Advertisement

ಮಕ್ಕಳ ಕೈಗೆ ದ್ವಿಚಕ್ರ ವಾಹನ ನೀಡಬೇಡಿ : ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ಮನವಿ

08:42 PM May 12, 2022 | Team Udayavani |

ಹುಣಸೂರು :  ಇತ್ತೀಚಿನ ದಿನದಲ್ಲಿ ರಸ್ತೆ ಅಪಘಾತದಲ್ಲಿ ಯುವಕರೇ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. 18 ವರ್ಷದೊಳಗಿನ ಮಕ್ಕಳ ಕೈಗೆ ದ್ವಿಚಕ್ರ ವಾಹನ ನೀಡದಂತೆ ಹಾಗೂ ಮಕ್ಕಳು ಮೊಬೈಲ್ ಬಳಸುವ ಬಗ್ಗೆ ಪೋಷಕರು ಹೆಚ್ಚು ನಿಗಾ ಇಡುವಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಮನವಿ ಮಾಡಿದರು.

Advertisement

ಪೋಲೀಸ್ ಇಲಾಖೆ ವತಿಯಿಂದ ಹನಗೋಡು ಗ್ರಾ.ಪಂ.ಆವರಣದಲ್ಲಿ ಅಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು ಹನಗೋಡು ಕಾಲೇಜು ಆವರಣದಲ್ಲಿ ದೂರು ಪೆಟ್ಟಿಗೆ ಇಡಲಾಗಿದೆ. ದೂರುಗಳನ್ನು ನೇರವಾಗಿ ಕೊಡಲು ಸಾಧ್ಯವಾಗದಿದ್ದಾಗ ದೂರು ಪೆಟ್ಟಿಗೆಗೆ ಚೀಟಿ ಬರೆದು ಹಾಕಿದರೆ ಕೀಟಲೆ ಮಾಡುವ ಪುಂಡರ ವಿರುದ್ಶಿದ ಕ್ರಮ ಜರುಗಿಸಲು ನೆರವಾಗಲಿದೆ. ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳಲಲ್ಲಿ ಹೆಚ್ಚು ಆರೋಗ್ಯವ ಸಮಸ್ಯೆ ಕಾಡುತ್ತದೆ, ಇದು ಕಾನೂನಿನಲ್ಲಿ ಅಪರಾಧವಾಗಿದೆ. ನಿಮ್ಮ ಸುತ್ತಮುತ್ತ ಬಾಲ್ಯ ವಿವಾಹ ನಡೆದರೆ ತಕ್ಷಣ ಮಾಹಿತಿ ನೀಡುವಂತೆ ಮಬವಿ ಮಾಡಿದರು.

ವಾಹನಗಳ ತಪಾಸಣೆ ವೇಳೆ ಸಾಕಷ್ಟ ಮಂದಿ ಚಾಲನಾ ಪರವಾನಗಿ ಇಲ್ಲದೆ ವಾಹನ ಓಡಿಸುವುದು ಗಮನಕ್ಕೆ ಬಂದಿದ್ದು.ಶೀಘ್ರವೇ ವಾಹನ ಚಾಲಕರಿಗೆ ಹನಗೋಡು ಗ್ರಾಮದಲ್ಲಿ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಕೊಡಿಸುವ ಕಾರ್ಯ ಶೀಘ್ರದಲ್ಲೇ ನಡೆಸಲಾಗುವುದು . ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರವಾನಿಗೆ ಇಲ್ಲದ-ದಾಖಲಾತಿ ಇಲ್ಲದ. ವಿಮೆ ಮಾಡಿಸದ ವಾಹನಗಳು ಕಂಡು ಬಂದಿದೆ ಅಂತಹ ವಾಹನಗಳನ್ನು ಸದ್ಯದಲ್ಲೇ ಸೀಜ್ ಮಾಡಲಾಗುವುದು ಎಂದರು.

ಇದನ್ನೂ ಓದಿ : ಭಾರತದ ಬದಲಿಗೆ ಇಂಡೋನೇಷ್ಯಾದಲ್ಲಿ ಟೆಸ್ಲಾ ಉತ್ಪಾದನಾ ಘಟಕ ಸ್ಥಾಪಿಸಲಿರುವ ಮಸ್ಕ್ ?

ಇನ್ನು ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಸಿಲುಕಿ ದುಬಾರಿ ವೆಚ್ಚದ ಮೊಬೈಲ್ ಕೊಡಿಸುವ ಪೋಷಕರು ಎಚ್ಚರ ವಹಿಸಬೇಕು. ಮುಗ್ದ ಹೆಣ್ಣು ಮಕ್ಕಳನ್ನು ಫೇಸ್ ಬುಕ್, ವ್ಯಾಟ್ಸಪ್, ಇಸ್ಟಾಗ್ರಾಂಗಳಲ್ಲಿ ಮೆಸೇಜ್ ಕಳುಹಿಸಿ ಚಾಟಿಂಗ್ ನೆಪದಲ್ಲಿ ಆಸೆ ಹುಟ್ಟುಸಿ ಬಲೆಗೆ ಬೀಳಿಸಿಕೊಂಡು ಪೋಷಕರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡು ಅವರ ಬದುಕನ್ನೇ ಹಾಳು ಮಾಡುವ ದುರುಳರಿದ್ದಾರೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕೆಂದು ಸೂಚಿಸಿದರು.

Advertisement

ಈ ಸಂದರ್ಭದಲ್ಲಿ ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ವರ್ಷ, ತಾ.ಪಂ.ಮಾಜಿ ಸದಸ್ಯ ಹೆಚ್.ಆರ್. ರಮೇಶ್. ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮಾಂತರ ನಿರ್ಧೇಶಕ ದಾ. ರಾ .ಮಹೇಶ್ . ಗ್ರಾಂ.ಪಂ. ಸದಸ್ಯರಾದ ಸಂತೋಷ್, ಸುರೇಶ್, ಶಫಿವುಲ್ಲಾ, ನಸಿಂಸಾಬ್ಚಿ, ಚಿಕ್ಕೆಗೌಡ, ಹನಗೋಡು ಔಟ್ ಪೋಸ್ಟ್ ನ ಎ.ಎಸ್.ಐ. ಸುರೇಶ್. ಮುಖ್ಯ ಪೇದೆ ನಾಗರಾಜ್. ಮಂಜು ಸೇರಿದಂತೆ ಗ್ರಾಮಸ್ಥರು ಬಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next