Advertisement

ಹುಬ್ಬಳ್ಳಿ: ಬಾಲಕನಿಗೆ ಬೆತ್ತಲೆ ಪೂಜೆ ಮಾಡಿದ ವಿಕೃತರು

05:30 PM Oct 03, 2022 | Team Udayavani |

ಕೊಪ್ಪಳ: ನಿಮ್ಮಪ್ಪನ ಸಾಲ ತೀರಬೇಕೆಂದರೆ ನೀವು ಶ್ರೀಮಂತರಾಗಬೇಕೆಂದರೆ ಬೆತ್ತಲೇ ಪೂಜೆ ಮಾಡಿದರೆ ನಿಮ್ಮ ಸಾಲವೆಲ್ಲ ತೀರಿ ಹೋಗುತ್ತದೆ ಎಂದು ಪುಸಲಾಯಿಸಿ  ಅಪ್ರಾಪ್ತ ವಯಸ್ಕ ಬಾಲಕನಿಗೆ ಹುಬ್ಬಳ್ಳಿಯ ತಿಮ್ಮ ಸಾಗರದ ವಾಲ್ಮೀಕಿ ಭವನದಲ್ಲಿ ಬೆತ್ತಲೆ ಪೂಜೆ ಮಾಡಿಸಿ ವಿಡಿಯೋ ಮಾಡಿ ಜೀವನ ಬೆದರಿಕೆ ಹಾಕಿದ ಹೇಯ ಪ್ರಕರಣ ಬೆಳಕಿಗೆ ಬಂದಿದೆ.

Advertisement

ತಾಲೂಕಿನ ಹಾಸಗಲ್ ಗ್ರಾಮದ ಶರಣಪ್ಪ ತಳವಾರ, ವಿರುಪನಗೌಡ ಗೌಡ್ರ, ಶರಣಪ್ಪ ಓಜಿನಳ್ಳಿ ಎನ್ನುವ ವ್ಯಕ್ತಿಗಳು ಎರಡುವರೆ ತಿಂಗಳ ಹಿಂದೆ ಗ್ರಾಮದ ಚನ್ನಬಸಪ್ಪ ಅಳ್ಳಳ್ಳಿ ಅವರ 15 ವರ್ಷದ ಪುತ್ರ ಸಂದೀಪ (ಹೆಸರು ಬದಲಿಸಿದೆ) ನನ್ನು ಹುಬ್ಬಳ್ಳಿಯಲ್ಲಿ ಜೆಜೆಎಂ ಕೆಲಸಕ್ಕೆ ಕಳುಹಿಸಿಕೊಡು ಎಂದು ಕೇಳಿದ್ದಾರೆ. ಚೆನ್ನಬಸಪ್ಪ ಅವರು ನನ್ನ ಪುತ್ರನು ಇನ್ನೂ ಅಪ್ತಾಪ್ತನಿದ್ದು ಆತನನ್ನು ಕೆಲಸಕ್ಕೆ ಕಳಿಸುವುದಿಲ್ಲ ಎಂದಿದ್ದಾರೆ.

ಕೆಲಸ ಚೆನ್ನಾಗಿದೆ ಕಳಿಸಿಕೊಡು ಎಂದು ಮತ್ತೆ ಪೀಡಿಸಿದ ಕಾರಣ ಆತನನ್ನು ಕಳಿಸಿಕೊಟ್ಟಿದ್ದಾರೆ. ಆ ಬಾಲಕನನ್ನು ಹುಬ್ಬಳ್ಳಿಯ ತಿಮ್ಮಸಾಗರಕ್ಕೆ ಕರೆದುಕೊಂಡು ತೆರಳಿದ್ದ ಮೂವರು ಆರೋಪಿತರು ತಿಮ್ಮಸಾಗರದ ವಾಲ್ಮೀಕಿ ಭವನದಲ್ಲಿ ರಾತ್ರಿ ವೇಳೆ, ನಿಮ್ಮ ಅಪ್ಪನ ಸಾಲ ತೀರಬೇಕೆಂದರೆ, ನಿಮ್ಮ ಸಾಲ ಯಾರೂ ಕೇಳಬಾರದು ಎಂದರೆ ನೀವು ಶ್ರೀಮಂತರಾಗಬೇಕು. ಎಂಎಲ್‌ಎ ಆಗಬೇಕೆಂದರೆ ನೀನು ಬೆತ್ತಲೆ ಪೂಜೆಯನ್ನು ಮಾಡಬೇಕೆಂದು ಬಾಲಕನ ಮನಸ್ಸು ಕೆಡಿಸಿದ್ದಾರೆ. ಬಾಲಕನನ್ನು ಒತ್ತಾಯ ಪೂರ್ವಕ ಬೆತ್ತಲೆ ಮಾಡಿ ಆತನ ಮೈಗೆಲ್ಲಾ
ವಿಭೂತಿ, ಕುಂಕುಮ ಹಚ್ಚಿ, ನಿಂಬೆ ಹಣ್ಣಿನ ಸರವನ್ನು ಕೊರಳಲ್ಲಿ ಹಾಕಿದ್ದಾರೆ. ಬಾಲಕನ ತಲೆಗೆ ಶರಣಪ್ಪ ಎನ್ನುವ ವ್ಯಕ್ತಿ ನಿಂಬೆಹಣ್ಣಿನ ರಸವನ್ನು ಹಿಂಡಿದ್ದಾನೆ. ಬಾಲಕ ಬೆತ್ತಲೆಯಾಗಿರುವಾಗ ಮರ್ಮಾಂಗವನ್ನು ಮುಟ್ಟಿದ್ದಾರೆ. ಇದೆಲ್ಲವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ನೀನು ಹೀಗೆ ಬೆತ್ತಲೆ ಸೇವೆ ಮಾಡುತ್ತಲೇ ಇರಬೇಕು ಹೇಳಿದ್ದಾರೆ. ಹಲವು ಬಾರಿ ಬೆತ್ತಲೆ ವಿಡಿಯೋ ಚಿತ್ರಿಕರಿಸಿದ್ದಾರೆ. ಇದನ್ನು ಯಾರಿಗಾದರೂ ಹೇಳಿದರೆ ನಿನ್ನ ಹಾಗೂ ನಿಮ್ಮಪ್ಪನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಬಾಲಕನ ಬೆತ್ತಲೆ ವೀಡಿಯೋಗಳು ಗ್ರಾಮದ ವ್ಯಕ್ತಿಯೋರ್ವನ ಬಳಿ ಹರಿದಾಡಿವೆ. ತಂದೆ ಚನ್ನಬಸಪ್ಪ ಅಳ್ಳಳ್ಳಿಗೂ ಈ ವಿಷಯ ಗೊತ್ತಾಗಿ ಮಗನನ್ನು ಭಾನುವಾರವಷ್ಟೇ ಊರಿಗೆ ಕರೆಯಿಸಿ ಕೇಳಿದ್ದಾನೆ.

