Advertisement

Humpback whale: 13,046 ಕಿ.ಮೀ. ಕ್ರಮಿಸಿದ ತಿಮಿಂಗಿಲ: ದೀರ್ಘ‌ ಯಾನ

10:24 AM Dec 16, 2024 | Team Udayavani |

ಲಂಡನ್‌: ಹುಲಿ, ಚಿರತೆಯಂಥ ಪ್ರಾಣಿಗಳು ಸಂಗಾತಿಯನ್ನು ಅರಸುತ್ತಾ ಕಿ.ಮೀ.ಗಟ್ಟಲೆ ಪ್ರಯಾಣಿಸುವುದನ್ನು
ನೋಡಿರುತ್ತೀರಿ. ಈಗ ತಿಮಿಂಗಿಲವೊಂದು ಇದೇ ರೀತಿ ಸುದೀರ್ಘ‌ ಯಾನದ ಮೂಲಕ ದಾಖಲೆ ಬರೆದಿದೆ.

Advertisement

ಪೂರ್ವ ಆಫ್ರಿಕಾದ ಮೊಜಾಂಬಿಕ್‌ ದೇಶದ ವಿಜ್ಞಾನಿ ಏಕಟೆರಿನಾ ಕಲಾಶ್ನಿಕೋವಾ ಈ ಅಪರೂಪದ ಮಾಹಿತಿ  ಬಹಿರಂಗಪಡಿಸಿದ್ದಾರೆ. ಬಿಸಿಎಸ್‌ಎಸ್‌ (ಬಝಾರುತೊ ವೈಜ್ಞಾನಿಕ ಅಧ್ಯಯನ ಕೇಂದ್ರ)ನಲ್ಲಿ ವಿಜ್ಞಾನಿಯಾಗಿರುವ ಕಲಾಶ್ನಿಕೊವಾ, ಹಂಪ್‌ಬ್ಯಾಕ್‌ ತಿಮಿಂಗಿಲವೊಂದು ಅತಿದೂರ ಕ್ರಮಿಸಿ ದಾಖಲೆ ನಿರ್ಮಿಸಿರುವುದನ್ನು ಪತ್ತೆಹಚ್ಚಿದ್ದಾರೆ.

ಮೆಗಾಪೆಟ್ರಾ ನೊವಾಂಗ್ಲಿಯಾಯೆ ತಳಿಗೆ ಸೇರಿದ ಈ ತಿಮಿಂಗಿಲ ಈಗಾಗಲೇ 13,046 ಕಿ.ಮೀ. ಸಂಚರಿಸಿ ದಾಖಲೆ ನಿರ್ಮಿಸಿದೆ. ಒಟ್ಟು 19,000 ಕಿ.ಮೀ.ವರೆಗೆ ಸಾಗುವ ನಿರೀಕ್ಷೆಯಿದೆ.

ಈ ಯಾನದ ಮೂಲಕ ಅದು 3 ಸಮುದ್ರಗಳನ್ನು ಸಂಪರ್ಕಿಸಲಿದೆ! ಕೊಲಂಬಿಯಾದ ಟ್ರಿಬುಗಾ ಕೊಲ್ಲಿಯಿಂದ ಪ್ರಾರಂಭವಾದ ಅದರ ಯಾನ, ತಾಂಜಾನಿ ಯಾದ ಝಾಂಜಿಬಾರ್‌ ಕರಾವಳಿವರೆಗೆ ಮುಂದುವರಿದಿದೆ.ಆಹಾರ, ಪರಿಸರ ಬದಲಾವಣೆ, ಸಂಗಾತಿಗಾಗಿ ಹುಡುಕಾಟ ಈ ಸಂಚಾರಕ್ಕೆ ಕಾರಣ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next