Advertisement

ಹುಣಸೋಡು ಕ್ವಾರಿ ದುರಂತದಲ್ಲಿ ಮೃತಪಟ್ಟ 6ನೇ ವ್ಯಕ್ತಿಯ ಗುರುತು ಪತ್ತೆ; ಯಾರು ಆ ವ್ಯಕ್ತಿ?

04:58 PM Sep 12, 2021 | Team Udayavani |

ಶಿವಮೊಗ್ಗ: ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭಾರಿ ಸ್ಪೋಟದಲ್ಲಿ ಮೃತಪಟ್ಟಿದ್ದ ಆರನೆ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಪ್ರಕರಣ ಸಂಭವಿಸಿ ಏಳೂವರೆ ತಿಂಗಳ ಬಳಿಕ ವ್ಯಕ್ತಿಯ ಗುರುತು ಪತ್ತೆಯಾಗಿದೆ.

Advertisement

ಯಾರಿದು ಆರನೇ ವ್ಯಕ್ತಿ?
ಕಲ್ಲಗಂಗೂರು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಐವರ ಗುರುತು ಪತ್ತೆಯಾಗಿ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿತ್ತು. ಆರನೆ ವ್ಯಕ್ತಿಯ ದೇಹ ಸಂಪೂರ್ಣ ಛಿದ್ರವಾಗಿತ್ತು. ಹಾಗಾಗಿ ಆತನ ಗುರುತು ಪತ್ತೆಯಾಗಿರಲಿಲ್ಲ. ಈಗ ಆತನ ಗುರುತು ಪತ್ತೆಯಾಗಿರುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೃತನನ್ನು ಭದ್ರಾವತಿಯ ಕೆ.ಹೆಚ್.ನಗರದ ಆಟೋ ಚಾಲಕ ಶಶಿ (32) ಎಂದು ತಿಳಿದು ಬಂದಿದೆ.

ಗುರುತು ಪತ್ತೆಯಾಗಿದ್ದು ಹೇಗೆ?
ಛಿದ್ರವಾಗಿದ ದೇಹದ ಭಾಗಗಳನ್ನು ವಶಕ್ಕೆ ಪೆಡದಿದ್ದ ಪೊಲೀಸರು ಅವುಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದ್ದರು. ಬೆಂಗಳೂರಿನ ಮಡಿವಾಳದಲ್ಲಿರುವ ಎಫ್ಎಸ್ಎಲ್ ಲ್ಯಾಬ್’ಗೆ ಕಳುಹಿಸಲಾಗಿತ್ತು. ಸೆಪ್ಟೆಂಬರ್ 10ರಂದು ಡಿಎನ್ಎ ಪರೀಕ್ಷೆಯ ವರದಿ ಬಂದಿದೆ.

ಇದನ್ನೂ ಓದಿ :ಸಿಮೆಂಟ್ ಲಾರಿ – ಜೀಪು ನಡುವೆ ಭೀಕರ ಅಪಘಾತ : ಏಳು ಮಂದಿ ಸಾವು, ನಾಲ್ವರ ಸ್ಥಿತಿ ಗಂಭೀರ

2021ರ ಜನವರಿ 21ರ ರಾತ್ರಿ 10.20ರ ಹೊತ್ತಿಗೆ ಕಲ್ಲಗಂಗೂರು ಗ್ರಾಮದ ಸರ್ವೇ ನಂಬರ್ 2ರಲ್ಲಿರುವ ಎಸ್.ಎಸ್.ಕ್ರಷರ್ ಬಳಿ ಭಾರಿ ಪ್ರಮಾಣದ ಸ್ಪೋಟಕ ಸ್ಪೋಟಗೊಂಡಿತ್ತು. ಘಟನೆಯಲ್ಲಿ ಆರು ಮಂದಿ ಮೃತರಾಗಿದ್ದರು. ಸ್ಪೋಟದ ತೀವ್ರತೆ ನೂರಾರು ಕಿ.ಮೀ ವರೆಗೆ ವ್ಯಾಪಿಸಿತ್ತು. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next