ಆಗ ಮಗನು ತನಗಾಗಿರುವ ನೋವಿನ ಬಗ್ಗೆ ಹೆತ್ತವರ ಮುಂದೆ ಎಲ್ಲವನ್ನೂ ಬಾಯಿ ಬಿಟ್ಟಿದ್ದಾನೆ. ಇದರಿಂದ ತಂದೆ ಚನ್ನಬಸಪ್ಪ ಅಳ್ಳಳ್ಳಿ ಅವರು ಶರಣಪ್ಪ ತಳವಾರ, ವಿರುಪನಗೌಡ ಹಾಗೂ ಶರಣಪ್ಪ ಓಜಿನಳ್ಳಿ ಎನ್ನುವ ಮೂವರ ವಿರುದ್ದವೂ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನನ್ನ ಮಗನ ಬೆತ್ತಲೆ ವಿಡಿಯೋ ಮಾಡಿ ಹರಿ ಬಿಟ್ಟಿದ್ದು, ವಾಮಾಚಾರದಂತೆ ಆತನಿಗೆ ಪೂಜೆ ಮಾಡಲಾಗಿದೆ. ಅಲ್ಲದೇ ಮಗನಿಗೆ ಜೀವ ಬೆದರಿಕೆ ಹಾಕಲಾಗಿದೆ ಎನ್ನುವ ಹಲವು ಕಾರಣ ನೀಡಿ ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

Advertisement

ಅಪ್ತಾಪ್ತ ಬಾಲಕನನ್ನು ಅತ್ಯಂತ ವಿಕೃತಿಯ ರೀತಿಯಲ್ಲಿ ಬೆತ್ತಲೆ ಪೂಜೆ ಮಾಡಿಸಿದ್ದು ನಿಜಕ್ಕೂ ನಾಗರಿಕೆ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಆ ಬಾಲಕನನ್ನು ವಾಮಾಚಾರಕ್ಕೆ ಬಳಕೆ ಮಾಡಲಾಗಿದೆಯೋ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಸೇರಿದಂತೆ ಕುಟುಂಬ ವರ್ಗ ಒತ್ತಾಯ ಮಾಡಿದೆ.

ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ಮೂವರು ಅಪ್ತಾಪ್ತನನ್ನು ಹುಬ್ಬಳ್ಳಿಗೆ ಜೆಜೆಎಂ ಕೆಲಸಕ್ಕೆ ಕರೆದುಕೊಂಡು ಹೋಗಿ ಬೆತ್ತಲೆ ಪೂಜೆ ಮಾಡಿರುವ ವಿಷಯದ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಷಯ ನಮ್ಮ ಗಮನಕ್ಕೆ ಬಂದಾಕ್ಷಣ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದೇವೆ. ಮೂವರ ಶೋಧ ಕಾರ್ಯ ನಡೆದಿದೆ. ಈ ಪ್ರಕರಣ ಹುಬ್ಬಳ್ಳಿ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಿದ್ದೇವೆ ಎಂದು ಕೊಪ್ಪಳ ಎಸ್ಪಿ ಅರುಣಾಂಗ್ಷು ಗಿರಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next