Advertisement

ಹುಣಸೂರು : ಉಪನ್ಯಾಸಕರ ನಿಯೋಜನೆ ವಿರೋಧಿಸಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

09:01 PM Jul 21, 2022 | Team Udayavani |

ಹುಣಸೂರು : ಹುಣಸೂರು ತಾಲೂಕಿನ ರತ್ನಪುರಿ ಸರಕಾರಿ ಪದವಿಪೂರ್ವ ಕಾಲೇಜಿನಿಂದ ಒಮ್ಮೆಲೆ ಐದು ಮಂದಿ ಉಪನ್ಯಾಸಕರನ್ನು ಬೇರೆಡೆಗೆ ನಿಯೋಜಿಸಿರುವುದನ್ನು ವಿರೋಧಿಸಿ ಗುರುವಾರ ವಿದ್ಯಾರ್ಥಿಗಳು ದಿಢೀರ್ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

Advertisement

ಐವರ ನಿಯೋಜನೆ: ಕಾಲೇಜಿನ ರಸಾಯನಶಾಸ್ತ್ರ, ಜೀವಶಾಸ್ತ್ರ , ಸಮಾಜಶಾಸ್ತ್ರ , ಕನ್ನಡ, ಇಂಗ್ಲಿಷ್ ಉಪನ್ಯಾಸಕರನ್ನು ಪಿ.ಯು.ಡಿ.ಡಿ.ಯವರು ಬೇರೆ ಕಾಲೇಜುಗಳಿಗೆ ನಿಯೋಜನೆ ಮಾಡಿದ್ದರು.

ಗುರುವಾರ ಬೆಳಗ್ಗೆ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ನಿಯೋಜನೆ ವಿಷಯ ಹರಡುತ್ತಿದ್ದಂತೆ ಮುಂದಿನ ಪಾಠ-ಪ್ರವಚನದ ಗತಿಯೇನೆಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಆವರಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು.

ಪೋಷಕರ ಬೆಂಬಲ:
ವಿಷಯ ತಿಳಿದ ಗ್ರಾ.ಪಂ.ಸದಸ್ಯರಾದ ಮೋಹನ್, ವಿಜೇಂದ್ರಕುಮಾರ್, ನಾಗೇಶರಾವ್ ಮೆಂಗಾಣಿ, ಮನುಕುಮಾರ್, ಸಿ.ಡಿ.ಸಿ.ಸದಸ್ಯ ಸುದರ್ಶನ್ ಸಿಂಗ್, ಮುಖಂಡರಾದ ಸದಾಶಿವಭಟ್, ರತ್ನಪುರಿಪುಟ್ಟಸ್ವಾಮಿ, ದಿಲೀಪ್, ಜಯಶೀಲ ಹಾಗೂ ಪೋಷಕರು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬೆಂಬಲಿಸಿದರು.

ನಂತರ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ಮುಖಂಡರು ಈ ವಿಚಾರವನ್ನು ಶಾಸಕರು ಹಾಗೂ ಪಿಯು ಡಿ.ಡಿ.ಯವರ ಗಮನಕ್ಕೆ ತಂದು ಬಗೆಹರಿಸಲಾಗುವುದೆಂಬ ಭರವಸೆಮೇರೆಗೆ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

Advertisement

ಇದನ್ನೂ ಓದಿ : ಬಾಟಲಿಯಿಂದ ಹಲ್ಲೆ ಪ್ರಕರಣ; ಗಾಯಾಳು ಯುವಕ ಮೃತ್ಯು: 8 ಮಂದಿ ಆರೋಪಿಗಳ ಬಂಧನ

ಭವಿಷ್ಯಕ್ಕೆ ತೊಂದರೆ:
ವಿದ್ಯಾರ್ಥಿ ನಾಯಕಿ ಹೇಮಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪನ್ಯಾಸಕರನ್ನು ಈರೀತಿ ನಿಯೋಜನೆ ಮಾಡುವುದರಿಂದ ನಮಗೆ ತೊಂದರೆಯಾಗುತ್ತಿದ್ದು, ವಿಜ್ಞಾನ ವಿಭಾಗ, ಕನ್ನಡ, ಇಂಗ್ಲಿಷ್ ಸೇರಿದಂತೆ ಎಲ್ಲ ಉಪನ್ಯಾಸಕರನ್ನು ನಿಯೋಜನೆ ಮಾಡಿರುವುದರಿಂದ ಪಾಠ ಪ್ರವಚನದ ಜೊತೆಗೆ ನಮ್ಮ ಭವಿಷ್ಯಕ್ಕೂ ತೊಂದರೆಯಾಗುತ್ತಿದ್ದು, ನಿಯೋಜನೆ ಮಾಡದಂತೆ ಕ್ರಮವಹಿಸಬೇಕೆಂದು ಮನವಿ ಮಾಡಿದರು.

ನಿಯಮಾವಳಿಯಂತೆ ನಿಯೋಜನೆ ಡಿ.ಡಿ.ಸ್ಪಷ್ಟನೆ:
ರತ್ನಪುರಿ ಕಾಲೇಜಿನಲ್ಲಿ ಮೂರು ವಿಭಾಗಗಳಿದ್ದು, 114ವಿದ್ಯಾರ್ಥಿಗಳಿದ್ದಾರೆ. ಕಲಾ-ವಾಣಿಜ್ಯ ವಿಭಾಗಕ್ಕೆ 320 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕ ವಾರದ 6 ದಿನಗಳಲ್ಲಿ 20 ಗಂಟೆ ಹಾಗೂ ವಿಜ್ಞಾನ ವಿಭಾಗದ 160 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕ ಹುದ್ದೆ, ಪ್ರತಿ ಉಪನ್ಯಾಸಕ ವಾರದಲ್ಲಿ 20 ಗಂಟೆ ಪಾಠ ಮಾಡಬೇಕು. ಇಲ್ಲಿ ಅಷ್ಟು ಪಿರೆಡ್ ಇಲ್ಲದ ಕಾರಣ ಅಕ್ಕಪಕ್ಕದ ಅವಶ್ಯವಿರುವ ಕಾಲೇಜುಗಳಿಗೆ ಸರಕಾರದ ನಿಯಮಾವಳಿ ಪ್ರಕಾರ ವಾರದಲ್ಲಿ ಮೂರು ದಿನ ಮಾತ್ರ ನಿಯೋಜನೆ ಮಾಡಲಾಗುತ್ತಿದೆ. ಶುಕ್ರವಾರ ಕಾಲೇಜಿಗೆ ತೆರಳಿ ಪರಿಶೀಲಿಸಿ ಪೋಷಕರು,ಮುಖಂಡರಿಗೆ ಮನವರಿಕೆ ಮಾಡಿಕೊಡುವೆ.

– ಶ್ರೀನಿವಾಸ್‌ಮೂರ್ತಿ,ಉಪ ನಿರ್ದೇಶಕರು, ಪ.ಪೂ.ಶಿ.ಇ

Advertisement

Udayavani is now on Telegram. Click here to join our channel and stay updated with the latest news.

Next