಮಾರು ಅರ್ಧ ಎಕರೆಯಲ್ಲಿ ದಾಸ್ತಾನು ಮಾಡಿದ್ದ ಕೋಕೋಫಿಟ್‌ಗೂ ಬೆಂಕಿ ತಗುಲಿದ್ದನ್ನು ಕಂಡ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಮೈಸೂರು, ಹುಣಸೂರು ಹಾಗೂ ಕೆ.ಆರ್.ನಗರದ ನಾಲ್ಕು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿಗಳು ದಾವಿಸಿ ಬೆಂಕಿ ನಂದಿಸಿದರಾದರೂ ಅಷ್ಟೋತ್ತಿಗಾಗಲೇ ಕೋಕೋಫಿಟ್ ಸಂಪೂರ್ಣ ಭಸ್ಮವಾಗಿದೆ. ಸುಮಾರು 25 ಲಕ್ಷರೂ ನಷ್ಟು ನಷ್ಟ ಉಂಟಾಗಿದೆ.
ಇದನ್ನೂ ಓದಿ : ಕಾಡಿಗೆ ಬೆಂಕಿ ಬೀಳದಂತೆ ಎಚ್ಚರವಹಿಸಬೇಕಾದ್ದು ಎಲ್ಲರ ಜವಾಬ್ದಾರಿ : ಅರಣ್ಯಾಧಿಕಾರಿ