Advertisement

ಮಾನವ ದಾನವನಾಗುತ್ತಿರುವುದು ಆತಂಕಕಾರಿ: ಡಾ|ಗಂಗಪ್ಪ

07:57 AM Jan 12, 2019 | |

ಹೊನ್ನಾಳಿ: ಉಣ್ಣುವ ಪ್ರಸಾದದಲ್ಲಿ, ಕುಡಿಯುವ ನೀರಿನಲ್ಲಿ ವಿಷ ಬೆರೆಸುವ ರಾಕ್ಷಸ ಪ್ರವೃತ್ತಿ ಬೆಳೆಯುತ್ತಿರುವುದು ಖಂಡನೀಯ ಎಂದು ಮಾಜಿ ಶಾಸಕ ಡಾ| ಡಿ.ಬಿ. ಗಂಗಪ್ಪ ವಿಷಾದ ವ್ಯಕ್ತಪಡಿಸಿದರು.

Advertisement

ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಹಿರೇಕಲ್ಮಠದ ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ಮೂರು ದಿನದ ಮೌನ ಲಿಂಗ ಪೂಜಾನುಷ್ಠಾನ ಕಾರ್ಯಕ್ರಮ ಹಾಗೂ ಎಸ್‌ಜೆವಿಪಿ ಬಿಇಡಿ ಕಾಲೇಜು ಪ್ರಶಿಕ್ಷಣಾರ್ಥಿಗಳ ಪೌರತ್ವ ತರಬೇತಿ ಶಿಬಿರದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಪ್ರಕೃತಿ ಮನುಷ್ಯನಿಗೆ ಎಲ್ಲವನ್ನೂ ನೀಡಿದೆ. ಪ್ರಕೃತಿ ಕೊಟ್ಟ ಸಂಪತ್ತನ್ನು ಸುಸಂಬದ್ಧವಾಗಿ ಬಳಕೆ ಮಾಡಿಕೊಳ್ಳುವುದನ್ನು ಮರೆತ ಮಾನವ ದಾನವನಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷೆ ರೇಖಾಪ್ರಕಾಶ್‌ ಮಾತನಾಡಿ, ಅಧರ್ಮದಿಂದ ಇಂದು ಸಮಾಜ ದಿಕ್ಕು ತಪ್ಪುತ್ತಿದೆ. ಧರ್ಮಾಧಿಕಾರಿಗಳು ಜನರನ್ನು ಸರಿ ದಾರಿಗೆ ತರಲು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಸಮಾಜದ ಭಾಗವಾಗಿರುವ ನಾವೆಲ್ಲ ಗುರುಗಳಿಗೆ ಸಹಕಾರ ನೀಡಬೇಕಿದೆ ಎಂದು ಹೇಳಿದರು.

ತಾ.ಪಂ ಸದಸ್ಯ ಮರಿಕನ್ನಪ್ಪ ಮಾತನಾಡಿ, ನ್ಯಾಯಾಲಯ, ಪೊಲೀಸ್‌ ಠಾಣೆಯಲ್ಲಿ ಬಗೆಹರಿಯದ ಜನರ ಸಂಕಷ್ಟಗಳು ಹಾಗೂ ಖಟ್ಲೆಗಳು ಹಿರೇಕಲ್ಮಠದಲ್ಲಿ ಇತ್ಯರ್ಥವಾಗಿವೆ. ಇಂತಹ ಮಠ ನಮ್ಮ ತಾಲೂಕಿನಲ್ಲಿರುವುದು ನಮ್ಮೆಲ್ಲರ ಪುಣ್ಯ ಎಂದು ಬಣ್ಣಿಸಿದರು.

Advertisement

ಸಮಾರಂಭದ ನೇತೃತ್ವ ವಹಿಸಿದ್ದ ಹೊಟ್ಯಾಪುರ ಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಳಗುತ್ತಿ ಗ್ರಾಮದ ರೈತ ಬಾಂಧವರು ಗ್ರಾಮದ ಸುತ್ತಮುತ್ತ ಇರುವ ಕೆರೆಗಳನ್ನು ತುಂಬಿಸುವ ಬಗ್ಗೆ ಚಿಂತನೆ ಮಾಡಿ ಕಾರ್ಯ ಪ್ರವೃತ್ತರಾದರೆ ನಮ್ಮೆಲ್ಲರ ಸಹಕಾರ ಇದ್ದೇ ಇರುತ್ತದೆ ಎಂದು ನುಡಿದರು.

ಗ್ರಾ.ಪಂ ಸದಸ್ಯ ಬಿ.ಟಿ. ಕುಬೇರಪ್ಪ, ಎಸ್‌ಜೆವಿಪಿ ಬಿಇಡಿ ಕಾಲೇಜು ಪ್ರಾಂಶುಪಾಲ ಡಾ| ಎಚ್.ಜಯಪ್ಪ ಮಾತನಾಡಿದರು. ಬಿಆರ್‌ಸಿ ಎಚ್.ಎಸ್‌. ಉಮಾಶಂಕರ್‌ ಉಪನ್ಯಾಸ ನೀಡಿದರು. ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದರು.

ಬೆಳಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next