ಹುಳಿಯಾರು: ಮಳೆ ಬಂದರೆ ಸಾಕು ಮನೆಗಳಿಗೆಮಳೆಯ ನೀರಿನ ಜೊತೆ ಚರಂಡಿ ಕೊಳಚೆ ಸಹ ನುಗ್ಗಿಮನೆಯಲ್ಲಿರಲಾರದಂತೆ ದುರ್ನಾತ ಬೀರುತ್ತದೆ.ಇದು ಹುಳಿಯಾರಿನ 12ನೇ ವಾರ್ಡ್‌ನ ಮಾರುತಿನಗರದ ನಿವಾಸಿಗಳ ದಶಕಗಳ ಕಾಲದ ಗೋಳಾಗಿದೆ.ಇದೂವರೆಗೂ ಈ ಗೋಳು ಕೇಳುವವರಾರುಇಲ್ಲದೆ ಇಲ್ಲಿನ ಜನ ಪಂಚಾಯ್ತಿಗೆ ಹಿಡಿಶಾಪ ಹಾಕಿದಿನದೂಡುತ್ತಿದ್ದಾರೆ. ಇನ್ನಾದರೂ ನೂತನ ಪಪಂಸದಸ್ಯರಾದರೂ ಇತ್ತ ತಿರುಗಿ ನೋಡಿ ಇಲ್ಲಿನಸಮಸ್ಯೆಗೆ ಶಾಶ್ವತ ಪರಿಹಾರ ನೀಡುವರೇ ಎಂಬುದುಇಲ್ಲಿನ ನಿವಾಸಿಗಳ ಪ್ರಶ್ನೆಯಾಗಿದೆ.
ಹೌದು, ಹುಳಿಯಾರಿನ ಮಾರುತಿ ನಗರದಲ್ಲಿ ಗ್ರಾÂಂಟ್ ಮನೆಗಳು ಸೇರಿದಂತೆ 20 ಕೂಲಿಕಾರ್ಮಿಕರಮನೆಗಳಿವೆ. ಈ ಮನೆಗಳು ಪಟ್ಟಣದ ತಗ್ಗುಪ್ರದೇಶದಲ್ಲಿದೆ. ಹಾಗಾಗಿ ಊರಿನ ದುರ್ಗಮ್ಮನಗುಡಿಬೀದಿ, ಆಚಾರ್ ಬೀದಿ, ಲಿಂಗಾಯಿತರ ಬೀದಿ,ಮಸೀದಿ ಬೀದಿಯಲ್ಲಿ ಬೀಳುವ ಮಳೆಯ ನೀರುಇಲ್ಲಿಗೆ ಬಂದು ಸಂಗ್ರಹವಾಗುತ್ತದೆ. ಹೀಗೆಸಂಗ್ರಹವಾಗುವ ನೀರು ಸೂಕ್ತ ಚರಂಡಿ ವ್ಯವಸ್ಥೆಇಲ್ಲದ ಪರಿಣಾಮ ಮನೆಗಳಿಗೆ ನುಗ್ಗುತ್ತದೆ.ಈ ಸಮಸ್ಯೆ ದಶಕಗಳಿಂದ ಇದ್ದು. ಪ್ರತಿ ಬಾರಿ ಮಳೆಬಂದಾಗಲೂ ಇವರ ಕಷ್ಟ ಹೇಳತೀರದಾಗಿದೆ. ರಾತ್ರಿಸಮಯದಲ್ಲಿ ಮಳೆ ಬಂದರಂತೂ ಇಡೀ ರಾತ್ರಿಜಾಗರಣೆ ಮಾಡುವ ಅನಿವಾರ್ಯ ಕರ್ಮ ಇವರದಾ ಗಿದೆ. ಬರೀ ಮಳೆ ನೀರು ಬಂದರೆ ಸಹಿಸಿಕೊಳ್ಳಬಹುದು.
