Advertisement

ಅದ್ಧೂರಿ ರತ್ನಪುರಿ ಆಂಜನೇಯಸ್ವಾಮಿ ಕೊಂಡೋತ್ಸವ

12:26 PM Feb 26, 2018 | Team Udayavani |

ಹುಣಸೂರು: ರಾಜ್ಯದಲ್ಲಿಯೇ ಸಾಮರಸ್ಯದ ಜಾತ್ರೆಯೆಂದೆ ಪ್ರತೀತಿಯ ರತ್ನಪುರಿಯ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಂಜನೇಯಸ್ವಾಮಿ ಉತ್ಸವ ಹಾಗೂ ಕೊಂಡೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

Advertisement

ಸ್ವಾಮಿಯ ಭವ್ಯ ಉತ್ಸವವು ಶನಿವಾರ ರಾತ್ರಿ ಪಲ್ಲಕ್ಕಿ ವಾಹನದಲ್ಲಿ ದೇವಾಲಯದ ಆವರಣದಿಂದ ಹೊರಟ ವೇಳೆ ನಂದಿಕಂಬ, ಕಂಸಾಳೆ, ನಗಾರಿ, ತಮಟೆ, ಡೊಳ್ಳು ಕುಣಿತ, ಕೇರಳದ ಚಂಡೆ ಮೇಳ, ವೀರಗಾಸೆ, ಪೂಜಾ ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಮೇಳೈಸುವ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿತು. ನಗಾರಿ,ತಮಟೆ ಹಾಗೂ ವಾದ್ಯದ ನಾದಕ್ಕೆ ಯುವ ಪಡೆ ಕುಣಿದು ಕುಪ್ಪಳಿಸಿದರು.

ಗ್ರಾಮಸ್ಥರಿಂದ ಕೊಂಡೋತ್ಸವ: ಕಳೆದ ಆರು ವರ್ಷದಿಂದ ಧರ್ಮಾಪುರ ಗ್ರಾಮಸ್ಥರು ಭಕ್ತಿಭಾವದಿಂದ ನಡೆಸಿಕೊಂಡು ಬರುವ ಕೊಂಡೋತ್ಸವವು ದೇವಾಲಯದ ಆವರಣದಲ್ಲಿ ನಡೆಯಿತು.  ಸಾವಿರಾರು ಭಕ್ತರ ಸಮ್ಮುಖದಲ್ಲಿ ಧರ್ಮಾಪುರದ ಆಂಜನೇಯಸ್ವಾಮಿ ದೇವಾಲಯದ ಪೂಜಾರಿ ರುಕಾ¾ಂಗದ ಸಾವಿರಾರು ಭಕ್ತರ ಉಧೊ^àಷದ ನಡುವೆ ಕೊಂಡ ಹಾಯ್ದರು. ಧರ್ಮಾಪುರದ ನಾಡ ಯಾಜಮಾನ ವಿಶ್ವನಾಥ್‌, ಗ್ರಾಮದ ಯಜಮಾನರಾದ ಚಲುವಯ್ಯ, ನಂಜುಂಡಯ್ಯ, ಈರೇಗೌಡ, ಮಾಸ್ತಿಗೌಡ, ಸಣ್ಣನಾಯ್ಕ, ಸ್ವಾಮಿನಾಯಕ, ಜವರನಾಯ್ಕ ಹಾಗೂ ಗ್ರಾಮಸ್ಥರು ಕೊಂಡೋತ್ಸವ ಯಶಸ್ಸಿಗೆ ಶ್ರಮಿಸಿದರು.

ಹಗ್ಗ-ಜಗ್ಗಾಟಕ್ಕೆ ಚಾಲನೆ: ಜಾತ್ರೆ ಹಾಗೂ ಉರುಸ್‌ ಅಂಗವಾಗಿ ನಡೆದ ಪುರುಷ ಮತ್ತು ಮಹಿಳೆಯರ ಹಗ್ಗ-ಜಗ್ಗಾಟದ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಇಪ್ಪತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಈ ಪಂದ್ಯಾಟ ವೀಕ್ಷಿಸಲು ಸಾವಿರಾರು ಮಂದಿ ನೆರೆದಿದ್ದರು. ಹಗ್ಗ-ಜಗ್ಗಾಟ ಪಂದ್ಯಾಟಕ್ಕೆ ಜಿಪಂ ಸದಸ್ಯ ಸುರೇಂದ್ರ ಚಾಲನೆ ನೀಡಿದರು.

