Advertisement

ಇದು ಗುಂಡಿಯೋ ! ಗುಂಡೊಯೊಳಗೊಂದು ರಸ್ತೆಯೋ ? ಹುಣಸೂರಿನ ಸಂಪರ್ಕ ರಸ್ತೆಯ ದುಸ್ಥಿತಿ

09:53 PM Jul 05, 2022 | Team Udayavani |

ಹುಣಸೂರು : ಹುಣಸೂರು ವಿಸ್ತಾರವಾಗಿ ಬೆಳೆದಿದ್ದು, ಹುಣಸೂರು ನಗರದ ಮಧ್ಯಭಾಗದಲ್ಲಿ ಮೈಸೂರು-ಬಂಟ್ವಾಳ ಹೆದ್ದಾರಿ-275 ಹಾದು ಹೋಗಿದೆ. ಪಕ್ಕದಲ್ಲೇ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿದ್ದು, ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾತ್ರ ದೊಡ್ಡ-ದೊಡ್ಡ ಗುಂಡಿಗಳಾಗಿದ್ದು, ಪಾದಾಚಾರಿಗಳಿರಲಿ, ಸಾರಿಗೆ ಸಂಸ್ಥೆ ಬಸ್ ಈ ರಸ್ತೆಯಲ್ಲಿ ಬರಲು ಹರಸಾಹಸ ಪಡಬೇಕಿದೆ.

Advertisement

ಒಂದೆಡೆ ಜಿಲ್ಲಾ ಕೇಂದ್ರದ ಕೂಗು ಎದ್ದಿದೆ, ಮತ್ತೊಂದೆಡೆ ಹೆದ್ದಾರಿ ಪಕ್ಕದಲ್ಲೇ ಇರುವ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸುಮಾರು. 50 ಮೀಟರ್ ನಷ್ಟು ರಸ್ತೆ ಎಲ್ಲೆಂದರಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ಪರಿಸ್ಥಿತಿಯ ಧ್ಯೋತಕವೇ ಸರಿ?.

ಕೆ.ಎಸ್.ಆರ್.ಟಿ.ಸಿ.ಯೇ ದುರಸ್ತಿ ಮಾಡಬೇಕು : ಹೆದ್ದಾರಿಗೆ ಅಂಟಿಕೊಂಡಂತಿರುವ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹೆದ್ದಾರಿ ವ್ಯಾಪ್ತಿಯಲ್ಲೂ ಇಲ್ಲ, ಇನ್ನು ಲೋಕೋಪಯೋಗಿ ಇಲಾಖೆ ಇಂಜಿನಿಯರ್, ಇನ್ನು ನಗರಸಭೆ ಅಧಿಕಾರಿಗಳಲ್ಲಿ ಮನವಿ ಮಾಡಿದರೆ ಸಂಪರ್ಕ ರಸ್ತೆ ಆವರದೊಳಗಿರುವುದರಿಂದ ಕೆ.ಎಸ್.ಆರ್.ಟಿ.ಸಿ.ಯವರೇ ದುರಸ್ತಿ ಮಾಡಿಸಿಕೊಳ್ಳಬೇಕೆನ್ನುತ್ತಾರೆ.

ನಿತ್ಯ 800 ಟ್ರಿಪ್ ಬಸ್‌ಗಳ ಪ್ರಯಾಣ: ಪಿರಿಯಾಪಟ್ಟಣ,ಕುಶಾಲನಗರ,ಮಡಿಕೇರಿ, ಮಂಗಳೂರು, ಪುತ್ತೂರು,ಸೂಳ್ಯ,ಧರ್ಮಸ್ಥಳ,ಕಾಸರಗೋಡು, ವಿರಾಜಪೇಟೆ, ಕೇರಳ ರಾಜ್ಯಕ್ಕೂ ಪ್ರಮುಖ ಸಂಪರ್ಕ ನಿಲ್ದಾಣವಾಗಿರುವ ಈ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣಕ್ಕೆ ನಿತ್ಯ ರಾಜ್ಯ, ಹೊರರಾಜ್ಯ, ಅಂತರಜಿಲ್ಲೆಗಳಿಂದ ಸುಮಾರು 200 ಬಸ್ ಗಳಿಂದ ಪ್ರತಿದಿನ 800 ಟ್ರಿಪ್ ಆಗುತ್ತಿದ್ದು, ಈ ಬಸ್‌ಗಳು ನಿತ್ಯ ಇದೇ ಗುಂಡಿ ಬಿದ್ದ ರಸ್ತೆಯ ಮೂಲಕ ಪ್ರಾಯಾಸ ಪಟ್ಟು ಬಸ್ ನಿಲ್ದಾಣ ಪ್ರವೇಶಿಸಬೇಕಿದೆ.

ವೃದ್ದರು-ರೋಗಿಗಳ ಗೋಳು :
ಪಿರಿಯಾಪಟ್ಟಣ,ಕುಶಾಲನಗರ,ಮಡಿಕೇರಿ, ಧರ್ಮಸ್ಥಳ, ವಿರಾಜಪೇಟೆ, ರಾಜ್ಯಕ್ಕೂ ಪ್ರಮುಖ ಸಂಪರ್ಕ ರಸ್ತೆಯಲ್ಲಿರುವ ಈನಿಲ್ದಾಣಕ್ಕೆ ಬರುವ ಬಸ್‌ಗಳಲ್ಲಿ ವೃದ್ದರು, ರೋಗಿಗಳು ಮೈಸೂರಿಗೆ ಬಂದು ಹೋಗಬೇಕಿದ್ದು, ಒಮ್ಮ ಬಸ್ ನಿಲ್ದಾಣಕ್ಕೆ ಬಂದವರು ಮತ್ತೆ ಬಸ್‌ಗಳಲ್ಲಿ ಪ್ರಯಾಣಿಸಲು ಗುಂಡಿ ಬಿದ್ದ ಈ ರಸ್ತೆಯಿಂದ ಅಸಹ್ಯ ಪಡುವಂತಾಗಿದೆ.

