Advertisement

ಹೆಸರು ಬೆಳೆಗೆ ತೇವಾಂಶ ಕೊರತೆ: ರೈತರಲ್ಲಿ ಆತಂಕ

08:35 AM Jun 25, 2019 | Suhan S |

ದೋಟಿಹಾಳ: ನಿಗದಿತ ಅವಧಿಗಿಂತ ಮೊದಲೇ ಬಿತ್ತನೆಯಾಗಿರುವ ಹೆಸರು ಬೆಳೆ ಸರಿಯಾದ ಮಳೆ ಇಲ್ಲದೇ ತೇವಾಂಶದ ಕೊರತೆ ಎದುರಿಸುವಂತ್ತಾಗಿದೆ.

Advertisement

ರೋಹಿಣಿ ಮಳೆಗೆ ಮುಂಗಾರು ಹಂಗಾಮು ಬಿತ್ತನೆಗೆ ಸಕಾಲ ಎಂಬುದು ಕೃಷಿ ಇಲಾಖೆ ಸೂಚನೆ. ಬಿತ್ತನೆಗೆ ನಿಗದಿಯಾಗಿರುವ ಅವಧಿಗಿಂತ ಮೊದಲೇ ಹೆಸರು ಬಿತ್ತನೆ ಮಾಡಿದರೆ ಮೂರು ತಿಂಗಳಲ್ಲೇ ಕಟಾವಿಗೆ ಬರುವ ಈ ಬೆಳೆಯ ನಂತರ ಸಜ್ಜೆ ಅಥವಾ ಹುರುಳಿ ಬಿತ್ತನೆ ಮಾಡಬಹುದು ಎಂಬುದು ರೈತರ ಲೆಕ್ಕಾಚಾರವಾಗಿತ್ತು. ಆದರೆ ತಾಲೂಕಿನಲ್ಲಿ ಅಲಲ್ಲಿ ಕೃತಿಕಾ ಮಳೆ ಸುರಿದಿತ್ತು. ಬಿತ್ತನೆಗೆ ಅಗತ್ಯವಿದ್ದಷ್ಟು ಹಸಿಯಾಗಿದ್ದಕ್ಕೆ ರೈತರು ಒಳ್ಳೆ ಅವಕಾಶ ಎಂದೇ ಭಾವಿಸಿ ಹೆಸರು ಬಿತ್ತನೆ ಮಾಡಿದ್ದಾರೆ. ಕೃತಿಕಾ ಮಳೆಗೆ ಬಿತ್ತನೆಯಾಗಿರುವ ಹೆಸರು ಈಗಾಗಲೇ 25-30 ದಿನದ ಬೆಳೆ ಇದೆ. ಇದರ ಅವ 75-80 ದಿನಗಳ ಮಾತ್ರ. ಮಳೆ ಕೊರತೆಯಿಂದ ಶೇ. 75ರಷ್ಟು ಬೆಳೆ ಕೈಕೊಟ್ಟಿದೆ ಎಂದು ರೈತರು ತಿಳಿಸಿದರು. ಕಳೆದ 1-2 ವಾರಗಳಿಂದ ಮಳೆ ಸುಳಿವಿಲ್ಲ, ವಾತಾವರಣದಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದೆ. ತಕ್ಷಣ ಮಳೆ ಸುರಿದರೆ ಬಿತ್ತನೆಯಾಗಿರುವ ಹೆಸರು ಬೆಳೆ ಉಳಿಯುತ್ತದೆ. ಮಳೆಯಾಗದಿದ್ದರೆ ಎಳೆಯ ನಾಟಿಯಾಗಿರುವ ಬೆಳೆ ಕಮರುತ್ತದೆ. ಬೀಜ, ಗೊಬ್ಬರ, ಗಳೆ ಬಾಡಿಗೆಗಳಿಗೆ ರೈತರು ಸಾಕಷ್ಟು ಖರ್ಚು ಮಾಡಿದ್ದಾರೆ. ಮಳೆ ಆಗದಿದ್ದರೆ ರೈತರು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ. ಒಂದು ವಾರಗಳಿಂದ ಮೋಡ ಕವಿಯುತ್ತಿದ್ದರೂ ಮಳೆ ಸುರಿಯುತ್ತಿಲ್ಲ. ದೋಟಿಹಾಳ, ಕೇಸೂರು, ಕ್ಯಾದಗುಂಪಿ, ಜಾಲಿಹಾಳ, ಮುದೇನೂರು, ಶಿರಗುಂಪಿ, ಗೋತಗಿ ಗ್ರಾಮ ವ್ಯಾಪ್ತಿಯಲ್ಲಿ ಬಿತ್ತನೆ ಕೈಗೊಂಡ ರೈತರು ಆತಂಕಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next