Advertisement

ಕಾಡಾನೆ ದಾಳಿಗೆ ರೈತ ಸಾವು : ಚಿಕ್ಕಮ್ಮನ ತಿಥಿ ಕಾರ್ಯ ನೆಡೆಯಬೇಕಿದ್ದ ದಿನದಂದೇ ನಡೆಯಿತು ಘಟನೆ

12:45 PM Feb 03, 2022 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗ್ರಾಮದಲ್ಲಿ ಒಂಟಿ ಸಲಗದ ದಾಳಿಗೆ ರೈತನೊರ್ವ ಬಲಿಯಾಗಿರುವ ಘಟನೆ ತಾಲೂಕಿನ ಕೊಳವಿಗೆ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ.

Advertisement

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೊಳವಿಗೆಯ ದಿ.ಚನ್ನವೀರಪ್ಪರ ಪುತ್ರ ರಾಜೇಶ್ (50) ಸಾವನ್ನಪ್ಪಿದ ದುರ್ದೈವಿ. ಪತ್ನಿ, ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಘಟನೆ ವಿವರ: ವೀರನಹೊಸಹಳ್ಳಿ ವಲಯದಂಚಿನ ಕೊಳವಿಗೆ ಗ್ರಾಮದ ರೈತ ರಾಜೇಶ್ ಬುಧವಾರ ರಾತ್ರಿ 9ರ ವೇಳೆ ರಾಸುಗಳಿಗೆ ಮೇವು ಹಾಕಲು ಹುಲ್ಲು ತರಲು ಮನೆಯಿಂದ ಹೊರಬಂದು ಹುಲ್ಲಿನ ಮೆದೆಯಿಂದ ಹುಲ್ಲು ತರುವ ವೇಳೆ ಕತ್ತಲಲ್ಲೆ ರಾಗಿ ಮೆದೆ ಬಳಿ ಹುಲ್ಲು ಮೇಯುತ್ತಿದ್ದ ಸಲಗ ರಾಜೇಶನನ್ನು ಕಂಡು ಒಮ್ಮೆಲೆ ಘೀಳಿಟ್ಟಿದೆ. ಕಾಡಾನೆ ಘೀಳಿಟ್ಟಿದ್ದರಿಂದ ಕಂಗೆಟ್ಟ ರಾಜೇಶ ಹುಲ್ಲು ಬಿಸಾಡಿ ಹತ್ತಿರದ ಮರ ಹತ್ತಿ ಜೀವ ಉಳಿಸಿಕೊಳ್ಳಲು ಓಡಿ ಹೋಗಿ ಮರ ಹತ್ತುವ ವೇಳೆ ಆತನನ್ನು ಸೊಂಡಿನಲಿನಿಂದ ಎಳೆದು ಬಿಸಾಡಿದ ರಭಸಕ್ಕೆ ತೀವ್ರಪೆಟ್ಟು ಬಿದ್ದ ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಿಕ್ಕಮ್ಮನ ತಿಥಿ ದಿನವೇ ಸಾವು:
ರಾಜೇಶನ ಚಿಕ್ಕಮ್ಮ ಗೌರಮ್ಮರ ತಿಥಿ ಕಾರ್ಯ ಗುರುವಾರ ನಡೆಯಬೇಕಿತ್ತು. ಮನೆ ಮಂದಿಯೆಲ್ಲಾ ತಯಾರಿಯಲ್ಲಿದ್ದರು. ಹೀಗಾಗಿ ರಾತ್ರಿ 9 ರ ವೇಳೆಗೆ ತಡವಾಗಿ ರಾಸುಗಳಿಗೆ ಹುಲ್ಲು ತರಲು ಹೋದ ವೇಳೆ ಘಟನೆ ನಡೆದಿದ್ದು. ಚಿಕ್ಕಮ್ಮನ ತಿಥಿಯಂದೇ ರಾಜೇಶ ಸಾವನ್ನಪ್ಪಿರುವುದು ಕುಟುಂಬದವರ ಆಕ್ರಂದನ ಮಯಗಿಲು ಮುಟ್ಟಿತ್ತು.

ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿಯೇ ಗ್ರಾಮಕ್ಕೆ ದೌಡಾಯಿಸಿದ್ದಾರೆ. ಗ್ರಾಮಾಂತರ ಠಾಣೆ ಎಸ್.ಐ.ಜಮೀರ್ ಅಹಮದ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

Advertisement

ಇದನ್ನೂ ಓದಿ : ಮಿತ್ರನ ರಾಜಕೀಯ ಮರುಪ್ರವೇಶಕ್ಕೆ ವೇದಿಕೆ: ರಾಮುಲು ದಿಲ್ಲಿ ಭೇಟಿಯ ಉದ್ದೇಶವೇನು?

ನಾಗಾಪುರದಲ್ಲಿ ಮನೆ ಮೇಲೆ ಕಾಡಾನೆ ದಾಳಿ ಮನೆ ಮೇಲ್ಚಾವಣಿ ಹಾನಿ
ಒಂದೆಡೆ ಕಾಡಾನೆ ಕೊಳವಿಗೆಯಲ್ಲಿ ರೈತನನ್ನು ಬಲಿ ಪಡೆದಿದ್ದರೆ, ಮತ್ತೊಂದೆಡೆ ಹುಣಸೂರು-ನಾಗರಹೊಳೆ ರಸ್ತೆಯ ಗಿರಿಜನ ನಾಗಾಪುರ ಪುನರ್ವಸತಿ ಕೇಂದ್ರದದ ಒಂದನೇ ಬ್ಲಾಕ್‌ನಲ್ಲಿ ಗುರುವಾರ ಮುಂಜಾನೆ ಮೂರು ಆನೆಗಳು ಕಾಡಾನೆಗಳು ಕಾಣಿಸಿಕೊಂಡಿದ್ದು, ಈ ಪೈಕಿ ಒಂದು ಸಲಗವು ಕಾಳನ ಪುತ್ರ ರಾಜುರಿಗೆ ಸೇರಿದ ಮನೆ ಮೇಲೆ ದಾಳಿ ನಡೆಸುತ್ತಿದ್ದಂತೆ ಮನೆಯ ವಸಾರಿನಲ್ಲಿ ಮಲಗಿದ್ದ ಮನೆಯವರು ಕಿರುಚಿಕೊಳ್ಳುತ್ತಿದ್ದಂತೆ ಮತ್ತೊಮ್ಮೆ ಘೀಳಿಡುತ್ತಾ ಎರಡನೇ ಬಾರಿ ದಾಳಿ ನಡೆಸಿ ಮನೆಗೆ ಮೇಲ್ಚಾವಣಿಗೆ ಸಾಕಷ್ಟು ಹಾನಿ ಮಾಡಿದೆ. ಮನೆಯವರ ಕೂಗಾಟ ಕೇಳಿದ ಕೇಂದ್ರದ ಆದಿವಾಸಿಗಳು ಕಾಡಾನೆಗಳನ್ನು ನಾಗರಹೊಳೆ ರಸ್ತೆ ಮೂಲಕ ಹಿಮ್ಮೆಟ್ಟಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮೂರು ಕಾಡಾನೆಗಳ ಪೈಕಿ ಒಂದು ಆನೆ ಎರಡನೇ ಬ್ಲಾಕ್‌ನ ಜಂಗಲ್ ಉಡ್ ಲಾಟ್‌ನಲ್ಲಿ ಸೇರಿಕೊಂಡಿದೆ. ಈ ಭಾಗದಲ್ಲೂ ನಿತ್ಯವೂ ಕಾಡಾನೆಗಳ ಹಾವಳಿ ವಿಪರೀತವಾಗಿದೆ.

