Advertisement

ನಾಳೆ ಬೃಹತ್‌ ಪ್ರತಿಭಟನೆ

10:05 AM Jul 19, 2020 | Suhan S |

ಕೆ.ಆರ್‌.ಪೇಟೆ: ಅಂಬೇಡ್ಕರ್‌ ನಿವಾಸ ರಾಜಗೃಹದ ಮೇಲಿನ ದಾಳಿ ಖಂಡಿಸಿ, ಜುಲೈ 20ರಂದು ಸೋಮವಾರ ಜಿಲ್ಲಾ ಕೇಂದ್ರವಾದ ಮಂಡ್ಯ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ.ಬಿ.ಶ್ರೀನಿವಾಸ್‌ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರತಿಭಟನೆ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಅಂಬೇಡ್ಕರ್‌ ನೀಡಿದ ಮೀಸಲಾತಿ ವಿರುದ್ಧ ಧ್ವನಿಯೆತ್ತಲಾರದ ಶಕ್ತಿಗಳು ದೇಶದಲ್ಲಿ ಅಂಬೇಡ್ಕರ್‌ ಪ್ರತಿಮೆ, ಭಾವಚಿತ್ರ, ಅಂಬೇಡ್ಕರ್‌ ಬರೆದ ಸಂವಿಧಾನದ ಮೇಲೆ ದಾಳಿ ಮಾಡುತ್ತಲೇ ಬರುತ್ತಿವೆ. ಇದರ ಒಂದು ಭಾಗವಾಗಿ ಮುಂಬೈನಲ್ಲಿರುವ ಅಂಬೇಡ್ಕರ್‌ ರಾಜಗೃಹದ ಮೇಲೆ ದಾಳಿ ನಡೆಸಿ, ಅಲ್ಲಿದ್ದ ಪುಸ್ತಕಗಳು, ಪೀಠೊಪಕರಣಗಳು ಸೇರಿದಂತೆ ಎಲ್ಲಾ ವಸ್ತುಗಳನ್ನು ನಾಶ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಅಂಬೇಡ್ಕರ್‌ ರಾಜಗೃಹಕ್ಕೆ ವಿಶೇಷ ಭದ್ರತೆ ನೀಡಬೇಕು ಎಂದು ಆಗ್ರಹಿಸಿ ಜುಲೈ 20ರ ಬೆಳಗ್ಗೆ 11ಗಂಟೆಗೆ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಎಂದು ತಿಳಿಸಿದರು.

ಸಭೆಯಲ್ಲಿ ಚಿಂತಕರಾದ ಪ್ರೊ.ಹುಲ್ಕೆರೆ ಮಹಾದೇವು, ಪ್ರೊ.ಬಿ.ಎಸ್‌.ಚಂದ್ರ ಶೇಖರ್‌, ರೈತ ಮುಖಂಡ ಎಲ್‌.ಬಿ.ಜಗದೀಶ್‌, ತಾಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಸ್ತಿ ರಂಗಪ್ಪ, ಸೋಮಸುಂದರ್‌, ರಾಜಯ್ಯ, ಹುರು ಗಲವಾಡಿ ರಾಮಯ್ಯ, ಮಾಂಬಹಳ್ಳಿ ಜಯರಾಂ, ತಾಲೂಕು ಡಿಎಸ್‌ಎಸ್‌ ಸಂಚಾಲಕ ನಾಟನಹಳ್ಳಿ ಸೋಮರಾಜು, ಜಿಲ್ಲಾ ಸಂಘಟನಾ ಸಂಚಾಲಕರಾದ ಸಂತೋಷ್‌ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next