Advertisement

ಮಹಿಳೆಗೆ ನಕಲಿ ಚಿನ್ನದ ಸರಕೊಟ್ಟು ಅಸಲಿ ಚಿನ್ನದ ಓಲೆ ಎಗರಿಸಿದ ಖದೀಮರ ಬಂಧನ

11:23 PM Jun 13, 2022 | Team Udayavani |

ಹುಣಸೂರು : ನಕಲಿ ಕಾಸಿನ ಸರ ನೀಡಿ, ಅಸಲಿ ಚಿನ್ನದ ಸರ ಮತ್ತು 5 ಸಾವಿರ ರೂ. ನಗರದು ಲಪಟಾಯಿಸಿದ್ದ ಕಳ್ಳರನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ದಾವಣಗೆರೆ ಜಿಲ್ಲೆಯ ಸಂತೆ ಬೆನ್ನೂರು ಹೋಬಳಿಯ ಚಿಕ್ಕಬೆನ್ನೂರು ಗ್ರಾಮದ ಆನಂದ್ ಹಾಗೂ ಸುಶೀಲಮ್ಮ ಬಂಧಿತ ಆರೋಪಿಗಳು, ಇದೀಗ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಆಗಿರೋದಿಷ್ಟು:
ಹುಣಸೂರು ತಾಲೂಕಿನ ತಿಪ್ಪಲಾಪುರ ಗ್ರಾಮದ ಸುಶೀಲಮ್ಮ ಎಂಬುವವರು ನಗರದ ಬಜಾರ್ ರಸ್ತೆಯ ಮಾರ್ಕೆಟ್ ಬಳಿ ಹೋಗುತ್ತಿದ್ದ ವೇಳೆ ಎದುರಿಗೆ ಸಿಕ್ಕ ಆರೋಪಿಗಳಾದ ಆನಂದ ಹಾಗೂ ಸುಶೀಲಮ್ಮ ಪರಿಚಿತರಂತೆ ಮಾತನಾಡಿಸಿ ಆಕೆಯನ್ನು ನಂಬಿಸಿ. ಬಜಾರ್ ರಸ್ತೆಯ ಪಕ್ಕದದಲ್ಲಿದ್ದ ಖಾಲಿ ಜಾಗಕ್ಕೆ ಕರೆದುಕೊಂಡು ಹೋಗಿ ತಮ್ಮ ಬಳಿಯಿದ್ದ ಚಿನ್ನದಂತಿರುವ ನಕಲಿ ಚಿನ್ನದ ಕಾಸಿನ ಸರವನ್ನು ನೀಡಿ, ನೊಂದ ಮಹಿಳೆಯಿಂದ 10 ಗ್ರಾಂ ತೂಕವುಳ್ಳ ಅಸಲಿ ಚಿನ್ನದ ಓಲೆ ಹಾಗೂ ಮಾಟಿಯನ್ನು ಬಿಚ್ಚಿಸಿಕೊಂಡು ಜೊತೆಗೆ ಆಸ್ಪತ್ರೆ ಖರ್ಚಿಗೆ ಹಣ ಸಾಲುವುದಿಲ್ಲವೆಂದು ನಂಬಿಸಿ. ಸುಶೀಲಮ್ಮನವರ ಬಳಿಯಿದ್ದ 5 ಸಾವಿರ ರೂ ಹಣವನ್ನು ಪಡೆದು ಮೋಸ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ಮೋಸಹೋಗಿದ್ದ ಸುಶೀಲಮ್ಮ ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್‌ರವರು ಅಡಿಷನಲ್ ಎಸ್.ಪಿ. ಆರ್.ಶಿವಕುಮಾರ್ ಆರೋಪಿಗಳ ಪತ್ತೆಗೆ ಡಿವೈಎಸ್‌ಪಿ ರವಿಪ್ರಸಾದ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

Advertisement

ಡಿವೈಎಸ್‌ಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಲ್.ಶ್ರೀನಿವಾಸ್ ಮತ್ತವರ ತಂಡ ಸುತ್ತಮುತ್ತಲ ಅಂಗಡಿಗಳ ಸಿ.ಸಿ.ಕ್ಯಾಮರಾದ ಫೂಟೇಜ್ ಪರಿಶೀಲಿಸಿದ ವೇಳೆ ಆರೋಪಿಗಳ ಚಹರೆ ಪತ್ತೆಮಾಡಿದರು.

