ಧಾರವಾಡ: ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ಗಂಭೀರವಾಗಿ ಇರುವುದು ಸಾಮಾನ್ಯ. ಆದರೆ ಟಗರು ಸಿನೆಮಾ ಹಾಡಿಗೆ ವೇದಿಕೆ ಮೇಲೆ ಹಿರೋನಂತೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು.
ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಪಾಲಿಕೆ ಕಮಿಶನರ್ ಗೋಪಾಲಕೃಷ್ಣ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಅವರ ಪ್ರತಿ ಹೆಜ್ಜೆಯನ್ನು ಅನುಕರಣೆ ಮಾಡಿ ನೆರೆದಿದ್ದ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರ ಡ್ಯಾನ್ಸ್ ಗೆ ಇತರರು ಸ್ಟೆಪ್ ಹಾಕುವ ಮೂಲಕ ಸಾಥ್ ನೀಡಿದರು.
ಇದನ್ನೂ ಓದಿ:ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ
Related Articles
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಡ್ಯಾನ್ಸಗೆ ಎಲ್ಲರೂ ಫಿದಾ ಆಗಿದ್ದು, ಸ್ಥಳೀಯ ವಾಟ್ಸಆಪ್ ಗ್ರೂಪ್ ನಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ.