Advertisement

ಮೈಸೂರಿನಲ್ಲೊಬ್ಬ ವೀರಬಾಹು: ಅನಾಥ ಶವಗಳಲ್ಲಿ ದೇವರನ್ನು ಕಾಣುವ ಬಾಡಿಮಿಯಾ

05:31 PM Mar 30, 2021 | Team Udayavani |

ಈತ ಓದಿದ್ದು ಬರೀ ಮೂರನೇ ಕ್ಲಾಸ್‌. ಮುಂದಿನ ಶಿಕ್ಷಣ ತಲೆಗೆ ಹತ್ತಲಿಲ್ಲ.ಒಂಬತ್ತು ವರ್ಷಕ್ಕೇ ಸ್ಕೂಲ್‌ ಬಿಟ್ಟ ಈ ಹುಡುಗ ಮುಂದೇನು ಮಾಡಿದ ಎಂಬುದನ್ನು ತಿಳಿಯಲು ಹೊರಟರೆ ಬೆರಗಾಗುತ್ತದೆ. ಈತನ ಸಾಮಾಜಿಕ ಕಾರ್ಯ, ಮಾನವೀಯ ಪ್ರೀತಿ, ಅಂತಃಕರಣ ನೋಡಿದರೆ ಈತನ ಮೇಲೆ ಗೌರವ, ಪ್ರೀತಿ ಉಕ್ಕುತ್ತದೆ.

Advertisement

ಅಂದಹಾಗೆ ಈತನ ಹೆಸರು ಅಯೂಬ್‌ ಅಹಮ್ಮದ್‌. ಮೈಸೂರಿನವರಾದ ಇವರಿಗೆ 42 ವರ್ಷ ವಯಸ್ಸಾಗಿದೆ. ಅನಾಥ ಶವಗಳಿಗೆ ಅವರವರ ಧರ್ಮದ ವಿಧಿವಿಧಾನಗಳ ಪ್ರಕಾರವೇಅಂತ್ಯಸಂಸ್ಕಾರ ಮಾಡುವ ಕೆಲಸವನ್ನು ಈತ ಕಳೆದ22 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. “ಇಲ್ಲಿಯವರೆಗೆ ಸಾವಿರಾರು ಅನಾಥ ಶವಗಳಿಗೆಅಂತ್ಯಸಂಸ್ಕಾರ ಮಾಡಿದ್ದೇನೆ. ಶವಗಳು ದೇವರುಇದ್ದಂಗೆ. ನಮುªಕೆ ಏನೂ ಭಯ- ಭೀತಿ ಆಗಲ್ಲ. ಪ್ರತಿದಿನ ಎರಡ್ಮೂರು ಬಾಡಿಗಳಿಗಾದರೂ ಗೌರವ ಸಲ್ಲಿಸುತ್ತೇನೆ. ಒಮ್ಮೊಮ್ಮೆ ರಸ್ತೆ ಮೇಲೆ ಅನಾಥವಾಗಿಬಿದ್ದಿರುವ ಶವವನ್ನು ಕಾರಿನಲ್ಲಿ ಎತ್ತಿಹಾಕಲುಹರಸಾಹಸಪಟ್ಟಿದ್ದೇನೆ. ಅನಾಥ ಶವಗಳಿಗೆಅಂತ್ಯಸಂಸ್ಕಾರ ಮಾಡುವುದೇ ನನ್ನ ಬದುಕಿನಸಾರ್ಥಕ ಕ್ಷಣ’ ಎನ್ನುವ ಅಯೂಬ್‌, ತನ್ನ ಕೆಲಸಕ್ಕೆ ಯಾವುದೇ ಪ್ರತಿಫಲ ಬಯಸದ ಕಾಯಕಜೀವಿ.

ಏನಾದರೂ ಒಳ್ಳೇದು ಮಾಡ್ಬೇಕು :

“ನಂಗೆ ಶಾಲೆಗೆ ಹೋಗೋದು ಅಂದ್ರೆ ಇಷ್ಟ ಆಗಲಿಲ್ಲ, ಮೇಡಂಗೆ ಏನಾದರೊಂದು ಸುಳ್ಳು ಹೇಳಿ ಓಡಿ ಬರ್ತಿದ್ದೆ, ಅನಾಥರಿಗೆ, ಬಡವರಿಗೆ, ಭಿಕ್ಷುಕರಿಗೆ ಏನಾದರೂ ಹೆಲ್ಪ್  ಮಾಡ್ಬೇಕು ಅನಿಸ್ತಿತ್ತು. ಈ ಸಮಾಜ ಯಾಕ್‌ ಹಿಂಗೆ, ಎಲ್ರೂ ಮನುಷ್ಯರೇ ತಾನೇ?ಅಂದ್ಮೇಲೆ ಈ ಜಾತಿ -ಧರ್ಮ, ಗರೀಬ್‌ – ಅಮೀರ್‌ ಅಂತ ಯಾಕೆ ಬೇರೆ ಮಾಡ್ತಾರೆ? ಅನಿಸುತ್ತಿತ್ತು. ಆಗೆಲ್ಲಾ ನಂಗೆನೆನಪಾಗಿದ್ದು ಅಪ್ಪ ಓದಿಸಿದ ಖುರಾನ್‌.”ಮಾನವೀಯತೆಗೆ ಜಯವಾಗಲಿ’ ಎನ್ನುವ ತತ್ವಅವರಿಂದಲೇ ಮಾಲುಮ್‌ ಆಯ್ತು ಎನ್ನುತ್ತಾರೆ ಅಯೂಬ್‌.

