Advertisement

ಹೆದ್ದಾರಿ ಅತಿಕ್ರಮಣಕ್ಕಿಲ್ಲಿ ರಹದಾರಿ ನೀಡಿದರ‍್ಯಾರು : ಹೇಳೋರು-ಕೇಳೋರು ಇಲ್ಲಿಲ್ಲ…

08:33 PM Jul 03, 2022 | Team Udayavani |

ಹುಣಸೂರು : ಹೆದಾರಿಯನ್ನೇ ಆಕ್ರಮಿಸಿಕೊಂಡು, ಹೋಟೆಲ್, ಅಂಗಡಿಗಳು, ಎಂ. ಸ್ಯಾಂಡ್ ದಾಸ್ತಾನು ಮಾಡಿದ್ದರೂ ಪ್ರಶ್ನಿಸಬೇಕಾದ ಲೋಕೋಪಯೋಗಿ ಇಲಾಖೆಯಾಗಲಿ, ನಗರದಲ್ಲಿ ಉತ್ತಮ ಪರಿಸರ ಕಾಪಾಡ ಬೇಕಿರುವ ನಗರಸಭೆಯಾಗಲಿ ಪ್ರಶ್ನಿಸದಿರುವುದು ಅನುಮಾನಕ್ಕೆಡೆ ಮಾಡಿದೆ.

Advertisement

ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ-275 ರ ಎಪಿಎಂಸಿ ಯಾರ್ಡ್ ಮುಂಬಾಗದಿಂದ ಹಿಡಿದು ಆರ್.ಟಿ.ಓ.ಕಚೇರಿವರೆಗಿನ ಸುಮಾರು 3 ಕಿ.ಮೀ ರಸ್ತೆ ಅಕ್ಕಪಕ್ಕದಲ್ಲಿ ಅಂಗಡಿಗಳು ನಿರ್ಮಿಸಿಕೊಂಡು ಯಾರದೇ ಭಯವೂ ಇಲ್ಲದೆ ವಹಿವಾಟು ನಡೆಸುತ್ತಿದ್ದಾರೆ.

ಹೆದ್ದಾರಿ ಸ್ಥಿತಿ ಆಯೋಮಯ : ದೇವರಾಜ ಅರಸು ಭವನದ ಬಳಿ, ತೋಟಗಾರಿಕೆ ಇಲಾಖೆ-ನ್ಯಾಯಾಲಯದ ಎದುರು, ಬಸ್ ನಿಲ್ದಾಣದ ಬೈಪಾಸ್ ರಸ್ತೆ, ಕಲ್ಕುಣಿಕೆ ವೃತ್ತದಲ್ಲಿ ಅಂಗಡಿಗಳು ತಲೆ ಎತ್ತಿದ್ದರೆ. ಅರಸು ಭವನದ ಬಳಿ ಯಾರದೇ ಭಯವೂ ಇಲ್ಲದೆ ಹೆದ್ದಾರಿಯಲ್ಲೇ ಎಂ. ಸ್ಯಾಂಡ್ ಸುರಿದು ಎಗ್ಗಿಲ್ಲದೆ ವಹಿವಾಟು ನಡೆಸುತ್ತಿದ್ದಾರೆ. ಬೀದಿ ದೀಪವೂ ಇಲ್ಲದೆ ರಸ್ತೆ ಯಾವುದು, ಫುಟ್ ಬಾತ್ ಯಾವುದು ಎಂಬುದೇ ತಿಳಿಯದಾಗಿದೆ. ಹೆದ್ದಾರಿ ಬದಿಯ ಎಂ. ಸ್ಯಾಂಡ್ ದಾಸ್ತಾನಿನಿಂದಾಗಿ ಗಾಳಿ ಬೀಸಿದರಂತೂ ವಾಹನ ಸವಾರರು, ಕಾಲೇಜು ವಿದ್ಯಾರ್ಥಿಗಳು ಹಾಗೂ ನಡೆದು ತೆರಳುವ ಸಾರ್ವಜನಿಕರ ಕಣ್ಣಿಗೆ ರಾಚುತ್ತಿದ್ದು, ಹೇಳುವವರು ಕೇಳುವವರೂ ಇಲ್ಲದಂತಾಗಿದ್ದು. ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರ ಸ್ಥಿತಿಯಂತೂ ಆಯೋಮಯವಾಗಿದೆ.

