ಅರ್ಧಕ್ಕೆ ನಿಂತ ಕಟ್ಟಡಗಳ ಕಾಮಗಾರಿ

ಕೋವಿಡ್  ಕೊಳ್ಳಿ | ಕೃಷಿಯತ್ತ ಮುಖ ಮಾಡಿದ ಹಳ್ಳಿಗಳ ಜನರು | ಕುಟುಂಬಗಳು ಸಂಕಷ್ಟದಲ್ಲಿ

Team Udayavani, Apr 12, 2020, 7:06 PM IST

12-April-5

ಹುಬ್ಬಳ್ಳಿ: ಲಾಕ್‌ಡೌನ್‌ ಬಿಸಿ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸ್ತಬ್ಧಗೊಳಿಸಿದೆ. ಇದೇ ಕಾಮಗಾರಿಗಳನ್ನು ನಂಬಿಕೊಂಡಿದ್ದ ಸಾವಿರಾರು ದಿನಗೂಲಿ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ.

ನಗರದಲ್ಲಿ ಮನೆ, ಅಪಾರ್ಟ್‌ಮೆಂಟ್‌, ಣಿಜ್ಯ ಮಳಿಗೆ ಇನ್ನಿತರ ಕಟ್ಟಡ ಕಾಮಗಾರಿಗಳಿಗೆ ನಿತ್ಯವೂ ಸಾವಿರಾರು ದಿನಗೂಲಿ ಕಾರ್ಮಿಕರು ಬಳಕೆಯಾಗುತ್ತಿದ್ದರು. ಬೇರೆ ಜಿಲ್ಲೆಗಳಿಂದ ವಲಸೆ ಬಂದವರು, ಜಿಲ್ಲೆಯ ಸುತ್ತಮುತ್ತಲ ಗ್ರಾಮಗಳ ಜನರಿಗೂ ಕಟ್ಟಡ ಕಾಮಗಾರಿ ಮಹತ್ವದ ಆಸರೆಯಾಗಿತ್ತು. ಕೊರೊನಾದಿಂದ ಈ ಎಲ್ಲ ಕಾಮಗಾರಿಗಳು ಬಹುತೇಕ ಸ್ತಬ್ಧಗೊಂಡಿದೆ. ಇದು ಕೇವಲ ಕಾರ್ಮಿಕರಿಗಷ್ಟೇ ಅಲ್ಲದೆ, ಕಟ್ಟಡಕ್ಕೆ ಪೂರಕವಾದ ಹಲವು ಉದ್ಯಮ-ವ್ಯಾಪಾರಗಳ ಮೇಲೂ ಪರಿಣಾಮ ಬೀರಿದೆ. ಕಟ್ಟಡ ಕಾಮಗಾರಿಗೆ ಬಳಕೆಯಾಗುವ ಸಿಮೆಂಟ್‌, ಇಟ್ಟಂಗಿ, ಮರಳು, ಜಲ್ಲಿ, ಕಬ್ಬಿಣ ಎಲ್ಲ ವಹಿವಾಟು ಬಂದ್‌ ಆಗಿದೆ. ಅದೆಷ್ಟೋ ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಗಿದೆ.

ಉದ್ಯೋಗ ಬಂದ್‌: ಪ್ರತಿದಿನ ಸಾವಿರಾರು ಜನರು ಉದ್ಯೋಗ ಅರಸಿ ವಿವಿಧೆಯಿಂದ ನಗರಕ್ಕೆ ಆಗಮಿಸುತ್ತಿದ್ದರು. ಕೆಲವರು ಕೆಲಸದ ಕಾರಣಕ್ಕೆ ಇಲ್ಲಿಗೆ ವಲಸೆ ಬಂದು ನೆಲೆಸಿದ್ದರು. ಇದೀಗ ಕಟ್ಟಡ ಕಾಮಗಾರಿಯೇ ಇಲ್ಲವಾಗಿ ಸಾವಿರಾರು ಕಾರ್ಮಿಕರ ಆದಾಯಕ್ಕೆ ಕಲ್ಲು ಬಿದ್ದಂತಾಗಿದೆ. ಜತೆಗೆ ಹೊಟೇಲ್‌, ಕಿರಾಣಿ, ಬಟ್ಟೆ ಅಂಗಡಿ, ಔಷಧಿ ಅಂಗಡಿ, ಎಪಿಎಂಸಿ, ಕೋರಿಯರ್‌ ಇನ್ನಿತರ ಕಡೆಗಳಲ್ಲಿ ಉದ್ಯೋಗದಲ್ಲಿದ್ದ ಜನರಿಗೂ ಇದೀಗ ಕೆಲಸವಿಲ್ಲದ ದಿನಗಳು ಕಾಡತೊಡಗಿವೆ.