Advertisement

ಪ್ರಸವ ಗ್ಯಾರಂಟಿ: ಇನ್ನು ಬಸ್‌ನಲ್ಲೇ ಆಸ್ಪತ್ರೆ ಮತ್ತಿತರ ಕಡೆಗೆ ಹೋಗುವ ಸಂಚರಿಸುವ ಗರ್ಭಿಣಿ, ಬಾಣಂತಿ, ಪುಟ್ಟ ಮಕ್ಕಳ ಸ್ಥಿತಿಯಂತೂ ದೇವರೇ ಕಾಪಾಡಬೇಕಿದೆ. ಆಸ್ಪತ್ರೆಯಲ್ಲಿ ಹೆರಿಗೆಯಾಗುವ ಬದಲು ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುವ ರಸ್ತೆಯಲ್ಲಿ ತೆರಳುವ ಬಸ್ ಹತ್ತಿದರೆ ಬಸ್ ನಲ್ಲೇ ಪ್ರಸವ ವೇದನೆಯಿಂದ ಹೆರಿಗೆಯಾದರೂ ಆಶ್ಚರ್ಯವೇನಿಲ್ಲ.

ಕಲೆದ ನಾಲ್ಕು ವರ್ಷಗಳ ಹಿಂದೆ ಬಿದ್ದ ಬಾರೀ ಮಳೆಯಿಂದ ಈ ರಸ್ತೆಯಲ್ಲಿ ದೊಡ್ಡ ಹೊಂಡಗಳಾಗಿದ್ದು. ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಮಾತ್ರ ಆವರಣದೊಳಗಿನ ಸಂಪರ್ಕ ರಸ್ತೆ ತಮಗೆ ಸಂಬಂಧಿಸಿಯೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದು, ಗುಂಡಿ ಬಿದ್ದ ರಸ್ತೆ ಬಗ್ಗೆ ಹಿಂದಿನ ಡಿಪೋ ಮ್ಯಾನೇಜರ್ ಬಳಿ ಸಾಕಷ್ಟು ಬಾರಿ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ.

ಅಧಿಕಾರಿಗಳೇನಂತಾರೆ :
ನಿಲ್ದಾಣದಲ್ಲಿನ ಸಂಚಾರ ನಿಯಂತ್ರಕರಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಪ್ರಶ್ನಿಸಿದರೆ, ಸರ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆನನುತ್ತಾರೆ, ಇನ್ನು ಇತ್ತೀಚೆಗೆ ವರ್ಗಾವಣೆಗೊಂಡು ಬಂದಿರುವ ಡಿಪೋ ಮ್ಯಾನೇಜರ್ ರನ್ನು ಸಂಪರ್ಕಿಸಿದರೆ. ಸಂಸ್ಥೆಯ ತಾಂತ್ರಿಕ ತಜ್ಞರು ವರ್ಗಾವಣೆಗೊಂಡಿದ್ದಾರೆ, ಕೆಲವರು ನಿರ್ವತ್ತಿ ಹೊಂದಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ಸುಬ್ರಮಣ್ಯ, ಡಿಪೋ ಮ್ಯಾನೇಜರ್. ಹುಣಸೂರು.

ತಾವು ವಾರದ ಹಿಂದಷ್ಟೆ ಮೈಸೂರಿಗೆ ಬಂದಿದ್ದು, ಇನ್ನೊಂದು ವಾರದಲ್ಲಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು. ಅಶೋಕ್ ಕುಮಾರ್, ಕೆ.ಎಸ್.ಆರ್.ಟಿ.ಸಿ. ಡಿ.ಸಿ. ಗ್ರಾಮಾಂತರ ವಿಭಾಗ. ಮೈಸೂರು.

ಸಂಪರ್ಕರಸ್ತೆಯಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಕ್ರಮ ಕೈಗೊಳ್ಳದಿದ್ದಲ್ಲಿ ಜಾಗೃತಿ ಕ್ಲಬ್ ವತಿಯಿಂದ ಸಾರ್ವಜನಿಕರೊಡಗೂಡಿ ಪ್ರತಿಭಟಿಸಲಾಗುವುದು. ಎಚ್.ವೈ.ಕೃಷ್ಣ, ಅಧ್ಯಕ್ಷ, ಜಾಗೃತಿ ಕ್ಲಬ್.ಹುಣಸೂರು.

ಈ ರಸ್ತೆ ಗುಂಡಿ ಬಿದ್ದಿರುವ ಬಗ್ಗೆ ಮಾಹಿತಿ ಇದೆ. ಸರಕಾರದಿಂದ ಯಾವುದೇ ಹಣ ಬಿಡುಗಡೆಯಾಗುತ್ತಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವುದಾದರೂ ಅನುದಾನ ತಂದು ಶೀಘ್ರದಲ್ಲೆ ಗುಂಡಿಗಳನ್ನು ಮುಚ್ಚಲಾಗುವುದು.

ಎಚ್.ಪಿ.ಮಂಜುನಾಥ್,ಶಾಸಕ.

– ಸಂಪತ್ ಕುಮಾರ್,ಹುಣಸೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next