ಜನ ನಡೆದಾಡುವುದೇ ದುಸ್ಥರ: ಇನ್ನು ನಗರದ ಪ್ರಮುಖ ರಸ್ತೆಗಳಾದ ಹೊಸ ಬಸ್ ನಿಲ್ದಾಣದ ಮುಂಬಾಗದ ರಸ್ತೆ, ಜೆ.ಎಲ್.ಬಿ.ರಸ್ತೆ, ಎಸ್.ಜೆ.ರಸ್ತೆಗಳಲ್ಲಂತೂ ವಾಹನಗಳಿರಲಿ, ಜನರು ಓಡಾಡಲು ಹರಸಾಹಸ ಪಡಬೇಕಿದೆ. ಈ ರಸ್ತೆಗಳ ಅಂಗಡಿಗಳವರು ರಸ್ತೆಗೆ ಸ್ಟೇರ್ ಕೇಸ್, ಮೆಟ್ಟಿಲುಗಳನ್ನು ಹಾಕಿಕೊಂಡಿದ್ದರಿಂದ ನಡೆದಾಡುವುದೇ ದುಸ್ಥರವಾಗಿದೆ.

ಇದನ್ನೂ ಓದಿ : ಕಲಬುರಗಿ: ಕಾರು- ಟ್ಯಾಂಕರ್ ಅಪಘಾತ: ವಿದ್ಯಾರ್ಥಿಗಳಿಬ್ಬರ ದುರ್ಮರಣ

Advertisement

ಕಣ್ಣಿದ್ದೂ ಕುರುಡರಾದ ಅಧಿಕಾರಿಗಳು:
ಹಿಂದೆ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿತ್ತು. ವರ್ಷದಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು. ಇತ್ತ ಲೋಕೋಪಯೋಗಿಯವರೂ ಕೇಳುತ್ತಿಲ್ಲ, ಮತ್ತೊಂದೆಡೆ ಹೆದ್ದಾರಿ ಪ್ರಾಧಿಕಾರವೂ ಇತ್ತ ತಿರುಗಿ ನೋಡಿಲ್ಲ, ಇನ್ನು ನಗರಸಭೆ ವ್ಯಾಪ್ತಿಯ ಹೆದ್ದಾರಿಯನ್ನು ಅತಿಕ್ರಮಣ ಮಾಡಿಕೊಂಡು ಅಂಗಡಿ ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿರುವ ಬಗ್ಗೆ ಹಾಗೂ ಎಂ. ಸ್ಯಾಂಡ್ ಸುರಿದು ವಹಿವಾಟು ನಡೆಸುತ್ತಿರುವ ಬಗ್ಗೆ ಪೊಲೀಸರು-ನಗರಸಭೆ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತಾಗಿದ್ದು, ಇಲ್ಲಿ ಹೇಳುವವರು-ಕೇಳುವವರು ಇಲ್ಲದಂತಾಗಿದೆ. ಯಾರಿಗೆ ದೂರು ನೀಡಬೇಕೆಂಬ ಜಿಜ್ಞಾಸೆ ಈ ರಸ್ತೆಯನ್ನು ಅವಲಂಬಿಸಿರುವ ವಾಹನ ಸವಾರರು, ಸಾರ್ವಜನಿಕರನ್ನು ಕಾಡುತ್ತಿದೆ.

ಒತ್ತುವರಿ ತೆರವಾಗಲಿ:
ನಗರದ ಪ್ರಮುಖ ರಸ್ತೆಗಳು ಒತ್ತುವರಿಯಾಗಿವೆ, ಒತ್ತುವರಿ ತೆರವಿರಲಿ ಕನಿಷ್ಟ ಸುಗಮ ಸಂಚಾರಕ್ಕೂ ನಗರದೊಳಗೂ, ಹೊರಗೂ ಅವಕಾಶವೇ ಇಲ್ಲದಂತಾಗಿದೆ. ಆಡಳಿತವಂತೂ ಹಳ್ಳ ಹಿಡಿದಿದೆ. ಬೈಪಾಸ್ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವವರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು, ಎಂ.ಸ್ಯಾಂಡ್ ಮಾರಾಟಕ್ಕೆ ಎಪಿಎಂಸಿ ಆವರಣದೊಳಗೆ ಪ್ರತ್ರೇಕ ವ್ಯವಸ್ಥೆ ಕಲ್ಪಿಸಬೇಕು.
– ಪುರುಷೋತ್ತಮ್, ಕರವೆ ತಾಲೂಕು ಅಧ್ಯಕ್ಷ, ಹುಣಸೂರು.

ಈಗಾಗಲೆ ಬೈಪಾಸ್ ರಸ್ತೆಯಲ್ಲಿ ಅಂಗಡಿ ನಿರ್ಮಿಸಿಕೊಂಡಿರುವವರಿಗೆ ಎಚ್ಚರಿಕೆ ನೀಡಲಾಗಿದ್ದು, ತೆರವುಗೊಳಿಸದಿದ್ದಲ್ಲಿ ಶೀಘ್ರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು.
– ರವಿಕುಮಾರ್,ಪೌರಾಯುಕ್ತ.ನಗರಸಭೆ.

– ಸಂಪತ್ ಕುಮಾರ್, ಹುಣಸೂರು.

Advertisement

Udayavani is now on Telegram. Click here to join our channel and stay updated with the latest news.

Next