Advertisement

Hunasagi: ಬೈಕ್ ಹಾಯ್ದು ಇಬ್ಬರು ಮಹಿಳೆಯರು ಸಾವು

06:12 PM Jun 25, 2024 | Team Udayavani |

ಹುಣಸಗಿ: ವಾಯುವಿಹಾರ ನಡೆಸುತ್ತಿರುವಾಗ ಬೈಕ್ ಹಾಯ್ದು ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಕಾಮನಟಗಿ ಗ್ರಾಮದ ಹೊರವಲಯದ (ಹುಣಸಗಿ-ನಾರಾಯಣಪುರ) ಮುಖ್ಯರಸ್ತೆಯಲ್ಲಿ ಜೂ.25 ಮಂಗಳವಾರ ಬೆಳಗಿನ ಜಾವ ನಡೆದಿದೆ.

Advertisement

ಮಲ್ಲಮ್ಮ ಬಸಪ್ಪ (47) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರಾದ ಲಕ್ಷ್ಮೀಭಾಯಿ ಸಿದ್ದಪ್ಪ ಮಾಳಿ(45) ಖಾಸಗಿ ಆಸ್ಪತ್ರೆಗೆ ಕರೆದ್ಯೊಯುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.

ಮೃತರು ಕಾಮನಟಗಿ ಗ್ರಾಮದವರಾಗಿದ್ದು, ಬೆಳಗ್ಗೆ ರಸ್ತೆಯಲ್ಲಿ ವಾಯು ವಿಹಾರ ನಡೆಸುತ್ತಿದ್ದ ವೇಳೆ ಹುಣಸಗಿಯಿಂದ ಕೊಡೇಕಲ್‌ಗೆ ಹೊರಟಿದ್ದ ಬೈಕ್ ಮಹಿಳೆಯರ ಮೇಲೆ ಹಾಯ್ದಿದ್ದೆ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.

ಈ ಕುರಿತು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next