Advertisement

Hubli; ಡಾ.ಸರೋಜಿನಿ‌ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

02:32 PM Jun 21, 2024 | Team Udayavani |

ಹುಬ್ಬಳ್ಳಿ: ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಡಾ.ಸರೋಜಿನಿ‌ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ ನಮ್ಮ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ನಮ್ಮ ಕರ್ನಾಟಕ ಸಂಘಟನೆಯ ಉತ್ತರ ಕರ್ನಾಟಕ ವಿಭಾಗದಿಂದ ಶುಕ್ರವಾರ ಇಲ್ಲಿನ ಮಿನಿ ವಿಧಾನಸೌಧ ಸಂಕೀರ್ಣ ಆವರಣದಲ್ಲಿ‌ ಪ್ರತಿಭಟನೆ ನಡೆಸಲಾಯಿತು.

ಸರೋಜಿನಿ‌ ಮಹಿಷಿಯವರು ವರದಿ ನೀಡಿದ ಸಂದರ್ಭದಲ್ಲಿ ಐಟಿ-ಬಿಟಿ, ಎಂಎನ್ ಸಿ ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಇದೀಗ ಸ್ಥಿತಿ ಬದಲಾಗಿದ್ದು, ಖಾಸಗಿ ಕಂಪೆನಿ, ಉದ್ಯಮಗಳು ಹೆಚ್ಚಿವೆ, ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳು ರಾಜ್ಯದಲ್ಲಿ ಅಧಿಕವಾಗಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಡಾ.ಸರೋಜಿನಿ ಮಹಿಷಿ ವರದಿ ಪರಿಷ್ಕರಣೆಗೆ ಸಮಿತಿ ರಚಿಸಿತ್ತು. ಸಮಿತಿ ಬದಲಾದ ಸ್ಥಿತಿಗನುಗುವಾಗಿ ಸುಮಾರು 14 ಅಂಶಗಳ ವರದಿ ನೀಡಿದ್ದು, ಅದರ ಅನುಷ್ಠಾನ ಅತ್ಯವಶ್ಯ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪರಿಷ್ಕೃತ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಅಮೃತ ಇಜಾರಿ, ಮಹೇಶ ಪತ್ತಾರ ಸೇರಿದಂತೆ ಅನೇಕರು‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next