ಇದನ್ನೂ ಓದಿ : ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ರೈತ ಸಾವು

ದಾವಣಗೆರೆಯಲ್ಲಿ ಬಂಧನ: ಆರೋಪಿಗಳ ಬೆನ್ನು ಹತ್ತಿದ ಪೊಲೀಸರು ದಾವಣಗೆರೆಗೆ ತೆರಳಿ ಅಲ್ಲಿನ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಿ, ಅವರಿಂದ ಚಿನ್ನದ ಓಲೆ ಹಾಗೂ ಮಾಟಿಯನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಹಳೇಕಳ್ಳ ಆನಂದ್ : ಆರೋಪಿ ಆನಂದನ ವಿರುದ್ಧ ಈ ಹಿಂದೆ ದಾವಣಗೆರೆ, ತುಮಕೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಇಂಥಹುದೇ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ಪತ್ತೆಯಾಗಿದೆ.

ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ: ಕಾರ್ಯಾಚರಣೆಯಲ್ಲಿ ಹುಣಸೂರು ನಗರ ಠಾಣೆ ಗುಪ್ತ ಮಾಹಿತಿ ಸಿಬ್ಬಂದಿ ಪ್ರಸಾದ್, ಎ.ಎಸ್.ಐ.ಪುಟ್ಟನಾಯಕ, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಪ್ರಭಾಕರ್, ಇರ್ಫಾನ್, ಭರತೇಶ್, ವೆಂಕಟೇಶ್ ಪ್ರಸಾದ್, ಲಕ್ಷ್ಮಿ ಹಾಗೂ ಜಗದೀಶ್ ಭಾಗವಹಿಸಿದ್ದರೆಂದು ಡಿವೈ.ಎಸ್.ಪಿ. ರವಿಪ್ರಸಾದ್ ತಿಳಿಸಿದರು.

ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಿದ ಸಿಬ್ಬಂದಿಗಳ ಕಾರ್ಯವನ್ನು ಮೈಸೂರು ಜಿಲ್ಲಾ ಎಸ್.ಪಿ.ಆರ್ ಚೇತನ್, ಅಡಿಷನಲ್ ಎಸ್.ಪಿ. ಶಿವಕುಮಾರ್,ಡಿವೈಎಸ್‌ಪಿರವಿಪ್ರಸಾದ್ ಶ್ಲಾಘಿಸಿದ್ದಾರೆ.

ಮೋಸ ಹೋಗಬೇಡಿ:
ರಸ್ತೆ, ಬ್ಯಾಂಕ್ ಬಳಿ ಅಪರಿಚಿತರು ಒಂದೆರಡು ನೋಟುಗಳನ್ನು ಕೆಳಗೆ ಹಾಕಿ ನಿಮ್ಮ ಗಮನ ಬೇರೆಡೆಗೆ ಸೆಳೆದು ನಿಮ್ಮ ಬಳಿ ಇರುವ ಹಣ ಎಗರಿಸುವ ಹಾಗೂ ನಂಬಿಕಸ್ಥರಂತೆ, ವ್ಯಾಪಾರಿಗಳಂತೆ ಮಾತನಾಡಿಸಿ ನಿಮ್ಮ ಬಳಿ ಇರುವ ಚಿನ್ನಾಭರಣ ಎಗರಿಸುವವರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಡಿವೈಎಸ್‌ಪಿ ರವಿಪ್ರಸಾದ್ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next