Advertisement

ಹುಣಸೂರು : ಕೊಲೆ ಪಾತಕಿಗಳ ಹೆಡೆಮುರಿ ಕಟ್ಟಿದ ಹುಣಸೂರು ಟೌನ್ ಪೊಲೀಸರು

09:46 PM Jul 19, 2022 | Team Udayavani |

ಹುಣಸೂರು : ನಗರದಲ್ಲಿ ಹಾಡುಹಗಲೇ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ನಗರ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Advertisement

ಹುಣಸೂರು ನಗರದ ಮದರ ಬ್ಲಾಕ್ ಬಳಿಯ ಜನತಾಹೌಸಿಂಗ್ ಬೋರ್ಡ್ ಕಾಲೋನಿಯ ನಿತಿನ್ ಅಲಿಯಾಸ್ ವಠಾರ(23), ಕಲ್ಕುಣಿಕೆಯ ಮನೋಜ್ ಕುಮಾರ್ ಅಲಿಯಾಸ್ ಮೋಟು (24) ಹಾಗೂ ಪೋತರಾಜ್ (25) ಬಂಧಿತರು.

ಘಟನೆ ಹಿನ್ನೆಲೆ : ಇತ್ತೀಚೆಗೆ ಮದುವೆಯಾಗಿದ್ದ ತನ್ನ ಹೆಂಡತಿಯ ಬಗ್ಗೆ ಹುಣಸೂರು ತಾಲೂಕಿನ ಅಂಗಟಹಳ್ಳಿ ಗ್ರಾಮದ ಬೀರೇಶ ಎಂಬುವನು ತನ್ನ ಮೊಬೈಲ್ ಇನ್ಸಾಗ್ರಾಮ್ ನಲ್ಲಿ ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದನೆಂಬ ಕಾರಣಕ್ಕೆ ನಗರದ ಗೋಕುಲ ರಸ್ತೆಯ ಕುಟ್ಟಿ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದ ನಿತಿನ್ ಅಲಿಯಾಸ್ ವಠಾರ ಎಂಬಾತ ಜು. 12 ರ ಮಂಗಳವಾರ ಮಧ್ಯಾಹ್ನ 2ರ ವೇಳೆಯಲ್ಲಿ ತನ್ನ ಸ್ನೇಹಿತ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ವಾಸಿ ಮನೋಜ್ ಕುಮಾರ (ಮೋಟು) ಹಾಗೂ ಇನ್ನೊಬ್ಬ ಸ್ನೇಹಿತ ಪೋತರಾಜ್ ಎಂಬುವನ ಹೋಂಡಾ ಆಕ್ಟಿವಾ ಮೋಟಾರ್ ಬೈಕಿನಲ್ಲಿ ಮಾತನಾಡಿಸುವ ನೆಪದಲ್ಲಿ ಬಸ್ ನಿಲ್ದಾಣದ ಬಳಿ ನಿಂತಿದ್ದ ಬೀರೇಶನನ್ನು ದ್ವಿಚಕ್ರ ವಾಹನದ ಮಧ್ಯ ಕೂರಿಸಿಕೊಂಡು ಬೈಪಾಸ್ ರಸ್ತೆಯಲ್ಲಿ ಹೊಗುವಾಗ ನಿತಿನ್ ಬೀರೇಶನಿಗೆ ಹಾಡುಹಗಲೇ ಚಾಕುವಿನಿಂದ ಬೀರೇಶನ ಭುಜ, ಕುತ್ತಿಗೆಗೆ ಬಲವಾಗಿ ಚುಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದರು. ಸಾರ್ವಜನಿಕರು ಬೀರೇಶನನ್ನು ಹುಣಸೂರಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಬೀರೇಶ ಸಾವನ್ನಪ್ಪಿದ್ದ, ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ಮದರಸಾಗಳಿಗಾಗಿ ಪ್ರತ್ಯೇಕ ಪಠ್ಯಕ್ರಮ ಚಿಂತನೆ ಸದ್ಯಕ್ಕಿಲ್ಲ: ಸಚಿವ ಬಿ.ಸಿ.ನಾಗೇಶ್‌

Advertisement

ತಂಡ ರಚನೆ : ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ. ಆರ್.ಚೇತನ್ ಮಾರ್ಗದರ್ಶನದಲ್ಲಿ ಹುಣಸೂರು ಉಪ-ವಿಭಾಗದ ಡಿವೈಎಸ್ಪಿ ರವಿಪ್ರಸಾದ್, ಹುಣಸೂರು ನಗರ ಠಾಣೆಯ ಇನ್ಸೆಕ್ಟರ್ ಎಲ್.ಶ್ರೀನಿವಾಸ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕೃತ್ಯ ನಡೆದ ದಿನದಂದೇ ಕಾರ್ಯಾಚರಣೆಗಿಳಿದ ತಂಡವು ನಿತಿನ್ ಹಾಗೂ ಮನೋಜ್ ಕುಮಾರನ್ನು ಬೆಂಗಳೂರಿನ ಕೋರಮಂಗಲದಲ್ಲೂ, ಪೂತರಾಜ್ ನನ್ನು ಹಾಸನ ಜಿಲ್ಲೆಯ ಹೊಳೆನರಸೀಪುರದ ದಿಡ್ಡಹಳ್ಳಿಯಲ್ಲಿರುವ ಬಗ್ಗೆ ಮೊಬೈಲ್ ಟವರ್ ಲೊಕೇಶನ್ ಪಡೆದು ಆರೋಪಿಗಳನ್ನು ಹೆಡೆಮುರಿಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ಲಾಘನೆ : ಕೊಲೆ ಪಾತಕಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ತಂಡವನ್ನು ಎಸ್.ಪಿ, ಆರ್.ಚೇತನ್ ಚೇತನ್. ಅಪರ ಪೊಲೀಸ್ ವರಿಷ್ಟಾಧಿಕಾರಿ ನಂದಿನಿ ಶ್ಲಾಘಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಪ್ರಭಾಕರ, ಇರ್ಫಾನ್, ಎಎಸ್‌ಐ ಪುಟ್ಟನಾಯಕ, ರಾಜೇಗೌಡ ಮತ್ತು ಎಸ್.ಬಿ ಕರ್ತವ್ಯದ ಸಿಬ್ಬಂದಿ ಪ್ರಸಾದ್ ಇದ್ದರೆಂದು ಇನ್ಸ್ ಪೆಕ್ಟರ್ ಶ್ರೀನಿವಾಸ್ ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next