Advertisement

ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ, ನಗರಸಭೆಯ ಕಾಂಗ್ರೇಸ್ ಸದಸ್ಯನ ವಿರುದ್ಧ ಎಫ್.ಐ.ಆರ್

09:56 AM Aug 17, 2022 | Team Udayavani |

ಹುಣಸೂರು : ಪೊಲೀಸ್‌ ಹೆಡ್ ಕಾನ್ಸ್ ಟೇಬಲ್‌ಗೆ ಬೆದರಿಕೆ ಮತ್ತು ಹಲ್ಲೆ ಮಾಡಿದ ಆರೋಪದಡಿ ಹುಣಸೂರು ನಗರಸಭೆ ಸದಸ್ಯನ ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

Advertisement

ಮೈಸೂರು ನಗರಸಭೆ ಮೈದಾನದಲ್ಲಿ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ವೇಳೆ ಆಯೋಜಕರ ಮನವಿಯಂತೆ ಸಾರ್ವಜನಿಕರನ್ನು ಅಂಕಣದಿಂದ ಹೊರಗೆ ಹೋಗಲು ಹೆಡ್ ಕಾನ್ಸಟೇಬಲ್ ಮಹೇಶ್ ಹೇಳಿದ್ದರು.

ಈ ಸಂದರ್ಭದಲ್ಲಿ ಹೆಡ್ ಕಾನ್ಸ್ ಟೇಬಲ್ ಮಹೇಶ್ ಅವರು ಹುಣಸೂರು ನಗರಸಭೆಯ 17 ನೇ ವಾಡ್ ೯ ಸದಸ್ಯ ಮನುವನ್ನು ಕ್ರೀಡಾಂಗಣದಿಂದ ಹೊರ ಹೋಗಲು ಸೂಚಿಸಿದ್ದರು. ಈ ವೇಳೆ ಮನು ಏಕವಚನದಲ್ಲಿ ಕೂಗಾಡಿದ್ದ ನಂತರ ಮಹೇಶ್‌ರನ್ನು ಎಳೆದಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ನಗರಸಭೆ ಸದಸ್ಯ ಮನು ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮಹಾರಾಷ್ಟ್ರ:ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಢಿಕ್ಕಿ, 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next