ಹುಣಸೂರು: ತಿಂಡಿ ತಿನ್ನಲು ಹೋಟೆಲ್ ಗೆ ಬಂದಿದ್ದ ಎಲ್ ಎಲ್ ಬಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹುಣಸೂರು ತಾಲೂಕಿನ ನಂಜಾಪುರ ಗ್ರಾಮದ ನಟರಾಜ್ ಅವರ ಪುತ್ರ ನಿತಿನ್(25) ಸಾವನ್ನಪ್ಪಿದ ನತದೃಷ್ಟ. ಇವರಿಗೆ ತಂದೆ-ತಾಯಿ. ಒಬ್ಬರು ಸಹೋದರಿ ಇದ್ದಾರೆ.
ನಿತಿನ್ ತಿಂಡಿ ತಿನ್ನಲು ಸ್ನೇಹಿತನೊಂದಿಗೆ ಹುಣಸೂರು ಪಟ್ಟಣದ. ಹೋಟೆಲ್ ಗೆ ತೆರಳಿ ತಿಂಡಿಗೆ ಆಡ್೯ರ್ ಮಾಡಿದ್ದಾರೆ. ತಿಂಡಿ ಬರುವಷ್ಟರಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದ ನಿತಿನ್ ನನ್ನು ಸ್ನೇಹಿತ ಹಾಗೂ ಹೋಟೆಲ್ ನವರು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗುವಷ್ಟರಲ್ಲಾಗಲೆ ನಿತಿನ್ ಪ್ರಾಣಪಕ್ಷಿ ಹಾರಿಹೋಗಿತ್ತು. ಯುವಕ ಹೋಟೆಲ್ ನಲ್ಲಿದ್ದ ಕೊನೆ ಕ್ಷಣದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿತಿನ್ ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ನಾಲ್ಕನೇ ವರ್ಷದ ಎಲ್.ಎಲ್.ಬಿ ವಿದ್ಯಾರ್ಥಿಯಾಗಿದ್ದು. ಶವವನ್ನು ಸ್ವಗ್ರಾಮ ನಂಜಾಪುರಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಿದರು.
ಇದನ್ನೂ ಓದಿ : ಪಂಚಮಸಾಲಿ ಸಮುದಾಯದಿಂದ ಸಂಪುಟ ಸೇರುವುದು ಯಾರು?ಯತ್ನಾಳ್ ಸೇರ್ಪಡೆಗೆ ವಿರೋಧ