ಬಿಕೋ ಎನ್ನುತ್ತಿವೆ ರಸ್ತೆ-ವೃತ್ತಗಳು: ನಗರದ ಎಲ್ಲ ರಸ್ತೆಗಳು ಹಾಗೂ ಪ್ರಮುಖ ವೃತ್ತಗಳು ಕೊರೊನಾ ಕಾರಣದಿಂದ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದು ರೈಲ್ವೆ ನಿಲ್ದಾಣ ಹಾಗೂ ರೈಲ್ವೆ ಸ್ಟೇಶನ್‌ ರಸ್ತೆ, ಹಳೇ ಬಸ್‌ ನಿಲ್ದಾಣ, ಕೊಪ್ಪಿಕರ ರಸ್ತೆ, ದುರ್ಗದ ಬಯಲು, ಹಳೇ ಹುಬ್ಬಳ್ಳಿ ಭಾಗ ಎಲ್ಲವೂ ನಿರ್ಜನ ಪ್ರದೇಶಗಳಂತಾಗಿವೆ. ಬಸ್‌ -ರೈಲು ಸಂಚಾರವಿಲ್ಲದೆ ನಗರಗಳಿಗೆ ಬರಲು ಸಾಧ್ಯವಾಗದೆ, ಹುಬ್ಬಳ್ಳಿ ಸುತ್ತಮುತ್ತಲಿನ ಹಳ್ಳಿಗಳ ಜನರು ಕೃಷಿಯತ್ತ ಮುಖ ಮಾಡಿದ್ದಾರೆ.

ಕೊರೊನಾ ನಗರದಲ್ಲಿ ನಡೆಯಬೇಕಿದ್ದ ಮದುವೆ, ಗೃಹ ಪ್ರವೇಶ ಸೇರಿದಂತೆ ಎಲ್ಲ ಶುಭ ಕಾರ್ಯಗಳು ಮುಂದೂಡುವಂತೆ ಮಾಡಿದೆ. ಬಸವ ಜಯಂತಿಯಂದು ಗೃಹ ಪ್ರವೇಶ ಮಾಡಬೇಕೆಂದುಕೊಂಡಿದ್ದೆವು. ಆದರೆ ಕೊರೊನಾದಿಂದ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇನ್ನು ಕೆಲಸ ಸಂಪೂರ್ಣವಾಗಲು ಸಾಧ್ಯವಿಲ್ಲ.
ಭಾರತಿ, ಎಚ್‌. ಮನೆಯ ಮಾಲಿಕರು

ನಗರದಲ್ಲಿ ಸಾವಿರಾರು ಕಟ್ಟಡಗಳ ಕಾಮಗಾರಿಗಳು ಅರ್ಧಕ್ಕೆ ನಿಂತು ಬಿಟ್ಟಿವೆ. ಲಾಕ್‌ಡೌನ್‌ನಿಂದ ಕಟ್ಟಡ ಸಾಮಗ್ರಿಗಳು ಸಿಗುತ್ತಿಲ್ಲ. ಕಾರ್ಮಿಕರು ಬರುತ್ತಿಲ್ಲ. ಇದರಿಂದ ಅನೇಕ ಕಟ್ಟಡಗಳ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸುವಂತಾಗಿದೆ.
 ರಾಜು ಕೇಶಣ್ಣವರ, ಇಂಜನಿಯರ್‌

ನಗರದಲ್ಲಿ ಎಲ್ಲ ಕೆಲಸಗಳು ಅರ್ಧಕ್ಕೆ ನಿಲ್ಲಿಸಲಾಗಿದೆ. ಲಾಕ್‌ ಡೌನ್‌ನಿಂದ ಕಾರ್ಮಿಕರು ಬರುತ್ತಿಲ್ಲ, ಕಟ್ಟಡ ಮಾಲಿಕರು ಸಹ ಆಗಮಿಸುತ್ತಿಲ್ಲ. ಇದರಿಂದ ಕಟ್ಟಡ ಕಾಮಗಾರಿಗಳು ಹಾಗೇ ಉಳಿದಿದ್ದು, ಕೊರೊನಾ ವೈರಸ್‌ ಎಲ್ಲರ ನೆಮ್ಮದಿ ಹಾಳು ಮಾಡಿದೆ.
 ಭೀಮಸಿ, ಕಟ್ಟಡ ನಿರ್ಮಾಣ ಮೇಸ್ತ್ರಿ

ಬಸವರಾಜ ಹೂಗಾರ

ಟಾಪ್ ನ್ಯೂಸ್

Mallikarjun Kharge: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ 5 ಸಾವಿರ ನೀಡಿ

Mallikarjun Kharge: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ 5 ಸಾವಿರ ನೀಡಿ

Udupi: ಶ್ರೀ ಕೃಷ್ಣಮಠಕ್ಕೆ ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರ ಭೇಟಿ

