Advertisement

ಪ್ಯಾರಾಲಿಂಪಿಕ್ಸ್‌  ಗೆ ಭಾರತದ ದೊಡ್ಡ ತಂಡ

10:28 PM Aug 09, 2021 | Team Udayavani |

ಹೊಸದಿಲ್ಲಿ: ರವಿವಾರ ರಾತ್ರಿ ಟೋಕಿಯೊ ಒಲಿಂಪಿಕ್ಸ್‌ ಜ್ಯೋತಿ ಆರುತ್ತಿ ದ್ದಂತೆಯೇ ಟೋಕಿಯೊ ಇನ್ನೊಂದು ಜಾಗತಿಕ ಕ್ರೀಡಾಕೂಟಕ್ಕೆ ಅಣಿಯಾಗತೊಡಗಿದೆ. ಇದು ಪ್ಯಾರಾಲಿಂಪಿಕ್ಸ್‌ ಗೇಮ್ಸ್‌. ಆ. 28ರಿಂದ ಸೆ. 5ರ ತನಕ ನಡೆಯಲಿದೆ. ಈ ಕೂಟದ ಇತಿಹಾಸದಲ್ಲೇ ಭಾರತ 54 ಕ್ರೀಡಾಪಟುಗಳ ಅತೀ ದೊಡ್ಡ ತಂಡವನ್ನು ರವಾನಿಸಲಿದೆ.

Advertisement

ಇಲ್ಲಿನ 21 ಕೇಂದ್ರಗಳಲ್ಲಿ 22 ಕ್ರೀಡೆಗಳ 593 ವಿಭಾಗಗಳ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಭಾರತ 9 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದೆ. 2016ರ ರಿಯೋ ಪ್ಯಾರಾಲಿಂಪಿಕ್ಸ್‌ ಗೇಮ್ಸ್‌ನ ಚಿನ್ನದ ಪದಕ ವಿಜೇತ ಹೈಜಂಪರ್‌ ಮರಿಯಪ್ಪನ್‌ ತಂಗವೇಲು ಉದ್ಘಾಟನಾ ಸಮಾರಂಭದಲ್ಲಿ ಭಾರತದ ತ್ರಿವರ್ಣ ಧ್ವಜಧಾರಿಯಾಗಲಿದ್ದಾರೆ.

ಇಲ್ಲಿನ ಜವಾಹರಲಾಲ್‌ ನೆಹರೂ ಸ್ಟೇಡಿಯಂನಲ್ಲಿ, ದೀಪಾ ಮಲಿಕ್‌ ಅಧ್ಯಕ್ಷತೆಯ ಪ್ಯಾರಾಲಿಂಪಿಕ್‌ ಕಮಿಟಿ ಆಫ್‌ ಇಂಡಿಯಾ (ಪಿಸಿಐ) ನಡೆಸಿದ ಎರಡು ದಿನಗಳ ಟ್ರಯಲ್ಸ್‌ ಬಳಿಕ ಈ ಕ್ರೀಡಾಕೂಟಕ್ಕೆ ಭಾರತದ ತಂಡವನ್ನು ಅಂತಿಮಗೊಳಿಸಲಾಯಿತು. ರಿಯೋ ಕೂಟದಲ್ಲಿ ಬೆಳ್ಳಿ ಜಯಿಸಿದ್ದರು. ದೀಪಾ ಮಲಿಕ್‌ ಪಿಸಿಐ ಅಧ್ಯಕ್ಷರಾಗಿದ್ದಾರೆ.