ನಿತ್ಯದ ಹಾವಳಿ:
ಉದ್ಯಾನದ ವೀರನಹೊಸಹಳ್ಳಿ ಹಾಗೂ ಹುಣಸೂರು ವಲಯದ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾಗೂ ಹುಲಿ ಹಾವಳಿ ನಿರಂತರವಾಗಿದ್ದು, ರೈತರು ಆಂತಕದ ನಡುವೆಯೂ ಕೃಷಿ ಚಟುವಟಿಕೆ ನಡೆಸುವಂತಾಗಿದೆ. ಈ ಭಾಗದಲ್ಲಿ ರೈಲ್ವೆ ಹಳಿ ಬೇಲಿ ಬಾಕಿ ಇದ್ದು, ಅಲ್ಲಿಂದಲೇ ಆನೆಗಳು ಹೊರದಾಟುತ್ತಿದ್ದು, ಸರಕಾರದ ದಿವ್ಯ ನಿರ್ಲಕ್ಷö್ಯದಿಂದಾಗಿ ಅಮಾಯಕರು ವನ್ಯಪ್ರಾಣಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ. ಇನ್ನಾದರೂ ರೈಲ್ವೆ ಹಳಿ ತಡೆಗೋಡೆ ಪೂರ್ಣಗೊಳಿಸುವಂತೆ ರೈತರು ಆಗ್ರಹಿಸಿದ್ದಾರೆ.

ನಾಗಾಪುರದಲ್ಲಿ ಮನೆ ಮೇಲೆ ಕಾಡಾನೆ ದಾಳಿ:
ಒಂದೆಡೆ ಕಾಡಾನೆ ಕೊಳವಿಗೆಯಲ್ಲಿ ರೈತನನ್ನು ಬಲಿ ಪಡೆದಿದ್ದರೆ, ಮತ್ತೊಂದೆಡೆ ಹುಣಸೂರು-ನಾಗರಹೊಳೆ ರಸ್ತೆಯ ಗಿರಿಜನ ನಾಗಾಪುರ ಪುನರ್ವಸತಿ ಕೇಂದ್ರದದ ಒಂದನೇ ಬ್ಲಾಕ್‌ನಲ್ಲಿ ಗುರುವಾರ ಮುಂಜಾನೆ ಮೂರು ಆನೆಗಳು ಕಾಡಾನೆಗಳು ಕಾಣಿಸಿಕೊಂಡಿದ್ದು, ಈ ಪೈಕಿ ಒಂದು ಸಲಗವು ಕಾಳನ ಪುತ್ರ ರಾಜುರಿಗೆ ಸೇರಿದ ಮನೆ ಮೇಲೆ ದಾಳಿ ನಡೆಸುತ್ತಿದ್ದಂತೆ ಮನೆಯ ವಸಾರಿನಲ್ಲಿ ಮಲಗಿದ್ದ ಮನೆಯವರು ಕಿರುಚಿಕೊಳ್ಳುತ್ತಿದ್ದಂತೆ ಮತ್ತೊಮ್ಮೆ ಘೀಳಿಡುತ್ತಾ ಎರಡನೇ ಬಾರಿ ದಾಳಿ ನಡೆಸಿ ಮನೆಗೆ ಮೇಲ್ಚಾವಣಿಗೆ ಸಾಕಷ್ಟು ಹಾನಿ ಮಾಡಿದೆ. ಮನೆಯವರ ಕೂಗಾಟ ಕೇಳಿದ ಕೇಂದ್ರದ ಆದಿವಾಸಿಗಳು ಕಾಡಾನೆಗಳನ್ನು ನಾಗರಹೊಳೆ ರಸ್ತೆ ಮೂಲಕ ಹಿಮ್ಮೆಟ್ಟಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮೂರು ಕಾಡಾನೆಗಳ ಪೈಕಿ ಒಂದು ಆನೆ ಎರಡನೇ ಬ್ಲಾಕ್‌ನ ಜಂಗಲ್ ಉಡ್ ಲಾಟ್‌ನಲ್ಲಿ ಸೇರಿಕೊಂಡಿದೆ. ಈ ಭಾಗದಲ್ಲೂ ನಿತ್ಯವೂ ಕಾಡಾನೆಗಳ ಹಾವಳಿ ವಿಪರೀತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next