14-siddapura

Siddapura: ಗುಜರಿ ಅಂಗಡಿಗೆ ವಿವಿಧ ಇಲಾಖೆ ಪುಸ್ತಕಗಳ ಮಾರಾಟ

SSLC ಪ್ರವೇಶ ಪತ್ರ ತಿದ್ದುಪಡಿಗೆ ಫೆ.10ರವರೆಗೆ ಅವಕಾಶ

SSLC ಪ್ರವೇಶ ಪತ್ರ ತಿದ್ದುಪಡಿಗೆ ಫೆ.10ರವರೆಗೆ ಅವಕಾಶ

13-

Invest Karnataka 2025:ವಾಣಿಜ್ಯ ನಗರಿಯ ಉದ್ಯಮ ದಿಗ್ಗಜರ ಜೊತೆ ಸಚಿವ ಎಂ. ಬಿ. ಪಾಟೀಲ ಚರ್ಚೆ

Mallikarjun ಖರ್ಗೆಯಿಂದ ಹಿಂದೂ ಧಾರ್ಮಿಕ ಶ್ರದ್ಧೆಗೆ ಅಪಮಾನ: ಬಿಜೆಪಿ

Mallikarjun ಖರ್ಗೆಯಿಂದ ಹಿಂದೂ ಧಾರ್ಮಿಕ ಶ್ರದ್ಧೆಗೆ ಅಪಮಾನ: ಬಿಜೆಪಿ

“ಡಿಕೆಶಿ ಸಿಎಂ: 6 ತಿಂಗಳ ನಂತರ ತೀರ್ಮಾನ ಕೈಗೊಳ್ಳಬಹುದು: ಶಾಸಕ ಬಾಲಕೃಷ್ಣ

“ಡಿಕೆಶಿ ಸಿಎಂ: 6 ತಿಂಗಳ ನಂತರ ತೀರ್ಮಾನ ಕೈಗೊಳ್ಳಬಹುದು: ಶಾಸಕ ಬಾಲಕೃಷ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಕಾರ್ಯಕರ್ತರೊಂದಿಗೆ ವಿಜಯೇಂದ್ರ ತಡರಾತ್ರಿ ಸಭೆ

BJP ಕಾರ್ಯಕರ್ತರೊಂದಿಗೆ ವಿಜಯೇಂದ್ರ ತಡರಾತ್ರಿ ಸಭೆ

ಡಾ.ಚಂದ್ರಶೇಖರ ಕಂಬಾರ ಸೇರಿ ಮೂವರಿಗೆ ಕವಿವಿ ‘ಅರಿವೇ ಗುರು ಪ್ರಶಸ್ತಿ’

Dharawad: ಡಾ.ಚಂದ್ರಶೇಖರ ಕಂಬಾರ ಸೇರಿ ಮೂವರಿಗೆ ಕವಿವಿ ‘ಅರಿವೇ ಗುರು ಪ್ರಶಸ್ತಿ’

ಶೂನ್ಯ ಸಂಪಾದನೆ ಶಾಲೆ ಶಿಕ್ಷಕರಿಗೆ ಸನ್ಮಾನ: ಸಚಿವ ಸಂತೋಷ ಲಾಡ್‌

ಶೂನ್ಯ ಸಂಪಾದನೆ ಶಾಲೆ ಶಿಕ್ಷಕರಿಗೆ ಸನ್ಮಾನ: ಸಚಿವ ಸಂತೋಷ ಲಾಡ್‌

santhosh-lad

Dharwad: ಅನುದಾನ ವಾಪಸ್ ಹೋದರೆ ಅಧಿಕಾರಿಗಳಿಂದ ವಸೂಲಿ: ಲಾಡ್ ಖಡಕ್ ಸೂಚನೆ

Hubballi: ಚಾಕು ಇರಿತ ಪ್ರಕರಣ… ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು

Hubballi: ಚಾಕು ಇರಿದು ಯುವಕನ ಕೊಲೆ ಪ್ರಕರಣ… ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು

MUST WATCH

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

ಹೊಸ ಸೇರ್ಪಡೆ

ಬಿಜೆಪಿ ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ

BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್‌

Mallikarjun Kharge: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ 5 ಸಾವಿರ ನೀಡಿ

Mallikarjun Kharge: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ 5 ಸಾವಿರ ನೀಡಿ

Udupi: ಶ್ರೀ ಕೃಷ್ಣಮಠಕ್ಕೆ ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರ ಭೇಟಿ

14-siddapura

Siddapura: ಗುಜರಿ ಅಂಗಡಿಗೆ ವಿವಿಧ ಇಲಾಖೆ ಪುಸ್ತಕಗಳ ಮಾರಾಟ

Surapura: ಗೆಳೆಯರು ಸಾಲ ಕಟ್ಟದ್ದಕ್ಕೆ ಪಿಗ್ಮಿ ಏಜೆಂಟ್‌ ಆತ್ಮಹ*ತ್ಯೆ

Surapura: ಗೆಳೆಯರು ಸಾಲ ಕಟ್ಟದ್ದಕ್ಕೆ ಪಿಗ್ಮಿ ಏಜೆಂಟ್‌ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.