Advertisement
ಪೊಲೀಸರ ಮಾನವೀಯ ಹಲವು ಕಾರ್ಯಗಳು ನಡೆಯುತ್ತಿರುವ ಮದ್ಯೆ ಇಲ್ಲೊಬ್ಬು ಮಹಿಳಾ ಪಿಎಸ್ ಐ ಮಾನವೀಯತೆ ಜತೆಗೆ ಸಮಯೋಚಿತ ಕೆಲಸದಿಂದ ಮಗನ ಮಡಿಲಿಗೆ ವೃದ್ದೆ ತಾಯಿಯನ್ನು ಸೇರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂತಹ ಮೆಚ್ಚುಗೆಗೆ ಪಾತ್ರರಾದವರು ಸುಬ್ರಹ್ಮಣ್ಯ ಠಾಣೆ ಎಸ್ ಐ ಸಹಿತ ಠಾಣೆಯ ಸಿಬಂದಿಗಳು.
Related Articles
Advertisement
ಸಾಮಾಜಿಕ ಜಾಲತಾಣದ ಸಂದೇಶ ಬೆಂಗಳೂರಿಗೂ ತಲುಪಿ ಬೆಂಗಳೂರು ನಿಂದ ಸುಬ್ರಹ್ಮಣ್ಯ ಠಾಣೆಗೆ ಬಂದ ಕರೆಯ ಆದಾರದಲ್ಲಿ ವ್ರದ್ದೆ ಬೆಂಗಳೂರಿನ ಕುರುಬನ ಹಳ್ಳಿ ದೊಡ್ಡ ಬಳ್ಳಾಪುರದವರು ಎಂಬುದು ಪತ್ತೆಯಾಯಿತು. ವ್ರದ್ದೆಯ ಮಗನ ಸಂಪರ್ಕ ದೊರೆತು ಬೆಂಗಳೂರುನಿಂದ ಮಗನನ್ನು ಕರೆಸಿ ಮಗನ ಮಡಿಲಿಗೆ ತಾಯಿ ವ್ರದ್ದೆಯನ್ನು ಒಪ್ಪಿಸಿದ್ದಾರೆ. ವೃದ್ದೆಯ ಮಗ ಬರುವವರೆಗೂ ಅವರಿಗೆ ಊಟ ತಿಂಡಿ ನೀಡಿ ಪ್ರೀತಿಯಿಂದ ಅವರನ್ನು ನೋಡಿಕೊಂಡಿದ್ದಾರೆ ಎಸ್ಐ ಓಮನರವರು.ಇವರಿಗೆ ಠಾಣೆಯ ಸಿಬಂದಿಗಳಾದ ನಾರಾಯಣ ಪಾಟಾಳಿ, ಭೀಮನಗೌಡ, ಬಸವರಾಜ್, ಲಕ್ಷ್ಮಿ, ಇಕ್ಬಾಲ್ ಸಹಕರಿಸಿದ್ದರು.
ಬೆಂಗಳೂರು ನಿಂದ ಕಣ್ತಪ್ಪಿ ಅದೇಗೋ ಸುಬ್ರಹ್ಮಣ್ಯ ಬಂದು ತಲುಪಿದ್ದ ವೃದ್ದೆ. ಒಂದೇಡೆ ನೆಟ್ಟಣ ರೈಲ್ವೆ ಸ್ಟೇಶನ್ ನಿಂದ ಸುಬ್ರಹ್ಮಣ್ಯ ಪೇಟೆ ತಲುಪಿದ್ದರು. ಅಮ್ಮ ಕಾಣುತಿಲ್ಲ ಮನೆಯಿಂದ ಕಾಣೇಯಾಗಿದ್ದಾರೆ ಎಂದು ಪರಿತಪಿಸುತಿದ್ದ ಮಗ ತಾಯಿ ದೊರೆತ ಖುಷಿಯಲ್ಲಿ ಸುಬ್ರಹ್ಮಣ್ಯ ಎಸ್ ಐ ಹಾಗೂ ಪೊಲೀಸರ ಕಾರ್ಯಕ್ಕೆ ಮನತುಂಬಿ ಕೃತಜ್ಞತೆ ಸಲ್ಲಿಸಿದ್ದಾನೆ. ಒಟ್ಟಿನಲ್ಕಿ ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ ಹಾಗೂ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.