ಹುಣಸೂರು: ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯೊರ್ವನಿಗೆ ಗ್ರಾಮಸ್ಥರೇ ಸೇರಿಕೊಂಡು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ್ದಾರೆ.
ಉಯಿಗೊಂಡನಹಳ್ಳಿಯ ಮಹದೇವ(57) ಬಂಧಿತ ಆರೋಪಿ.
ಈತ ಬುದ್ದಿ ಮಾಂದ್ಯ ಯುವತಿಯನ್ನು ಪುಸಲಾಯಿಸಿ. ಬಲತ್ಕಾರದಿಂದ ಅತ್ಯಾಚಾರ ನಡೆಸಲೆತ್ನಿಸಿದ ವೇಳೆ ಬಾಲಕಿ ಕೂಗಿಕೊಂಡಿದ್ದಾಳೆ . ಕೂಗಾಟ ಕೇಳಿದ ಗ್ರಾಮಸ್ಥರು ಡೌಡಾಯಿಸಿದ್ದಾರೆ.
ಬಾಲಕಿಯ ಜೊತೆಗಿದ್ದ ಆರೋಪಿಯನ್ನು ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Related Articles
ಗ್ರಾಮಸ್ಥರು ನೀಡಿದ ಧರ್ಮದೇಟಿನಿಂದ ಅಸ್ವಸ್ಥನಾಗಿದ್ದ ಮಹದೇವನನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ. ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಪಾಯವನ್ನು ಆಹ್ವಾನಿಸುತ್ತಿದೆ ವಿದ್ಯುತ್ ಕಂಬ