“ಮನುಷ್ಯನಾಗಿ ಹುಟ್ಟಿದಮ್ಯಾಗೆ ಏನಾದರೂ ಒಳ್ಳೇದು ಮಾಡ್ಬೇಕು, ಇದ್ದಷ್ಟು ದಿವಸ್‌ ಸಮಾಜಕ್ಕಾಗಿ ಮೈನತ್‌ ಮಾಡ್ಬೇಕು, ಮತ್ತೂಬ್ಬರ ಕಣ್ಣೀರು ಒರೆಸುವ ದಿಲ್‌ ನಮುª ಇಬೇìಕು. ಈಗ ನಾನುಅದನ್ನೇ ಮಾಡ್ತಾ ಇದ್ದೀನಿ’ ಎನ್ನುವ ಅಯೂಬ್‌ ಅವರನ್ನು ಮೈಸೂರಿನ ಜನ “ಬಾಡಿಮಿಯಾ’, “ಮೈಸೂರಿನ ವೀರ ಬಾಹು’ಎಂದೂ ಪ್ರೀತಿಯಿಂದ ಕರೆಯುತ್ತಾರೆ.

Advertisement

ಶವದೊಂದಿಗೆ ಫಸ್ಟ್ ರೌಂಡ್‌! :

“ಬಾಡಿಮಿಯಾ’ನಾಗಿ ಇಪ್ಪತ್ತೆರಡು ವರ್ಷ ಪೂರೈಸಿದ ಅಯೂಬ್‌ ಹಿಂದೊಮ್ಮೆ ನಡೆದ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ: “ಹೊಸಕಾರೊಂದನ್ನು ಖರೀದಿ ಮಾಡಲು ಬಸ್‌ನಲ್ಲಿಗುಂಡ್ಲುಪೇಟೆಗೆ ಹೋಗುತ್ತಿದ್ದೆ. ಬಂಡಿಪಾಳ್ಯದ ಬಳಿ ಚಾಲಕ ಬಸ್‌ ನಿಲ್ಲಿಸಿದ. ನೋಡಿದರೆ, ಜನಸಮೂಹದ ಮಧ್ಯೆ ಶವವೊಂದು ಬಿದ್ದಿತ್ತು. ಸಂಜೆ ಹೊಸ ಕಾರಿನೊಂದಿಗೆ ಅದೇ ಮಾರ್ಗದಲ್ಲ ಬರುತ್ತಿದ್ದೆ, ಆ ಶವ ಅಲ್ಲೇ ಬಿದ್ದಿತ್ತು. ಅಲ್ಲಿದ್ದವರಿಗೆ ಕೇಳಿದಾಗ, “ಇವರಿಗೆ ಯಾರೂ ದಿಕ್ಕಿಲ್ಲ’, ಎಂದರು.ಯಾರೂ ದಿಕ್ಕಿಲ್ಲ ಅನ್ನುವ ಮಾತು ಕೇಳಿಸಂಕಟವಾಯಿತು. “ಯಾರೂ ಇಲ್ಲ ಅನ್ನುವಮಾತೇಕೆ? ಮೈ ಹೂಂ ನಾ’ ಎಂದೆ. ನಂತರ ನನ್ನಹೊಸ ಕಾರಿನಲ್ಲಿ ಆ ಶವವನ್ನು ಹಾಕಿಕೊಂಡು ಆಸ್ಪತ್ರೆಗೆ ತಲುಪಿಸಿದೆ…’

“ಎಲ್ಲರೂ ಹೊಸ ಕಾರ್‌ ಖರೀದಿಸಿ ಯಾವುದಾದರೂ ಮಂದಿರ, ಮಸೀದಿ,ಚರ್ಚಿಗೋ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಾರೆ. ಅಪ್ಪ-ಅಮ್ಮ, ಮಕ್ಕಳು, ಹೆಂಡ್ತಿಗೆ ಕೂಡಿಸಿಕೊಂಡು ಒಂದು ಫಸ್ಟ್ ರೌಂಡ್‌ ಹೋಗ್ತಾರೆ. ಆದರೆ ಮೈ ವೈಸೇ ನಹೀ ಕಿಯಾ,ನಯಾ ಕಾರಿನಾಗೇ ಡೆಡ್‌ ಬಾಡಿಗೆ ಹಾಕೊಂಡ್‌ ಹೋದೆ’ ಎನ್ನುತ್ತಾರೆ ಅಯೂಬ್‌.