19 ಸದಸ್ಯರದ್ದೇ ದಾಖಲೆ :

ಕಳೆದ ರಿಯೋ ಒಲಿಂಪಿಕ್ಸ್‌ ಕೂಟದಲ್ಲಿ 19 ಕ್ರೀಡಾಪಟುಗಳನ್ನು ಕಳುಹಿಸಿದ್ದೇ ಭಾರತದ ಈ ವರೆಗಿನ ದಾಖಲೆಯಾಗಿತ್ತು. ಭಾರತದ ಶ್ರೇಷ್ಠ ಪ್ರದರ್ಶನ ಕೂಡ ಇದೇ ಕೂಟದಲ್ಲಿ ಕಂಡುಬಂದಿತ್ತು. ಭಾರತ ಒಟ್ಟು 4 ಪದಕ ಜಯಿಸಿತ್ತು (2 ಚಿನ್ನ, 1 ಬೆಳ್ಳಿ, 1 ಕಂಚು).

Advertisement

ಭಾಗವಹಿಸುವ ಪ್ರಮುಖರು : ಟೋಕಿಯೊ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಪ್ರಮುಖ ಕ್ರೀಡಾಪಟುಗಳ ಯಾದಿ ಇಲ್ಲಿದೆ.

ಪುರುಷರು: ದೇವೇಂದ್ರ ಜಜಾರಿಯಾ, ಅಜಿತ್‌ ಸಿಂಗ್‌, ಸುಂದರ್‌ ಸಿಂಗ್‌ ಗುರ್ಜಾರ್‌ (ಜಾವೆಲಿನ್‌ ಎಫ್‌-46); ಸಂದೀಪ್‌ ಚೌಧರಿ, ಸುಮಿತ್‌ (ಜಾವೆಲಿನ್‌ ಎಫ್‌-64); ಮರಿಯಪ್ಪನ್‌ ತಂಗವೇಲು, ಶರದ್‌ ಕುಮಾರ್‌, ವರುಣ್‌ ಸಿಂಗ್‌ ಭಟ್ಟಿ (ಹೈಜಂಪ್‌ 1ಇ-63); ಅಮಿತ್‌ ಕುಮಾರ್‌, ಧರಮ್‌ಬೀರ್‌ (ಕ್ಲಬ್‌ ತ್ರೋ ಎಫ್‌-51); ನಿಶಾದ್‌ ಕುಮಾರ್‌, ರಾಮ್‌ ಪಾಲ್‌ (ಹೈಜಂಪ್‌ ಟಿ-47); ಸೋನಮ್‌ ರಾಣಾ (ಶಾಟ್‌ಪುಟ್‌ ಎಫ್‌-57); ನವದೀಪ್‌ (ಜಾವೆಲಿನ್‌ ಎಫ್‌-41); ಪ್ರವೀಣ್‌ ಕುಮಾರ್‌ (ಹೈಜಂಪ್‌ ಟಿ-64); ಯೋಗೇಶ್‌ ಕಾಥುನಿಯಾ (ಡಿಸ್ಕಸ್‌ ತ್ರೋ ಎಫ್‌-56); ವಿನೋದ್‌ ಕುಮಾರ್‌ (ಡಿಸ್ಕಸ್‌ ತ್ರೋ ಎಫ್‌-56); ರಂಜಿತ್‌ ಭಟ್ಟಿ (ಜಾವೆಲಿನ್‌ ಎಫ್‌-57); ಅರವಿಂದ್‌ (ಶಾಟ್‌ಪುಟ್‌ ಎಫ್‌-35); ಟೇಕ್‌ ಚಂದ್‌ (ಜಾವೆಲಿನ್‌).

ವನಿತೆಯರು: ಏಕ್ತಾ ಭ್ಯಾನ್‌, ಕಾಶಿಷ್‌ ಲಾಕ್ರಾ (ಕ್ಲಬ್‌ ತ್ರೋ ಎಫ್‌-51); ಭಾಗ್ಯಶ್ರೀ ಜಾಧವ್‌ (ಶಾಟ್‌ಪುಟ್‌ ಎಫ್‌-34); ಸಿಮ್ರಾನ್‌ (100 ಮೀ. ಟಿ-13).

 

Advertisement

Udayavani is now on Telegram. Click here to join our channel and stay updated with the latest news.

Next