ಆದರೆ, ಮಳೆ ನೀರಿನ ಜತೆ ಚರಂಡಿಯತ್ಯಾಜ್ಯ ಸಹ ಹರಿದು ಬಂದು ದುರ್ನಾತ ಬೀರುತ್ತದೆ.ಒಮ್ಮೆ ಮನೆ ಒಳಗೆ ನುಗ್ಗಿದರೆ ಒಂದು ವಾರ ಫೆನಾಯಿಲ್ ಹಾಕಿ ನೆಲ ತೊಳೆದರೂ ವಾಸನೆ ಹೋಗುವುದಿಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಅಳಲಾಗಿದೆ.ಈ ಹಿಂದೆ ಗ್ರಾಪಂ ಇದ್ದಾಗ ನಂತರ ಪಟ್ಟಣಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದಾಗಲೂ ಈಬಗ್ಗೆ ಅನೇಕ ದೂರು ಸಹ ನೀಡಲಾಗಿದೆ. ಸೂಕ್ತಚರಂಡಿ ವ್ಯವಸ್ಥೆ ಕಲ್ಪಿಸಿ ನೀರು ಸರಾಗವಾಗಿ ಹರಿಸುವಂತೆ ಮಾಡಲು ಮನವಿ ಮಾಡಲಾಗಿದೆ. ಆದರೆ,ಇಲ್ಲಿಯವರೆಗೆ ಸ್ಪಂದಿಸಿಲ್ಲ. ಜೋರಾಗಿ ಮಳೆ ಬಂದರೆಮನೆ ಕುಸಿಯುವ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಇನ್ನಾದರೂ 12ನೇ ವಾರ್ಡ್‌ನ ನೂತನ ಸದಸ್ಯರುಇತ್ತ ಗಮನ ಹರಿಸಿ ಮಾರುತಿ ನಗರದ ಸಮಸ್ಯೆ ಬಗೆಹರಿಸುವರೇ ಕಾದು ನೋಡಬೇಕಿದೆ.ಪಟ್ಟು ಹಿಡಿದು ಕೆಲಸ ಮಾಡಿಸುವೆ: ಹುಳಿಯಾರುಮಾರುತಿ ನಗರದಲ್ಲಿ ಮಳೆಯ ನೀರು ಮನೆಗೆನುಗ್ಗಲು ಚರಂಡಿ ಮೇಲೆ ಶೌಚಾಲಯ,ಕಾಂಪೌಂಡ್ ಕಟ್ಟಿರುವುದು ಮತ್ತು ಕಲ್ಲುಚಪ್ಪಡಿಗಳನ್ನು ಹಾಕಿರು ವುದು ಮುಖ್ಯಕಾರಣವಾಗಿದೆ.
ದಶಕಗಳಿಂದ ಚರಂಡಿ ಕ್ಲೀನ್‌ಮಾಡಲಾಗದಷ್ಟು ಚರಂಡಿ ಮುಚ್ಚಿ ರುವ ಕಾರಣನೀರು ಚರಂಡಿಯಲ್ಲಿ ಹರಿಯಲಾಗದೆ ರಸ್ತೆಯಲ್ಲಿಹರಿದು ಮನೆಗೆ ನುಗ್ಗುತ್ತಿದೆ. ಈ ಬಗ್ಗೆ ಸ್ಥಳೀಯರಿಗೆಮನವರಿಕೆಯಾಗಿದ್ದು, ಚರಂಡಿ ಒತ್ತುವರಿ ತೆರವಿಗೆಸಮ್ಮತಿಸಿದ್ದಾರೆ. ಹಾಗಾಗಿ ಪಪಂ ಮುಖ್ಯಾಧಿಕಾರಿಹಾಗೂ ಎಂಜಿನಿಯರ್ ಬಳಿ ಪಟ್ಟು ಹಿಡಿದುಸಮಸ್ಯೆಗೆ ಶಾಶ್ವತ ಪರಿಹಾರ ಕೊಡುತ್ತೇನೆ ಎಂದುಪಪಂ ಸದಸ್ಯ ಮಂಜುನಾಥ್ ಹೇಳಿದ್ದಾರೆ.
ನಿವಾಸಿಗಳ ಸ್ಥಿತಿ ಚಿಂತಾಜನಕಮಂಗಳವಾರ ಬಿದ್ದ ಅಲ್ಪ ಮಳೆಗೆ ಇಲ್ಲಿನನಾಲ್ಕೈದು ಮನೆಗಳಿಗೆ ಒಳ ಚರಂಡಿಯ ನೀರುನುಗ್ಗಿದೆ. ಮಳೆಯ ನೀರಿನ ಜೊತೆ ರಸ್ತೆ ಹಾಗೂಚರಂಡಿಯಲ್ಲಿದ್ದ ಚಪ್ಪಲಿ, ನೀರಿನ ಬಾಟಲ್,ಪ್ಲಾಸ್ಟಿಕ್ ಕವರ್ ಸೇರಿದಂತೆ ತ್ಯಾಜ್ಯಗಳುಮನೆಗಳಿಗೆ ನುಗ್ಗಿದೆ. ಪರಿಣಾಮ ದಿನಕೂಲಿಕೆಲಸಕ್ಕೆ ಹೋಗದೆ ಮನೆಯೊಳಗಿನ ನೀರುಹೊರಹಾಕಲು ಹರಸಾಹಸ ಪಡುತ್ತಿದ್ದ ದೃಶ್ಯಕಲ್ಲು ಹೃದಯವನ್ನೂ ಕರಿಗಿಸುವಂತಿತ್ತು. ಒಟ್ಟಾರೆಮಳೆ ಬಂದಾಗಲೆಲ್ಲ ಈ ಸಮಸ್ಯೆ ಇಲ್ಲಿ ಸಾಮಾನ್ಯ.ಈ ಮಳೆಗಾಲದಲ್ಲಿ ಮಳೆಯಾದರೆ ಇಲ್ಲಿನನಿವಾಸಿಗಳ ಸ್ಥಿತಿ ಚಿಂತಾಜನಕವಾಗಲಿದೆ.
ಎಚ್.ಬಿ.ಕಿರಣ್ ಕುಮಾರ್