Advertisement

ಹುಕ್ಕೇರಿ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು

08:31 PM Mar 19, 2023 | Team Udayavani |

ಸಂಕೇಶ್ವರ : ಈಜಲು ಕೃಷಿ ಹೊಂಡದಲ್ಲಿ ಇಳಿದ ಇಬ್ಬರು ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ಇಂದು ನಡೆದಿದೆ.

Advertisement

ಯಾದಗೂಡು ಗ್ರಾಮದ ಯಮನಪ್ಪ ಪ್ರಕಾಶ ರೆಡ್ಡರಟ್ಟಿ (10) ಹಾಗೂ ಯೇಸು ಬಸಪ್ಪ (14) ಈ ಇಬ್ಬರು ನೀರಲ್ಲಿ ಮುಳಗಿ ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.

ರವಿವಾರ ಸಂಜೆ 4.50 ರ ವೇಳೆಯಲ್ಲಿ ಈ ದಾರುಣ ಘಟನೆ ನಡೆದಿದ್ದು, ಈ ಇಬ್ಬರೂ ಮಕ್ಕಳು ಕ್ರಿಕೆಟ್ ಆಡುತ್ತಾ ತೋಟದ ಬಳಿ ಇರುವ ಕೃಷಿ ಹೊಂಡದಲ್ಲಿ ಈಜಲು ಬಂದರು. ಯಮನಪ್ಪ ನೀರಿನಲ್ಲಿ ಮುಳುಗುತ್ತಿದ್ದನು, ಆ ಸಮಯದಲ್ಲಿ ಯೇಸು ಅವನನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ಯಶಸ್ವಿಯಾಗದೇ ಆತನೂ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next