ಹುಣಸೂರು: ಸಾರಿಗೆ ಸಂಸ್ಥೆ ಬಸ್ ಚಾಲಕನ ಅಜಾಗರೂಕತೆ ಚಾಲನೆಯಿಂದಾಗಿ ಬ್ಲೇಡ್ ತುಂಡಾಗಿ ಹಿಂಬದಿಯ ಚಕ್ರಗಳು ಹೌಸಿಂಗ್ ಸಹಿತ ಕಳಚಿ ಬಿದ್ದರೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಯಶೋಧರಪುರ ಗೇಟ್‌ನಲ್ಲಿ ಶನಿವಾರ ನಡೆದಿದೆ.
ಮೈಸೂರು-ಬಂಟ್ವಾಳ ಹೆದ್ದಾರಿ-೨೭೫ರ ಹೆದ್ದಾರಿಯಲ್ಲಿ ಕೆ.ಆರ್.ನಗರ ಡಿಪೋಗೆ ಸೇರಿದ ಬಸ್ ಸೋಮವಾರಪೇಟೆ ಕಡೆಯಿಂದ ಮೈಸೂರಿಗೆ ಬರುತ್ತಿದ್ದ ಚಾಲಕ ಬಂದ ವೇಗದಲ್ಲೇ ಹುಣಸೂರು ತಾಲೂಕಿನ ಯಶೋಧರಪುರ ಗೇಟ್ ಬಳಿಯ ಹಂಪ್ಸ್ ಮೇಲೆ ಓಡಿಸಿದ್ದರಿಂದ ಬಸ್‌ನ ಹಿಂಬದಿಯ ಬ್ಲೇಡ್ ತಂಡಾಗಿ, ಹೌಸಿಂಗ್ ಸಹಿತಿ ಚಕ್ರಗಳು ಕಳಚಿ ಬಿದ್ದವು, ದುರದೃಷ್ಟವಶಾಹತ್ ಬಸ್‌ನ ಹಿಂದೆ ಯಾವುದೇ ವಾಹನಗಳು ಇಲ್ಲದ್ದರಿಂದ ಯಾವುದೇ ಅನಾಹುತವಾಗಲಿಲ್ಲ, ಅಲ್ಲದೆ ಬಸ್‌ನಲ್ಲಿದ್ದ ೩೯ ಮಂದಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ನಂತರ ಬಸ್‌ನ್ನು ಕ್ರೇನ್ ಬಳಸಿ ತೆರವುಗೊಳಿಸಲಾಯಿತು.
ಡಿ.ಸಿ.ಭೇಟಿ:
ಸ್ಥಳಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್, ಡಿಎಂಎ ಚಂದ್ರಪ್ಪ ಭೇಟಿ ಇತ್ತು, ಘಟನೆಯನ್ನು ಪರಿಶೀಲಿಸಿದರು. ಇದು ಚಾಲಕ ಚಂದ್ರಶೇಖರ್ ಅಜಾಗರೂಕತೆ ಚಾಲನೆಯಿಂದಾಗಿದ್ದು, ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗದ ಪರಿಣಾಮ ದೂರು ನೀಡಿಲ್ಲ. ಸಂಬಂಧಿಸಿ ಚಾಲಕನ ವಿರುದ್ದ ಕ್ರಮ ವಹಿಸಲಾಗುವುದೆಂದು ಸಂಸ್ಥೆಯ ಡಿ.ಸಿ.ಅಶೋಕ್‌ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.
ಈ ವೇಳೆ ಹುಣಸೂರು ಡಿಪೋ ಮ್ಯಾನೇಜರ್ ಸುಬ್ರಮಣ್ಯ, ಕೆ.ಆರ್.ನಗರ ಘಟಕದ ವ್ಯವಸ್ಥಾಪಕ ಮಹೇಶ್ ಇದ್ದರು.
Related Articles
ಇದನ್ನೂ ಓದಿ: ಕುಂದಾಪುರ: ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