Advertisement

ಹಂಬಲ್‌ ಪೊಲಿಟಿಷಿಯನ್‌ ನೊಗ್‌ರಾಜ್‌; ನಕ್ಕು ನಗಿಸುವ ರಾಜಕೀಯ ವಿಡಂಬನೆ

11:52 PM Jan 08, 2022 | Team Udayavani |

ಬೆಂಗಳೂರು: ವರ್ಷದ ಮೊದಲ ವೆಬ್‌ ಸರಣಿ ಹಂಬಲ್‌ ಪೊಲಿಟಿಷಿಯನ್‌ ನೊಗ್‌ರಾಜ್‌ (2022) ಹೇರಳ ಪಾಪ್‌-ಸಂಸ್ಕೃತಿಯ ಉಲ್ಲೇಖಗಳಿದ್ದು, ಅಪಾರ ವೀಕ್ಷಕರ ಮೆಚ್ಚುಗೆ ಗಳಿಸಿದೆ.

Advertisement

ಕರ್ನಾಟಕವು ಚುನಾವಣೆ ಹೊಸ್ತಿಲಲ್ಲಿದ್ದು, ಪಕ್ಷಗಳು ತಮ್ಮ ಮತಗಳ ಪಾಲು ಪಡೆಯಲು ಶ್ರಮಿಸುತ್ತಿವೆ. ಒನ್‌ ಬಿಗ್‌ ಪಾರ್ಟಿ(ಒಬಿಪಿ) ರಾಜ್ಯದ 224 ವಿಧಾನಸಭಾ ಸ್ಥಾನಗಳಲ್ಲಿ ಕೇವಲ 36 ಗೆಲ್ಲಲು ಶಕ್ತವಾಗುತ್ತದೆ. ಅದು ವಿರೋಧಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿರುತ್ತದೆ. ಕೃಷ್ಣ ಗುಂಡುಬಾಲಾ ಅಲಿಯಾಸ್‌ ಕೆಜಿಬಿ ನೇತೃತ್ವದ ಮೋಸ್ಟ್‌ ಸೆಕ್ಯುಲರ್‌ ಪಾರ್ಟಿ(ಎಂಎಸ್‌ಪಿ) ಮತ್ತು ಫ್ಯಾಮಿಲಿ ರನ್‌ ಪಾರ್ಟಿ(ಎಫ್ಆರ್‌ಪಿ) ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧಿಕಾರದ ನಿಯಂತ್ರಣ ಹೊಂದಿರುತ್ತದೆ. ತನ್ನನ್ನು ತಾನು “ಹಂಬಲ್‌ ಪೊಲಿಟಿಷಿಯನ್‌’ ಎಂದು ಕರೆಸಿಕೊಳ್ಳುವ ನೊಗ್‌ರಾಜ್‌ ತನ್ನ ಪರ್ಸನಲ್‌ ಅಸಿಸ್ಟೆಂಟ್‌ ಮಂಜುನಾಥ್‌ (ವಿಜಯ್‌ ಚೆಂಡೂರ್‌) ನೆರವಿನಿಂದ ಸಿಂಹಪಾಲು ಪಡೆದು ಮುಖ್ಯಮಂತ್ರಿಯಾಗುತ್ತಾನೆ.

ಡ್ಯಾನಿಶ್ ಸೇಠ್ (ನೊಗ್‌ರಾಜ್‌ ಪಾತ್ರಧಾರಿ) ಅವರ ಒಂದು ನಿಮಿಷದ ವಿವಿಧ ವಿಷಯಗಳ ಮೇಲಿನ ಪದಗಳ ಹಾಸ್ಯ, ತಮಾಷೆ, ವಿಡಂಬನಾತ್ಮಕ ವಿನೋದದ ವೀಡಿಯೋಗಳ ಮೂಲಕ ಪರಿಚಿತರಾದವರಿಗೆ ಒಂದು ಅತ್ಯುತ್ತಮ ಸರಣಿಯೊಂದಿಗೆ ಇವೆಲ್ಲವನ್ನೂ ಕಟ್ಟಿಕೊಡಲಾಗಿದೆ.

ಹಂಬಲ್‌ ಪೊಲಿಟಿಷಿಯನ್‌ ನೊಗ್‌ರಾಜ್‌ ನಿಮ್ಮನ್ನು ರಾಜಕೀಯದ ಏಳು ಬೀಳುಗಳ ಮೂಲಕ ಕೊಂಡೊಯ್ಯುತ್ತದೆ.

ಭ್ರಷ್ಟಾಚಾರದಿಂದ ಮಹತ್ವಾಕಾಂಕ್ಷೆಯ ಅನೈತಿಕತೆ ವರೆಗೆ ವಿಷಯಗಳನ್ನ ಹೊಂದಿದೆ. ತಕ್ಕಷ್ಟು ಪ್ರಮಾಣದ ಹಾಸ್ಯ, ಆ್ಯಕ್ಷನ್‌ ಮತ್ತು ಸಾಹಸ ಹೊಂದಿರುವ ಈ ಸರಣಿ ನಿಜಕ್ಕೂ ಪಕ್ಕೆ ಹಿಡಿದು ನಗಿಸುವಂತಹ, ಜತೆಗೆ ಆಲೋಚನೆಗೆ ಹಚ್ಚುವಂತಹ ರಾಜಕೀಯ ವಿಡಂಬನೆಯಾಗಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next