Advertisement

ಬಿದ್ಕಲ್‌ಕಟ್ಟೆ: ಬೃಹತ್‌ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭ

04:41 PM Oct 09, 2021 | Team Udayavani |

ತೆಕ್ಕಟ್ಟೆ: ಬಿಜೆಪಿ ಯುವಮೋರ್ಚಾ, ಕುಂದಾಪುರ ಮಂಡಲದ ವತಿಯಿಂದ  ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಅಂಗವಾಗಿ  ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮದಡಿಯಲ್ಲಿ ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೆಬಲ್‌ ಟ್ರಸ್ಟ್‌, ಉಡುಪಿ ಕಾರ್ಲ್ ಹೈಸ್‌ ಇಂಡಿಯಾ (ಬೆಂಗಳೂರು) ಪ್ರೈ.ಲಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬಿದ್ಕಲ್‌ಕಟ್ಟೆ  ಇವರ ಜಂಟಿ ಆಶ್ರಯದಲ್ಲಿ  ನೇತ್ರದಾನ, ರಕ್ತದಾನ, ಉಚಿತ ಕಣ್ಣಿನ ಚಿಕಿತ್ಸೆ , ವಾಕ್‌ ಶ್ರವಣ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮ ಹಾಗೂ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ, ರಕ್ತ ನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದಲ್ಲಿ ಬೃಹತ್‌ ರಕ್ತದಾನ ಶಿಬಿರ ವನ್ನು ಕರ್ನಾಟಕ ಬಿಜೆಪಿ ಯುವಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ| ಮಲ್ಲಿಕಾರ್ಜುನ ಬಾಳಿಕಾಯಿ ಅವರು ಅ.9 ರಂದು ಬಿದ್ಕಲ್‌ಕಟ್ಟೆ ಶ್ರೀ ನಾಗಲಕ್ಷ್ಮೀ ಸಭಾಭವನದಲ್ಲಿ  ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಭಾರತಾಂಬೆ, ದೀನ್‌ ದಯಾಳ್‌ ಉಪಾಧ್ಯ ಹಾಗೂ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ದಾಖಲೆಯ ನೇತ್ರದಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಹಾಲಾಡಿ : ನೇತ್ರದಾನ ಮಾಡಲು ಸುಮಾರು 81 ಮಂದಿ,100ಕ್ಕೂ ಅಧಿಕ ಮಂದಿಯಿಂದ ರಕ್ತದಾನ ಹಾಗೂ 360ಕ್ಕೂ ಅಧಿಕ ಮಂದಿ ಉಚಿತ ಕಣ್ಣಿನ ಚಿಕಿತ್ಸೆ , ವಾಕ್‌ ಶ್ರವಣ ಶಿಬಿರದಲ್ಲಿ ಪಾಲ್ಗೊಂಡಿದ್ದು  ಯಶಸ್ವಿ ಕಾರ್ಯಕ್ರಮದ ಬಗ್ಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಕುಂದಾಪುರ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಅವಿನಾಶ್‌ ಉಳ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ  ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿಯ ಉಪಾಧ್ಯಕ್ಷ ಕಿರಣ್‌ ಕುಮಾರ್‌ ಕೊಡ್ಗಿ, ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ,  ಕರ್ನಾಟಕ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ, ರಕ್ತ ನಿಧಿ ಕೇಂದ್ರ ಕುಂದಾಪುರ ಇದರ ಅಧ್ಯಕ್ಷ ಜಯಕರ ಶೆಟ್ಟಿ, ಕಣ್ಣಿನ ತಜ್ಞೆ ಡಾ| ಸೀಮಾ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕಾರ್ಯದರ್ಶಿ ಸುರೇಶ್‌ ಶೆಟ್ಟಿ ಗೋಪಾಡಿ, ಸತೀಶ್‌ ಪೂಜಾರಿ ವಕ್ವಾಡಿ, ಕಾಡೂರು ಸುರೇಶ್‌ ಶೆಟ್ಟಿ, ಕುಂದಾಪುರ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತನ್‌ ಬಂಗೇರ, ಸುನೀಲ್‌ ಖಾರ್ವಿ, ಹಾಲಾಡಿ ಯುವಮೋರ್ಚಾದ ಅಧ್ಯಕ್ಷ ಸುದೀಪ್‌ ಶೆಟ್ಟಿ ಬೆಳ್ವೆ, ಹರ್ಷ ಪೂಜಾರಿ ಅಮಾಸೆಬೈಲು, ಹಾಲಾಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶಂಕರ ಮೊಗವೀರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್‌ ಶೆಟ್ಟಿ ಉಪ್ಪುಂದ , ಸಂಪತ್‌ಕುಮಾರ್‌ ಶೆಟ್ಟಿ ಶಾನಾಡಿ ಮತ್ತಿತರರು ಉಪಸ್ಥಿತರಿದ್ದರು. ಚೇತನ್‌ ಬಂಗೇರ ಸ್ವಾಗತಿಸಿ, ರೂಪಾ ಪೈ ಪ್ರಾರ್ಥಿಸಿ, ಸುದರ್ಶನ್‌ ಆರ್ಡಿ ಪ್ರತಿಜ್ಞಾ ವಿಧಿಗೈದು, ರತ್ನಾಕರ ಕುಂದಾಪುರ ನಿರೂಪಿಸಿ, ಸುನಿಲ್‌ ಖಾರ್ವಿ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next