Advertisement

ಕಾರವಾರದಲ್ಲಿ ಗೋವಾದಿಂದ ತಂದಿದ್ದ ಭಾರಿ ಪ್ರಮಾಣದ ಮದ್ಯ ವಶ

02:46 PM Apr 01, 2023 | Team Udayavani |

ಕಾರವಾರ : ಬೋಟ್ ಮೂಲಕ ಗೋವಾ ಸಮುದ್ರ ಮಾರ್ಗವಾಗಿ ಅಕ್ರಮ ಮದ್ಯಸಾಗಾಟ ಮಾಡುತ್ತಿದ್ದ ವೇಳೆ ,ದಾಳಿ ನಡೆಸಿದ ಕರಾವಳಿ ಕಾವಲು ಪಡೆ ಪೊಲೀಸರು ಲಕ್ಷಾಂತರ ರೂ.ಬೆಲೆಯ ಮದ್ಯ ಹಾಗೂ ಸ್ವತ್ತನ್ನ ಮಾಜಾಳಿ ಸಮುದ್ರ ತೀರದಲ್ಲಿ ವಶಪಡಿಸಿಕೊಂಡಿದ್ದಾರೆ.

Advertisement

ಗೋವಾ ವ್ಯಾಪ್ತಿ ಸಮುದ್ರ ಮಾರ್ಗವಾಗಿ ಬೋಟ್ ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದಾಗ ಮಾಜಾಳಿ ಕಡಲ ತೀರದಲ್ಲಿ ಇಂದು ಬೆಳಗಿನ ಜಾವ ಕರಾವಳಿ ಕಾವಲುಪಡೆ ಇನ್ಸ್‌ಪೆಕ್ಟರ್ ನಿಶ್ಚಲ ಕುಮಾರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಕ್ರಮ ಗೋವಾ ಮದ್ಯ ಸೇರಿ 2.90 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ‌ ಪಡೆಯಲಾಗಿದೆ.

ಗೋವಾ ಫೆನ್ನಿ, ವಿಸ್ಕಿ, ಉರಾಕ್ ಸೇರಿ ಗೋವಾ ಮದ್ಯ ಅಕ್ರಮ ಸಾಗಾಟಕ್ಕೆ ಯತ್ನಸಿದ್ದು,1.50 ಲಕ್ಷ ಮೌಲ್ಯದ ಗೋವಾ ಮದ್ಯ, 1.40 ಲಕ್ಷ ಮೌಲ್ಯದ ಬೋಟ್ ಹಾಗೂ ಎಂಜಿನ್ ವಶಕ್ಕೆ ಪಡೆದಿದ್ದಾರೆ. ಕಾವಲುಪಡೆ ಪೊಲೀಸ್ ಕಂಡು ಬೋಟ್ ನಲ್ಲಿ ಇದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಕಾರವಾರ ಕರಾವಳಿ ಕಾವಲುಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next