Advertisement

ಹ್ಯೂಬ್ಲೊಟ್‌ ವಾಚ್‌ ಬಂದಿದ್ದು ಚಹಾ ಕುಡಿಸಿಯೋ, ಕುಡಿದೋ?: ಸಿದ್ದುಗೆ ಬಿಜೆಪಿ

05:50 PM May 07, 2022 | Team Udayavani |

ಬೆಂಗಳೂರು: ‘5 ಪೈಸೆ ಖರ್ಚು ಮಾಡದೇ,ಯಾರಿಗೂ ಒಂದು ಕಪ್ ಚಹಾ ಸಹಿತ ಕುಡಿಸದೇ ಸಿಎಂ ಆಗಿದ್ದೆ’ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮಾಡಿ ಹಲವು ಪ್ರಶ್ನೆಗಳ ಬಾಣಗಳನ್ನು ಎಸೆದಿದೆ.

Advertisement

”ಸಿದ್ದರಾಮಯ್ಯ ಅವರೇ, ನಿಮ್ಮ ಕೈಗೆ ಹ್ಯೂಬ್ಲೊಟ್‌ ವಾಚ್‌ ಬಂದಿದ್ದು ಚಹಾ ಕುಡಿಸಿಯೋ ಅಥವಾ ಚಹಾ ಕುಡಿದೋ? ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮರಳು ಮಾಫಿಯಾ ರಾಜ್ಯಾದ್ಯಂತ ತಲೆ ಎತ್ತಿತ್ತು.ಸಿದ್ದರಾಮಯ್ಯ ರಕ್ತ ಸಂಬಂಧಿಗಳು ಹಾಗೂ ಆಪ್ತ ಸಚಿವರು ಈ ದಂಧೆಯ ಡೀಲ್ ಮಾಸ್ಟರ್‌ಗಳಾಗಿದ್ದರು. ಈ ದಂಧೆಯ ಮೂಲಕ ಸಂಗ್ರಹವಾದ ಕಪ್ಪವನ್ನು ವರಿಷ್ಠರಿಗೆ ಸಂದಾಯ ಮಾಡಿ, ಚಹಾ ಕುಡಿದಿರಲಿಲ್ಲವೇ?” ಎಂದು ಟ್ವೀಟ್ ಮಾಡಿ ”ಸಿದ್ದುಭ್ರಷ್ಟಚಹಾಕೂಟ” ಎಂಬ ಹ್ಯಾಷ್ ಟ್ಯಾಗ್ ನೀಡಲಾಗಿದೆ.

”ನೀವು ಸಿಎಂ ಆಗಿದ್ದಾಗ ರಾಜ್ಯಾದ್ಯಂತ ತೆರೆದ ಶುದ್ಧ ಕುಡಿಯುವ ನೀರಿನ ಘಟಕಗಳು ಅಲ್ಪಾವಧಿಯಲ್ಲೇ ಜೀವ ಕಳೆದುಕೊಂಡವು.ಈ ಟೆಂಡರ್‌ನಲ್ಲಿ ನೀವು ಸಂಗ್ರಹಿಸಿದ ಕಪ್ಪುಹಣದಲ್ಲಿ ಚಹಾ ಕುಡಿದಿರೋ ಅಥವಾ ಕುಡಿಸಿದಿರೋ? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ನಗರ ಯೋಜನೆಯನ್ನು ಬದಲಿಸುವ ಬಹುದೊಡ್ಡ ಗೋಲ್ಮಾಲ್ ನಡೆಯಿತು. ಆಗ ನಡೆದ ಕೆಂಪು, ಹಳದಿ, ಹಸಿರು ಜೋನ್ ಬದಲಾವಣೆಯಿಂದ ಸಂಗ್ರಹವಾದ ಕಪ್ಪು ಹಣಕ್ಕೆ ಚಹಾದ ಬಣ್ಣವಿರಲಿಲ್ಲವೇ? ಈ ಗೋಲ್‌ ಹಣದಲ್ಲಿ ಚಹಾ ಆಸ್ವಾದಿಸಲಿಲ್ಲವೇ?” ಎಂದು ಪ್ರಶ್ನಿಸಿದೆ.

ಇದನ್ನೂ ಓದಿ : ಪಕ್ಷದ ಘನತೆಗೆ ಧಕ್ಕೆ ತರುತ್ತಿರುವ ಯತ್ನಾಳರನ್ನು ಉಚ್ಛಾಟನೆ ಮಾಡಿ: ಭೀಮಾಶಂಕರ ಆಗ್ರಹ

”ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿಗ್ವಿಜಯ್ ಸಿಂಗ್ ಎರಡನೇ ಮದುವೆಯಾದರು. ಉಸ್ತುವಾರಿಗೆ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಐಶಾರಾಮಿ ಪ್ಲಾಟ್ ಕೊಡಿಸಿರಲಿಲ್ಲವೇ? ಆಗ ದಿಗ್ವಿಜಯ್ ದಂಪತಿ ಜೊತೆಗೆ ಚಹಾ ಕುಡಿದಿರಲಿಲ್ಲವೇ?” ಎಂದು ಟಾಂಗ್ ನೀಡಿದೆ.

Advertisement

”ನೀವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಿಸುವ ಯೋಜನೆ ಪ್ರಸ್ತಾಪಿಸಿದ್ದಿರಿ. ಖಾಸಗಿ ನಿರ್ಮಾಣ ಸಂಸ್ಥೆಯಿಂದ ಇದಕ್ಕಾಗಿ 15% ಲಂಚ ಸ್ವೀಕರಿಸಿದ ಎಂಬ ಆರೋಪವೂ ಕೇಳಿಬಂದಿತ್ತು.ಆಗ ನೀವು ಕುಡಿದ ಚಹಾದ ಬ್ರ್ಯಾಂಡ್ ಯಾವುದು?” ಎಂದು ಪ್ರಶ್ನಿಸಿದೆ.

”ನೀವು ಮುಖ್ಯಮಂತ್ರಿಯಾಗಿದ್ದಾಗ ನಡೆದ ಅರ್ಕಾವತಿ ರೀ ಡು ಪ್ರಕರಣ ನಡೆಯಿತು. ಈ ಹಗರಣದ ಮೂಲಕ ಸುಮಾರು 500 ಕೋಟಿ ಕಪ್ಪ ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಕೆಯಾಗಿತ್ತು. ಆಗ ನೀವು ಚಹಾ ಕುಡಿದಿರಲಿಲ್ಲವೇ?” ಎಂದು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next