Advertisement

ಮನೆ ಬಿಟ್ಟು ಬಂದಿದ್ದ ಕಂದಮ್ಮಳನ್ನು ಸ್ಥಳೀಯರ ಸಹಕಾರದಲ್ಲಿ ಪೋಷಕರಿಗೆ ಒಪ್ಪಿಸಿದ ಪೊಲೀಸರು

07:12 PM Nov 09, 2021 | Team Udayavani |

ದಾಂಡೇಲಿ : ಮನೆ ಬಿಟ್ಟು ಬಂದಿದ್ದ ಪುಟ್ಟ ಕಂದಮ್ಮಳನ್ನು ಸ್ಥಳೀಯರ ಸಹಕಾರದಲ್ಲಿ ಪೊಲೀಸರು ಪೋಷಕರಿಗೆ ಒಪ್ಪಿಸಿದ ಘಟನೆ ಮಂಗಳವಾರ ಸಂಜೆ ದಾಂಡೇಲಿ ನಗರದಲ್ಲಿ ನಡೆದಿದೆ.

Advertisement

ನಗರದ ಹಳೆದಾಂಡೇಲಿಯ ಮಂಜು ಅವರ ಮನೆಯಲ್ಲಿದ್ದ 4 ವರ್ಷದ ಹೆಣ್ಣು ಮಗು ನುಕುಶಾ ಮಂಜುನಾಥ ಹರಕೇರಿ ಎಂಬಾಕೆ ಮನೆಯಿಂದ ಇಂದು ಸಂಜೆ ಹೊರ ಬಂದವಳು ಮನೆಗೆ ಹೋಗಲು ಗೊತ್ತಾಗದೇ ಹಳೆ ದಾಂಡೇಲಿಯ ಮುಖ್ಯ ರಸ್ತೆಗೆ ಬಂದಿದ್ದಾಳೆ. ಈಕೆಯನ್ನು ಗಮನಿಸಿದ ಸ್ಥಳೀಯರಾದ ಅಷ್ಪಾಕ್ ಅಹ್ಮದ್ ಕೊರ್ಪಾಲಿ ಮತ್ತು ಯೂನುಸ್ ಅವರುಗಳು ಅವಳನ್ನು ಮಾತನಾಡಿಸಿ, ಅವಳ ಹೆಸರು ಕೇಳಿದಾಗ ಹೆಸರು ಹೇಳಿದ್ದಾಳೆ. ಆದರೆ ಮನೆ ಎಲ್ಲಿ ಎಂದು ಕೇಳಿದಾಗ ಅದಕ್ಕೆ ಅವಳು ಉತ್ತಿರಿಸಿಲ್ಲ. ಕೂಡಲೆ ಮಗುವನ್ನು ಎತ್ತಿಕೊಂಡು ಹಳೆದಾಂಡೇಲಿಯ ಹಲವೆಡೆಗಳಿಗೆ ಕರೆದುಕೊಂಡು ಹೋಗಲಾಯಿತಾದರೂ ಮಗುವಿನ ಮನೆ ಪತ್ತೆಯಾಗಿರಲಿಲ್ಲ. ಕೊನೆಗೆ ಮಗುವನ್ನು ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಮಗುವಿನ ಪೋಷಕರ ಪತ್ತೆಗಾಗಿ ತಕ್ಷಣವೆ ಎಎಸೈ ನಾರಾಯಣ ರಾಥೋಡ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪ್ರೇಮಾನಂದ ಗಾಂವಕರ ಮತ್ತು ಮಂಜುನಾಥ ಹಾರುಗೋಪ ಅವರ 112 ತುರ್ತು ಸೇವಾ ತಂಡ ಮಗುವಿನ ಹಳೆದಾಂಡೇಲಿಯಲ್ಲಿರುವ ಮನೆಯನ್ನು ಪತ್ತೆ ಮಾಡಿ ಪೋಷಕರಾದ ಮಂಜು ಮತ್ತವರ ಕುಟುಂಬದವರನ್ನು ಠಾಣೆಗೆ ಕರೆಸಿ ಮಗುವನ್ನು ಒಪ್ಪಿಸಿದ್ದಾರೆ. ಮಗುವಿನ ತಂದೆ ತಾಯಿ ನರಗುಂದದಲ್ಲಿದ್ದು, ಮಾಮನ ಮನೆಯಾದ ಹಳೆದಾಂಡೇಲಿಯ ಮಂಜು ಅವರ ಮನೆಯಲ್ಲಿ ಬಿಟ್ಟು ಹೋಗಿದ್ದರು. ಹಾಗಾಗಿ ಮಗುವಿಗೆ ಮನೆಯ ವಿಳಾಸವನ್ನು ಹೇಳಲು ಅಸಾಧ್ಯವಾಗಿತ್ತು. ಇನ್ನೂ ಮನೆಯಲ್ಲಿ ಅಜ್ಜಿಯೊಬ್ಬರಿದ್ದು, ಉಳಿದವರು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಮಗುವನ್ನು ಸಕಾಲಕ್ಕೆ ಠಾಣೆಗೆ ಒಪ್ಪಿಸಿ, ಮಗುವಿನ ಬಗ್ಗೆ ಕಾಳಜಿ ವಹಿಸಿದ ಅಷ್ಪಾಕ್ ಅಹ್ಮದ ಕೊರ್ಪಾಲಿ ಮತ್ತು ಯೂನುಸ್ ಹಾಗೂ ಪೊಲೀಸ್ ತಂಡದ ತಡವರಿಯದ ಸ್ಪಂದನೆಗೆ ಶ್ಲಾಘನೆ ವ್ಯಕ್ತವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next