ಭಾವೈಕ್ಯತೆಯ ಪ್ರತೀಕ: ಜಾತ್ರೆಗೆ ಶಾಸಕ ಎಚ್‌.ಪಿ.ಮಂಜುನಾಥ್‌ರೊಂದಿಗೆ ಭೇಟಿ ನೀಡಿದ್ದ ಸಕ್ಕರೆ ಸಚಿವೆ ಗೀತಾಮಹದೇವ್‌ ಪ್ರಸಾದ್‌ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಜಮಾಲ್‌ ಬೀ ಮಾಸಾಹೇಬ ಗೋರಿಗೆ ಭೇಟಿ ನೀಡಿದರು. ಇಡೀ ರಾಜ್ಯದಲ್ಲೇ ಹಿಂದೂ-ಮುಸ್ಲಿಮರ ಭಾವೈಕ್ಯತೆ ಮೆರೆವ ಇಂಥ ವಿಶಿಷ್ಟತೆಯ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿರುವುದು ಹಾಗೂ ಎರಡು ಧರ್ಮದವರು ಒಗ್ಗೂಡಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

Advertisement

ಜಾತ್ರೆಗೆ ಚಾಲನೆ ನೀಡಿದ ಶಾಸಕ ಎಚ್‌.ಪಿ.ಮಂಜುನಾಥ್‌ ನನ್ನ ತಾಲೂಕಿನಲ್ಲಿ ಸಾಮರಸ್ಯದ ಜಾತ್ರೆ ಜರುಗುತ್ತಿರುವುದು ಹೆಗ್ಗಳಿಕೆ, ರತ್ನಪುರಿಯ ಜಾತ್ರೆ ಮಾಳ, ದೇವಸ್ಥಾನ ಹಾಗೂ ಗೋರಿ, ಮಸೀದಿ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ್ದೇನೆಂದು ಹೇಳಿ, ತಾಲೂಕಿನ ಸರ್ವತೋಮುಖ ಪ್ರಗತಿಗೆ ಶ್ರಮಿಸಿದ್ದೇನೆಂಬ ಹೆಮ್ಮೆ ತಮಗಿದೆ ಎಂದರು.

ಆಂಜನೇಯ ಸ್ವಾಮಿ ಉತ್ಸವಕ್ಕೆ ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ವಿಶ್ವನಾಥ್‌ ಚಾಲನೆ ನೀಡಿದರು. ಜಾತ್ರಾ ಮಹೋತ್ಸವ ಯಶಶ್ವಿ‌ಗೆ  ಸಮಿತಿ ಅಧ್ಯಕ್ಷ ಪ್ರಬಾಕರ್‌, ಕಾರ್ಯದರ್ಶಿ ರಾಜು ಹಾಗೂ ಸಮಿತಿ ಸದಸ್ಯರು ಅವಿರ್ನಿಶಿ ದುಡಿದರು. ಈ ಮಹೋತ್ಸವದಲ್ಲಿ ಜಿಪಂ ಸದಸ್ಯೆ ಡಾ.ಪುಷ್ಪ ಅಮರ್‌ನಾಥ್‌, ಮಾಜಿ ಸದಸ್ಯ ಅನಿಲ್‌ ಚಿಕ್ಕಮಾದು,

ಬಿಜೆಪಿ ಮುಖಂಡ ವಸಂತ್‌ ಕುಮಾರ್‌ಗೌಡ, ಎಚ್‌.ಪಿ.ಅಮರ್‌ನಾಥ್‌, ವಕೀಲ ರಾಮಕೃಷ್ಣೇಗೌಡ, ಸತ್ಯನಾರಾಯಣರಾವ್‌ಕರಾಡೆ,  ಪ್ರಸನ್ನ, ಹರಿಹರಾನಂದಸ್ವಾಮಿ, ತಾಪಂ ಸದಸ್ಯರಾದ ವೆಳ್ಳಂಗಿರಿ, ಪೇಮೇಗೌಡ, ಮಾಜಿ ಸದಸ್ಯ ಅಸYರ್‌ ಪಾಷ, ಧರ್ಮಾಪುರ ರಮೇಶ್‌, ಮಹ‌ಮ್ಮದ್‌ ರಫೀಕ್‌, ಪುಟ್ಟಸ್ವಾಮಿ, ನಂದೀಶ, ದೀಪು,ಡೇವಿಡ್‌ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next