ಬಹುಮುಖಿ ಸೇವೆ :

ಕೋವಿಡ್ ಕಾಲದಲ್ಲಿ ಈತ ಏನಿಲ್ಲವೆಂದರೂ ಐನೂರು ಶವಗಳಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ.”ಒಮ್ಮೆ ಆಸ್ಪತ್ರೆಯಲ್ಲಿ ಗಂಡನನ್ನು ಕಳೆದುಕೊಂಡ ಹೆಣ್ಣು ಮಗಳು ನನಗೆ ಯಾರೂ ಇಲ್ಲ ಎಂದು ಅಳ್ತಾ ಇದ್ದಳು. ನಾನು ಹೋದ ತಕ್ಷಣ ನನ್ನ ಕಾಲಿಗೆ ಬಿದ್ದು, :ಅಣ್ಣಾ, ಈ ಶವ ತೆಗೆದುಕೊಂಡು ಹೋಗಲು ಸಹಕರಿಸಿ’ ಎಂದು ವಿನಂತಿಸಿಕೊಂಡುಹತ್ತು ಸಾವಿರ ಹಣ ಮುಂದಿಟ್ಟಳು. “ನೋಡುತಂಗಿ, ನೀನು ಬಾಯ್ತುಂಬಾ ನಮ್ದುಕೆ ಅಣ್ಣ ಅಂತಕರೆದೆ. ಆವಾಗಲೇ ನೀನು ನನ್ನ ತಂಗಿಯಾದೆ, ಹಣ ಕೊಟ್ಟರೆ ನಾ ಬರೋದಿಲ್ಲ, ನಾನು ನಿನ್ನ ಅಣ್ಣನಾಗಿ ಬರುತ್ತೇನೆಂದು ಶವವನ್ನು ಕಾರಿನಲ್ಲಿ ಹಾಕೊಂಡ್‌ಹೋದೆ. ಮೊದಮೊದಲು ಅನಾಥ ಶವಗಳನ್ನುಒಬ್ಬನೇ ಕಾರಿನಲ್ಲಿ ಹಾಕುವಾಗ ಭಯ ಆಗುತ್ತಿತ್ತು.ಆನಂತರದಲ್ಲಿ ಶವಗಳನ್ನು ದೇವರು ಎಂಬದೃಷ್ಟಿಯಿಂದ ನೋಡ ತೊಡಗಿದೆ. ಆಗಿಂದ ಭಯ-ಆತಂಕ ದೂರವಾಯಿತು’ ಎನ್ನುತ್ತಾರೆ ಅಯೂಬ್‌.

ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವುದರ ಜೊತೆಗೆ, ಅಪ್ಪನ ಹೆಸರಿನಲ್ಲಿ”ಅನಾಥಶ್ರಮ’ ನಡೆಸುತ್ತಿದ್ದಾರೆ. ಹೆಣ್ಣು ಮಕ್ಕಳಿಗೆಟೈಲರಿಂಗ್‌ ತರಬೇತಿ ಕೊಡ್ತಾರೆ. ಹೀಗೆ”ಬಹುಮುಖಿ ಸಮಾಜ ಸೇವಕ’ನಾಗಿರುವ ಅಯೂಬ್‌ ಹೇಳುತ್ತಾರೆ: ನಾವ್‌ ಯಾವತ್ತೂ ಈ ಜಾತಿ, ಆ ಜಾತಿ ಅಂತಾ ಯೋಚೆ° ಮಾಡಿ ಕೆಲ್ಸಾ ಶುರು ಮಾಡಿಲ್ಲ. ಭೂಮಿಮೇಲೆ ಇರೋದೇ ಎರಡು ಜಾತಿ. ಒಂದು ಹೆಣ್ಣು, ಮತ್ತೂಂದು ಗಂಡು. ಈ ಎರಡನ್ನು ಬಿಟ್ಟು ಬೇರೆ

ಯಾವುದೂ ಇಲ್ಲ… “ದಯವೇ ಧರ್ಮದ ಮೂಲ’ ಎನ್ನುವ ಶರಣ ಸಿದ್ಧಾಂತವನ್ನು ನಂಬಿ ಬದುಕುತ್ತಿರುವ ಅಯೂಬ್‌ ಭಾಯಿ (ಮೊ.99004 00719) ಅಂಥವರ ಸಂಖ್ಯೆ ಹೆಚ್ಚಲಿ.

 

ಬಾಲಾಜಿ ಕುಂಬಾರ, ಚಟ್ನಾಳ

Advertisement

Udayavani is now on Telegram. Click here to join our channel and stay updated with the latest news.

Next